ಸಿಡಿ ವಿವಾದವು ಬಿಜೆಪಿ ಮುಕ್ತ ರಾಜ್ಯಕ್ಕೆ ಮುನ್ನುಡಿ ಬರೆದಿದೆ | ಭವಿಷ್ಯ ನುಡಿದ ಪ್ರಿಯಾಂಕ್ ಖರ್ಗೆ
14/01/2021
ಕಲಬುರಗಿ: ಸಚಿವ ಸಂಪುಟ ವಿಸ್ತರಣೆಯ ಬೆನ್ನಲ್ಲೇ ಸಿಡಿ ವಿವಾದ ಸೃಷ್ಟಿಯಾಗಿದ್ದು, ಇದು ಬಿಜೆಪಿ ಮುಕ್ತ ಕರ್ನಾಟಕಕ್ಕೆ ನಾಂದಿ ಹಾಡಲಿದೆ ಎಂದು ಚಿತ್ತಾಪುರ ಕ್ಷೇತ್ರದ ಶಾಸಕ, ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ಭವಿಷ್ಯ ನುಡಿದಿದ್ದಾರೆ.
ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಎದ್ದಿರುವ ಸಿಎಂ ಯಡಿಯೂರಪ್ಪನವರ ಸಿಡಿ ವಿವಾದಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ಅವರು, ಕರ್ನಾಟಕ ಕೇವಲ ಬಿಎಸ್ ವೈ ಮುಕ್ತ ಬಿಜೆಪಿ ಮಾತ್ರವಲ್ಲ, ಬಿಜೆಪಿ ಮುಕ್ತ ರಾಜ್ಯ ಆಗುವ ಮುನ್ನುಡಿ ಕಂಡು ಬಂದಿದೆ ಎಂದು ಟ್ವೀಟ್ ಮಾಡಿದ್ದಾರೆ.
ಎಂದಿನಂತೆ ಮಂತ್ರಿಮಂಡಲದಲ್ಲಿ ಕಲಬುರಗಿ ಜಿಲ್ಲೆಗೆ ಪ್ರಾತಿನಿಧ್ಯ ದೊರಕದಿರುವುದು ಹಾಗೂ ಇಡೀ ಕಲ್ಯಾಣ ಕರ್ನಾಟಕ ದಿಂದ ಅಶಕ್ತ ಭಾವನೆಯಿಂದ ನೋಡಿರುವುದು ಪ್ರಾತಿನಿಧ್ಯ ನೀಡದಿರುವುದು ಹಾಗೂ ಬಿಜೆಪಿಯು ಕಲ್ಯಾಣ ಕರ್ನಾಟಕದ ಈ ಭಾಗವನ್ನು ಪ್ರಮುಖವೆಂದು ಪರಿಗಣಿಸಿಲ್ಲ ಎನ್ನುವುದನ್ನು ನಿರೂಪಿಸುತ್ತದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.