ಸಿಡಿಯಲ್ಲಿರುವ ಯುವತಿ ಯಾವಾಗ ಅಜ್ಞಾತ ಸ್ಥಳದಿಂದ ಬರಲಿದ್ದಾಳೆ | ವಕೀಲರು ನೀಡಿದ ಮಾಹಿತಿ ಏನು? - Mahanayaka
5:25 PM Wednesday 11 - December 2024

ಸಿಡಿಯಲ್ಲಿರುವ ಯುವತಿ ಯಾವಾಗ ಅಜ್ಞಾತ ಸ್ಥಳದಿಂದ ಬರಲಿದ್ದಾಳೆ | ವಕೀಲರು ನೀಡಿದ ಮಾಹಿತಿ ಏನು?

jagadeesh
26/03/2021

ಬೆಂಗಳೂರು: ಇಲ್ಲಿಯವರೆಗೆ ವಿಡಿಯೋಗಳನ್ನು ಬಿಡುಗಡೆ ಮಾಡಿ ಸಾರ್ವಜನಿಕ ಸಂಪರ್ಕದಲ್ಲಿದ್ದ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಯುವತಿ ಇನ್ನೆರಡು ದಿನಗಳಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳಲಿದ್ದಾರೆ.

ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ದಿನಕ್ಕೊಂದರಂತೆ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ.  ಇಂದು ರಮೇಶ್ ಜಾರಕಿಹೊಳಿ ವಿರುದ್ಧ ಖ್ಯಾತ ವಕೀಲರಾದ ಜಗದೀಶ ಮಹಾದೇವನ್ ಅವರ ಮೂಲಕ ಯುವತಿ ದೂರು ದಾಖಲಿಸಿದ್ದಾಳೆ.

ದೂರು ದಾಖಲಾದ ಬಳಿಕ ವಕೀಲರಾದ ಜಗದೀಶ ಮಹಾದೇವನ್, ಇನ್ನೆರಡು ದಿನಗಳಲ್ಲಿ ಯುವತಿ ಬರಲಿದ್ದಾರೆ ಎಂದು ಹೇಳಿರುವ ಬಗ್ಗೆ ವರದಿಯಾಗಿದೆ. ಯುವತಿ ತಲೆಮರೆಸಿಕೊಂಡಿದ್ದರಿಂದ ಸ್ವಲ್ಪ ನಿರಾಳವಾಗಿದ್ದ ರಮೇಶ್ ಜಾರಕಿಹೊಳಿ ಅವರಿಗೆ ಇದೀಗ ಮತ್ತೆ ಸಂಕಷ್ಟ ಆರಂಭವಾಗಿದೆ.

ಇನ್ನೂ ರಮೇಶ್ ಜಾರಕಿಹೊಳಿ ವಿರುದ್ಧ ಯುವತಿ ದೂರು ನೀಡಿದ್ದು, ಯಾವ ಪ್ರಕರಣ ರಮೇಶ್ ಮೇಲೆ ದಾಖಲಾಗಲಿದೆ ಎನ್ನುವುದು ತಿಳಿದು ಬಂದಿಲ್ಲ.ಅಧಿಕಾರ ದುರುಪಯೋಗ, ಅತ್ಯಾಚಾರ ಪ್ರಕರಣ ದಾಖಲಾಗುವ ಸಾಧ್ಯತೆಗಳೂ ಇವೆ ಎಂದು ಹೇಳಲಾಗುತ್ತಿದೆ.

ತನ್ನ ಸ್ವಂತ ಮಗಳನ್ನು 30 ಜನರಿಂದ ರೇಪ್ ಮಾಡಿಸಿದ ತಾಯಿ!

ಇತ್ತೀಚಿನ ಸುದ್ದಿ