ಕದನ ವಿರಾಮ ವಿಚಾರ: ಹಮಾಸ್ ಮತ್ತು ಇಸ್ರೇಲ್ ನಡುವೆ ಮಾತುಕತೆ ಪುನರ್ ಆರಂಭ
ಕದನ ವಿರಾಮ ಏರ್ಪಡಿಸುವ ಉದ್ದೇಶದಿಂದ ಹಮಾಸ್ ಮತ್ತು ಇಸ್ರೇಲ್ ನಡುವೆ ಮಾತುಕತೆ ಪುನರ್ ಆರಂಭವಾಗಿದೆ ಎಂದು ಹಮಾಸ್ ನ ಉನ್ನತ ನಾಯಕ ಬಸ್ಸಾಂ ನಈಮ್ ಹೇಳಿದ್ದಾರೆ. 14 ತಿಂಗಳುಗಳಿಂದ ನಡೆಯುತ್ತಿರುವ ಘರ್ಷಣೆಯು ಕೊನೆಗೊಳ್ಳುವ ಸನಿಹದಲ್ಲಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
ಶಾಶ್ವತವಾದ ಕದನ ವಿರಾಮ, ಇಸ್ರೇಲಿ ಸೇನೆ ಗಾಝಾದಿಂದ ಸಂಪೂರ್ಣವಾಗಿ ಹಿಂದಕ್ಕೆ ಸರಿಯುವುದು, ಗಾಝಾ
ದಿಂದ ಪಲಾಯನ ಮಾಡಿದವರಿಗೆ ಮರಳಿ ಬರಲು ಅವಕಾಶ ಒದಗಿಸುವುದು ಮುಂತಾದ ಬೇಡಿಕೆಗಳಲ್ಲಿ ಹಮಾಸ್ ಗಟ್ಟಿಯಾಗಿ ನಿಂತಿದೆ. ಈ ಹಿಂದಿನ ಸಂಧಾನ ಸಭೆಗಳಲ್ಲಿ ಕೂಡ ಹಮಾಸ್ ಈ ಬೇಡಿಕೆಯನ್ನು ಮುಂದಿಟ್ಟಿತ್ತು.
ಆದರೆ ಗಾಝಾದಿಂದ ತನ್ನ ಸೇನೆಯನ್ನು ಇಸ್ರೆಲ್ ಹಿಂದೆತೆಗೆದುಕೊಳ್ಳುವ ವಿಷಯದಲ್ಲಿ ಭಿನ್ನಾಭಿಪ್ರಾಯ ಹಾಗೆಯೇ ಉಳಿದಿದೆ ಎಂದು ಅವರು ಹೇಳಿದ್ದಾರೆ.
ನಾವು ಹೊಸ ಬೇಡಿಕೆಯನ್ನೇನೂ ಇಟ್ಟಿಲ್ಲ. ಈ ಹಿಂದಿನ ಬೇಡಿಕೆಯನ್ನೇ ಮುಂದುವರಿಸುತ್ತಾ ಇದ್ದೇವೆ ಇಸ್ರೇಲ್ ತನ್ನ ಸೇನೆಯನ್ನು ಹಿಂತೆಗೆದುಕೊಳ್ಳುವುದು ಮತ್ತು ಈಜಿಪ್ಟ್ ಜೊತೆಗಿರುವ ರಫಾ ಗಡಿದಾಟನ್ನು ತೆರೆಯುವುದು ನಮ್ಮ ಬೇಡಿಕೆಗಳಲ್ಲಿ ಸೇರಿದೆ ಎಂದವರು ಹೇಳಿದ್ದಾರೆ. ಕದನ ವಿರಾಮ ಏರ್ಪಟ್ಟರೆ ಆ ಬಳಿಕ ಗಾಝಾದ ಆಡಳಿತದ ಬಗ್ಗೆ ಪತಹ್ ಪಕ್ಷದೊಂದಿಗೆ ನಾವು ಒಮ್ಮತಕ್ಕೆ ಬಂದಿದ್ದೇವೆ ಎಂದು ಅವರು ಹೇಳಿದ್ದಾರೆ. ಗಾಝಾದ ಆಡಳಿತವನ್ನು ಫತಹ್ ಗೆ ಬಿಟ್ಟುಕೊಡಲು ಹಮಾಸ್ ತಯಾರಿದೆ. ಆದರೆ ಇಸ್ರೇಲ್ ಅತಿಕ್ರಮಣದ ವಿರುದ್ಧ ನಮ್ಮ ಪ್ರತಿರೋಧವನ್ನು ನಾವು ನಿಲ್ಲಿಸುವುದಿಲ್ಲ. ಅತಿಕ್ರಮಣವನ್ನು ವಿರೋಧಿಸುವುದಕ್ಕೆ ಫೆಲೆಸ್ತೀನಿಯರಿಗೆ ಹಕ್ಕಿದೆ ಎಂದವರು ಹೇಳಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj