ಈ ಜೇನು ತುಪ್ಪದ ಬೆಲೆ ಕೆ.ಜಿ.ಗೆ 8 ಲಕ್ಷಕ್ಕೂ ಅಧಿಕ: ಇದರಲ್ಲಿ ಅಂತಹ ವಿಶೇಷತೆ ಏನಿದೆ?
ಜೇನುತುಪ್ಪವು ಹಲವಾರು ಔಷಧೀಯ ಗುಣಗಳನ್ನು ಹೊಂದಿರುವ ವಸ್ತುವಾಗಿದೆ. ಜೇನುತುಪ್ಪವನ್ನು ಆಹಾರವಾಗಿ ಮಾತ್ರವಲ್ಲದೆ, ಅನೇಕ ಕಾಯಿಲೆಗಳಿಗೆ ಔಷಧಿಯಾಗಿಯೂ ಬಳಸಲಾಗುತ್ತಿದೆ. ಹಾಗಾಗಿ ಜೇನುತುಪ್ಪಕ್ಕೆ ಬೇಡಿಕೆ ಹೆಚ್ಚಿದೆ.
“ಸೆಂಟೌರಿ ಹನಿ” (Centauri Honey) ಜೇನು ಬ್ರಾಂಡ್ ಈಗ ವಿಶ್ವದ ಅತ್ಯಂತ ದುಬಾರಿ ಜೇನುತುಪ್ಪ ಎಂಬ ದಾಖಲೆಯನ್ನು ಹೊಂದಿದೆ. ಸೆಂಟೌರಿ ಹನಿಯ ಬ್ರಾಂಡ್ ಮೂರು ವರ್ಷಗಳ ಹಿಂದೆ ಪ್ರಾರಂಭಿಸಲಾಯಿತು. ಈ ಜೇನುತುಪ್ಪವು ಸಾಕಷ್ಟು ಔಷಧೀಯ ಗುಣಗಳನ್ನು ಹೊಂದಿದೆ ಎಂದು ವರದಿಯಾಗಿದೆ. ಒಂದು ಕಿಲೋ ಜೇನುತುಪ್ಪದ ಬೆಲೆ ಎಂಟು ಲಕ್ಷಕ್ಕೂ ಹಣಕ್ಕೆ ಮಾರಾಟವಾಗುತದೆ.
ಇದು ಫ್ಲೇವನಾಯ್ಡ್ ಗಳು, ಆಂಟಿಆಕ್ಸಿಡೆಂಟ್ ಗಳು, ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್ ಅನ್ನು ಇದು ಒಳಗೊಂಡಿದೆ. ಈ ಜೇನುತುಪ್ಪವು ಗಾಢ ಕಂದು ಬಣ್ಣ ಮತ್ತು ಕಹಿ ರುಚಿಯನ್ನು ಹೊಂದಿರುತ್ತದೆ. ಸಮುದ್ರ ಮಟ್ಟದಿಂದ 2,500 ಮೀಟರ್ ಎತ್ತರದಲ್ಲಿರುವ ಕಪ್ಪು ಸಮುದ್ರ ಪ್ರದೇಶದ ಬೆಟ್ಟಗಳಲ್ಲಿ ಈ ಜೇನುತುಪ್ಪವನ್ನು ಉತ್ಪಾದಿಸಲಾಗುತ್ತದೆ. ಈ ಜೇನುಸಾಕಣೆಯ ಜೇನುನೊಣಗಳು ಮಾನವ ವಸಾಹತುಗಳಿಂದ ಸುಮಾರು 50 ಕಿ.ಮೀ. ದೂರದಲ್ಲಿ ಸಂತಾನೋತ್ಪತ್ತಿ ಮಾಡುತ್ತವೆ.
ಸೆಂಟೌರಿ ಹನಿ ಇಂದು ವಿಶ್ವದ ಅತ್ಯಂತ ಬೇಡಿಕೆಯ ಬ್ರ್ಯಾಂಡ್ ಗಳಲ್ಲಿ ಒಂದಾಗಿದೆ. ಪ್ರಪಂಚದ ವಿವಿಧ ಭಾಗಗಳಲ್ಲಿ ಇದಕ್ಕೆ ಬೇಡಿಕೆಯಿದೆ. ಇದರ ಗ್ರಾಹಕರು ಸೆಲೆಬ್ರಿಟಿಗಳು ಮತ್ತು ರಾಜಕಾರಣಿಗಳಿಂದ ಹಿಡಿದು ಉದ್ಯಮಿಗಳವರೆಗೆ ಇದ್ದಾರೆ. ವರ್ಷದಲ್ಲಿ ಮೂವತ್ತು ಕೆ.ಜಿ. ಜೇನುತುಪ್ಪವನ್ನು ಉತ್ಪಾದಿಸಲಾಗುತ್ತದೆ. ಸೆಂಟೌರಿ ಜೇನುತುಪ್ಪವು ಸಾಮಾನ್ಯ ಜೇನು ಉತ್ಪಾದನಾ ವಿಧಾನಕ್ಕಿಂತ ಭಿನ್ನವಾಗಿದೆ ಮತ್ತು ಉತ್ಪಾದಿಸಲು ಹೆಚ್ಚು ಕಷ್ಟಕರವಾಗಿದೆ. ಜೇನುತುಪ್ಪದ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ನಿಯಮಗಳನ್ನು ಅನುಸರಿಸಿ ಜೇನುತುಪ್ಪವನ್ನು ಉತ್ಪಾದಿಸುತ್ತಾರೆ.
ವರ್ಷಕ್ಕೆ ಒಮ್ಮೆ ಮಾತ್ರ ಜೇನು ಕೊಯ್ಲು. ಬೆಟ್ಟದ ತುದಿಯಲ್ಲಿರುವ ಔಷಧೀಯ ಸಸ್ಯಗಳಿಂದಲೂ ಜೇನುನೊಣಗಳು ಜೇನುತುಪ್ಪವನ್ನು ಸಂಗ್ರಹಿಸುತ್ತವೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1duNIQRfXnJcfQKWPzNqD
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka