ಸೆಂಟ್ರಲ್ ರೈಲ್ವೆ ಇಲಾಖೆಯಲ್ಲಿ 2,424 ಹುದ್ದೆಗಳಿವೆ: ಅರ್ಜಿ ಸಲ್ಲಿಸೋದು ಹೇಗೆ? - Mahanayaka
2:10 PM Thursday 17 - October 2024

ಸೆಂಟ್ರಲ್ ರೈಲ್ವೆ ಇಲಾಖೆಯಲ್ಲಿ 2,424 ಹುದ್ದೆಗಳಿವೆ: ಅರ್ಜಿ ಸಲ್ಲಿಸೋದು ಹೇಗೆ?

central railway
19/07/2024

ಕೇಂದ್ರ ರೈಲ್ವೆ ನೇಮಕಾತಿ ಮಂಡಳಿಯು, ಸೆಂಟ್ರಲ್ ರೈಲ್ವೆ ಯಲ್ಲಿ ಅಗತ್ಯ ಇರುವ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲು, ಭಾರತ ದೇಶಾದ್ಯಂತ ಕರ್ತವ್ಯ ನಿರ್ವಹಿಸಲು ಅರ್ಹ ಅಭ್ಯರ್ಥಿಗಳಿಂದ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಸೆಂಟ್ರಲ್ ರೈಲ್ವೆಯಲ್ಲಿ ನೇಮಕಾತಿ ಮಾಡಿಕೊಳ್ಳುತ್ತಿರುವಂತಹ ಆಪ್ರೆಂಟಿಸ್ ಹುದ್ದೆಗಳ ಭರ್ತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಅಗತ್ಯವಿರುವ ಅರ್ಹತೆಗಳು, ಅರ್ಜಿ ಸಲ್ಲಿಸುವುದು ಹೇಗೆ ಎಂಬ ಮಾಹಿತಿ ಸೇರಿದಂತೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿರುವುದರಿಂದ, ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಲೇಖನವನ್ನು ಕೊನೆಯವರೆಗೂ ಓದಿ ನಂತರ ಅರ್ಜಿ ಸಲ್ಲಿಸಿ.

Central Railway recruitment 2024: ಯಾವ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತದೆ ಮತ್ತು ಕರ್ತವ್ಯ ಸ್ಥಳ :

ಕೇಂದ್ರ ರೈಲ್ವೆ ಇಲಾಖೆ ನೇಮಕಾತಿ ಮಂಡಳಿ ರೈಲ್ವೆ ಇಲಾಖೆಯಲ್ಲಿ ಅಗತ್ಯವಿರುವ 2424 ಅಪ್ರಂಟಿಸ್ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳುತ್ತಿದೆ. ಈ ನೇಮಕಾತಿಯಲ್ಲಿ ಆಯ್ಕೆಯಾಗಿರುವ ಅಭ್ಯರ್ಥಿಗಳು ಭಾರತ ದೇಶಾದ್ಯಂತ ನಿಗದಿಪಡಿಸಿದ ಸ್ಥಳದಲ್ಲಿ  ಕರ್ತವ್ಯ ನಿರ್ವಹಿಸಬೇಕು.

 ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಈ ಕೆಳಗಿನ ಶೈಕ್ಷಣಿಕ ಅರ್ಹತೆಗಳನ್ನು ಹೊಂದಿರಬೇಕು :

ಅರ್ಜಿ ಸಲ್ಲಿಸುವವರು ಮಾನ್ಯತೆ ಪಡೆದ ವಿದ್ಯಾ ಸಂಸ್ಥೆಯಿಂದ SSLC ಪಾಸ್ ಆಗಿದ್ದು ಅದರ ಜೊತೆಗೆ ಖಾಲಿ ಹುದ್ದೆಗಳ ಆಯಾ ಟ್ರೇಡ್ ನಲ್ಲಿ ಐಟಿಐ ಮುಗಿಸಿರಬೇಕು.

ವಯೋಮಾನ / Age Limit : ಈ ನೇಮಕಾತಿಗೆ ನೀವು ಅರ್ಜಿ ಸಲ್ಲಿಸುವುದಾದರೆ ಕನಿಷ್ಠ 15 ವರ್ಷ ಹಾಗೂ ಗರಿಷ್ಠ 24 ವರ್ಷ ಮೇಲಿರಬಾರದು. ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ ಐದು ವರ್ಷ ಹಾಗೂ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ ಮೂರು ವರ್ಷಗಳ ಸಡಿಲಿಕೆ ಇರಲಿದೆ.

ನಿಗದಿಪಡಿಸಿದ ಅರ್ಜಿ ಶುಲ್ಕ :

* ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಮಹಿಳಾ ಅಭ್ಯರ್ಥಿಗಳು ಹಾಗೂ ವಿಶೇಷ ಚೇತನ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವಿಲ್ಲ.

* ಇವರನ್ನು ಹೊರೆತುಪಡಿಸಿ ಉಳಿದ ವರ್ಗದ ಅಭ್ಯರ್ಥಿಗಳು 100ರೂ. ಅರ್ಜಿ ಶುಲ್ಕ ಪಾವತಿಸಬೇಕು.

ನೇಮಕಾತಿಗೆ ನಿಗದಿಪಡಿಸಿದ ದಿನಾಂಕಗಳು :

* ಆನ್ಲೈನ್ ಅರ್ಜಿ ನೋಂದಣಿಗೆ ಆರಂಭ ದಿನಾಂಕ – ಜುಲೈ 16, 2024

* ಆನ್ಲೈನ್ ಅರ್ಜಿ ನೋಂದಣಿಗೆ ಕೊನೆಯ ದಿನಾಂಕ – ಆಗಸ್ಟ್ 15, 2024

ಅರ್ಜಿ ಸಲ್ಲಿಸುವ ಲಿಂಕ್: https://rrccr.com/tradeapp/login


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ