ರೇಷ್ಮೆ ಮಂಡಳಿಯಲ್ಲಿ ಭರ್ಜರಿ 1 ಲಕ್ಷಕ್ಕೂ ಅಧಿಕ ಸಂಬಳ ವೇತನವಿರುವ ಹುದ್ದೆಗಳ ನೇಮಕಾತಿ : ಅರ್ಜಿ ಸಲ್ಲಿಕೆ ಹೇಗೆ? - Mahanayaka
6:07 PM Thursday 12 - December 2024

ರೇಷ್ಮೆ ಮಂಡಳಿಯಲ್ಲಿ ಭರ್ಜರಿ 1 ಲಕ್ಷಕ್ಕೂ ಅಧಿಕ ಸಂಬಳ ವೇತನವಿರುವ ಹುದ್ದೆಗಳ ನೇಮಕಾತಿ : ಅರ್ಜಿ ಸಲ್ಲಿಕೆ ಹೇಗೆ?

central silk board
29/08/2024

Central Silk Board Recruitment 2024 – ಕೇಂದ್ರ ರೇಷ್ಮೆ ಮಂಡಳಿ ಇಲಾಖೆಯಲ್ಲಿ ಖಾಲಿ ಇರುವಂತಹ ವಿವಿಧ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲು ಇಲಾಖೆಯು ಇದೀಗ ಅಧಿಕೃತ ಅಧಿಸೂಚನೆಯನ್ನು ಪ್ರಕಟಿಸಿದೆ. ಆಯ್ಕೆಯಾದವರಿಗೆ ಭರ್ಜರಿ 56,000ರೂ. ನಿಂದ 1,77,500ರೂ. ವರೆಗೆ ವೇತನ ಸಿಗಲಿದ್ದು, ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ..

ಬೆಂಗಳೂರಿನ ಮಡಿವಾಳದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ರೇಷ್ಮೆ ಮಂಡಳಿ ಇಲಾಖೆಯಲ್ಲಿ ಭರ್ಜರಿ 122 ಹುದ್ದೆಗಳು ಖಾಲಿ ಇವೆ. ಈ ಮಂಡಳಿಯಲ್ಲಿ ಸದ್ಯಕ್ಕೆ ಸ್ನಾತಕೋತ್ತರ ಪದವಿದರರನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಯಾವ ಹುದ್ದೆಗಳು ಖಾಲಿ ಇವೆ ಮತ್ತು ನೇಮಕಾತಿಯ ಇತರೆ ಪ್ರಮುಖ ಮಾಹಿತಿಯನ್ನು ಕೆಳಗೆ ನೀಡಲಾಗಿದ್ದು ಅರ್ಜಿ ಸಲ್ಲಿಸುವವರು ಸಂಪೂರ್ಣ ಓದಿ ನಂತರ ಅರ್ಜಿ ಸಲ್ಲಿಸಿ.

Central Silk Board Recruitment 2024 – Vacancy details :

ರೇಷ್ಮೆ ಮಂಡಳಿಯಲ್ಲಿ ಕ್ರಾಪ್ ಸೈನ್ಸ್, ವೆಟನರಿ ಅಂಡ್ ಅನಿಮಲ್ ಸೈನ್ಸ್, ನ್ಯಾಚುರಲ್ ರಿಸೋರ್ಸ್ ಮ್ಯಾನೇಜ್ಮೆಂಟ್, ಅಗ್ರಿಕಲ್ಚರ್ ಎಕನಾಮಿಕ್ಸ್ ಮತ್ತು ಅಗ್ರಿ ಬಿಸಿನೆಸ್ ಮ್ಯಾನೇಜ್ಮೆಂಟ್, ಇಂಜಿನಿಯರಿಂಗ್ ಟೆಕ್ನಾಲಜಿ ಸೇರಿದಂತೆ ವಿವಿಧ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.

ಶೈಕ್ಷಣಿಕ ಅರ್ಹತೆಗಳ ಮಾಹಿತಿ :

ಈ ನೇಮಕಾತಿಗೆ ಅರ್ಜಿ ಸಲ್ಲಿಸ ಬಯಸುವವರು ವಿಜ್ಞಾನ ಅಥವಾ ಕೃಷಿ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿರಬೇಕು. ಇದರ ಜೊತೆಗೆ ಅರ್ಜಿ ಸಲ್ಲಿಸುವವರು ನಿಗದಿತ ವಿಷಯದಲ್ಲಿ ICAR AICE – JRF/ SRF PhD 2024 ಪಡೆದಿರಬೇಕು ಅಥವಾ ವ್ಯಾಸಂಗಕ್ಕಾಗಿ ಪ್ರವೇಶಾತಿ ಪಡೆದಿರುವವರು ಕೂಡ ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ.

ಅಭ್ಯರ್ಥಿಗಳನ್ನು ಹೇಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ?

ರೇಷ್ಮೆ ಮಂಡಳಿ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಸಂದರ್ಶನದ ಮುಖಾಂತರ ಆಯ್ಕೆ ಮಾಡಿಕೊಳ್ಳಲಾಗುವುದು. ಅದೇ ರೀತಿ ನೇಮಕಾತಿಯಲ್ಲಿ ಆಯ್ಕೆ ಆದವರಿಗೆ ಬೆಂಗಳೂರು ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಪೋಸ್ಟಿಂಗ್ ನೀಡಲಾಗುವುದು. ನೇಮಕವಾದ ಒಂದು ವರ್ಷದ ತನಕ ಪ್ರೋಬೇಶನ್ ಅವಧಿ ಇರುತ್ತದೆ.

ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಅರ್ಜಿ ಶುಲ್ಕ :

ಪರಿಶಿಷ್ಟ ವರ್ಗಗಳಿಗೆ ಸೇರಿದಂತಹ ಅಭ್ಯರ್ಥಿಗಳಿಗೆ ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಸಂಪೂರ್ಣ ವಿನಾಯಿತಿ ನೀಡಲಾಗಿದ್ದು ಉಳಿದ ವರ್ಗಗಳ ಅಭ್ಯರ್ಥಿಗಳಿಗೆ 1000ರೂ. ಅರ್ಜಿ ಶುಲ್ಕವನ್ನು ನಿಗದಿಪಡಿಸಲಾಗಿದೆ.

ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು :

ರೇಷ್ಮೆ ಮಂಡಳಿಯ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಿದ್ದು, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವು ಸೆಪ್ಟೆಂಬರ್ 5, 2024 ಆಗಿರುತ್ತದೆ. ಅರ್ಜಿ ಸಲ್ಲಿಸಲು ಅರ್ಹರಿರುವ ಅಭ್ಯರ್ಥಿಗಳು ಈ ಕೂಡಲೇ ಕೆಳಗೆ ನೀಡಿರುವ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬೇಕು.

ಅರ್ಜಿ ಸಲ್ಲಿಸುವ ಲಿಂಕ್ : https://csb.gov.in


ಇನ್ನಷ್ಟು ಸುದ್ದಿ:

 SSLC ಪಾಸಾದ ಅಭ್ಯರ್ಥಿಗಳಿಗೆ ಸರ್ಕಾರಿ ಹುದ್ದೆಗಳ ಭರ್ಜರಿ ಅವಕಾಶ

ಐಟಿಐ ಪಾಸಾದವರಿಗೆ ರೈಲ್ವೆ ಇಲಾಖೆಯಲ್ಲಿದೆ ಉದ್ಯೋಗ:  29,200 ರೂ. ಸಂಬಳ

ಗಮನಿಸಿ ಈ ಬ್ಯಾಂಕ್ ನಲ್ಲಿದೆ ಭರ್ಜರಿ ಉದ್ಯೋಗಾವಕಾಶಗಳು: ತಡಮಾಡದೇ ಅರ್ಜಿ ಸಲ್ಲಿಸಿ

ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ನಲ್ಲಿದೆ ಉದ್ಯೋಗಾವಕಾಶ: ಅರ್ಜಿ ಸಲ್ಲಿಸೋದು ಹೇಗೆ?

12ನೇ ತರಗತಿ ಪಾಸಾದವರಿಗೆ ಜಿಲ್ಲಾ ಪಂಚಾಯತ್ ನಲ್ಲಿದೆ ಉದ್ಯೋಗ: ಅರ್ಜಿ ಸಲ್ಲಿಸಲು ಕೇವಲ 3 ದಿನ ಬಾಕಿ

ಇತ್ತೀಚಿನ ಸುದ್ದಿ