‘ಚಡ್ಡಿಗಳೇ ಎಚ್ಚರ’ ಎಂದು PFI  ಹೆಸರಿನಲ್ಲಿ ಎಚ್ಚರಿಕೆ ಬರಹ ಪ್ರತ್ಯಕ್ಷ..! - Mahanayaka

‘ಚಡ್ಡಿಗಳೇ ಎಚ್ಚರ’ ಎಂದು PFI  ಹೆಸರಿನಲ್ಲಿ ಎಚ್ಚರಿಕೆ ಬರಹ ಪ್ರತ್ಯಕ್ಷ..!

pfi
04/10/2022

‘ಚಡ್ಡಿಗಳೇ ಎಚ್ಚರ, ಪಿ.ಎಫ್.ಐ ನಾವು ಮರಳಿ ಬರುತ್ತೇವೆ’ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪಿಲತಾಬೆಟ್ಟು ಗ್ರಾಮದ ಸ್ನೇಹಗಿರಿ ಎಂಬಲ್ಲಿ  ಕಿಡಿಗೇಡಿಗಳು ರಸ್ತೆ ಮೇಲೆ ಎಚ್ಚರಿಕೆ ಸಂದೇಶ ಬರೆದಿದ್ದಾರೆ.

ಚಡ್ಡಿಗಳೇ ಎಚ್ಚರ ನಾವು ಮರಳಿ ಬರುತ್ತೇವೆ ಎಂದು ಪಿಎಫ್ ಹೆಸರಲ್ಲಿ ಬರಹ ಬರೆಯಲಾಗಿದೆ. ಈ ಕುರಿತು ಸ್ಥಳೀಯರು ಪುಂಜಾಲಕಟ್ಟೆ ಪೊಲೀಸ್ ಠಾಣೆಗೆ ಈ ಬಗ್ಗೆ ಮಾಹಿತಿ ನೀಡಿದ್ದು, ಪೊಲೀಸರು ಈ ಕುರಿತು ಪರಿಶೀಲನೆ ನಡೆಸಿದ್ರು. ಬಂಟ್ವಾಳ ಭಾಗದಲ್ಲಿ  ನಿಷೇಧಿತ ಪಿಎಫ್ ಐ ಸಂಘಟನೆ ಸಕ್ರಿಯವಾಗಿತ್ತು. ಪಿಎಫ್ ಐನಲ್ಲಿ ಸಕ್ರಿಯವಾಗಿದ್ದವರೇ ಈ ಎಚ್ಚರಿಕೆ ಬರಹ ಬರೆದಿರೋ ಮಾಹಿತಿ ಹರಿದಾಡ್ತಿದೆ.

ಸ್ಪ್ರೇ ಪೈಂಟ್ ಬಳಸಿ ತಡರಾತ್ರಿ ರಸ್ತೆಯಲ್ಲಿ  ಕಿಡಿಗೇಡಿಗಳು ಬರಹ ಬರೆಯಲಾಗಿದೆ.


Provided by

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ