ಚೈತ್ರಾ ಕೋಟೂರ್ ಸನ್ಯಾಸಿನಿ ಆಗಿದ್ದು ನಿಜವೇ? | ಅಸಲಿಗೆ ನಡೆದದ್ದೇನು? - Mahanayaka

ಚೈತ್ರಾ ಕೋಟೂರ್ ಸನ್ಯಾಸಿನಿ ಆಗಿದ್ದು ನಿಜವೇ? | ಅಸಲಿಗೆ ನಡೆದದ್ದೇನು?

chaithra kottur
22/07/2021

ಬೆಂಗಳೂರು: ಬಿಗ್ ಬಾಸ್ ಖ್ಯಾತಿಯ ಚೈತ್ರಾ ಕೋಟೂರ್ ಅವರು ತಮ್ಮ ವೈವಾಹಿಕ ಜೀವನದಲ್ಲಿ ನಡೆದ ನೋವುಗಳ ಹಿನ್ನೆಲೆಯಲ್ಲಿ ಸನ್ಯಾಸ ದೀಕ್ಷೆ ಸ್ವೀಕರಿಸಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದ್ದು,  ಮಾಧ್ಯಮಗಳು ಸೇರಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಈ ಬಗ್ಗೆ ಸುದ್ದಿಗಳು ಪ್ರಕಟವಾಗಿದೆ.

ಮಾ ಪ್ರಗ್ಯಾ ಭಾರತಿ ಎಂಬ ಹೆಸರಿನಲ್ಲಿ  ಚೈತ್ರಾ ಕೋಟೂರು ಸನ್ಯಾಸ ದೀಕ್ಷೆಯನ್ನು ಸ್ವೀಕರಿಸಿದ್ದಾರೆ ಎನ್ನಲಾಗಿತ್ತು. ಆದರೆ ಇದೀಗ ಅವರು, ಸನ್ಯಾಸ ದೀಕ್ಷೆಯನ್ನು ಸ್ವೀಕರಿಸಿಲ್ಲ, ಧ್ಯಾನ ಕೇಂದ್ರವೊಂದರಲ್ಲಿ ನಡೆದ ಕ್ಯಾಂಪ್ ನಲ್ಲಿ ಅವರು ಭಾಗವಹಿಸಿದ್ದರು ಎಂದು ತಿಳಿದು ಬಂದಿದೆ.

ಬೆಳಗಾವಿಯ ಪಿಂಪ್ಲಿಯ ಓಶೋ ಧ್ಯಾನ ಕೇಂದ್ರಕ್ಕೆ ತೆರಳಿದ್ದ ಚೈತ್ರಾ ಕೋಟೂರು ಅಲ್ಲಿ ಧ್ಯಾನ ಮಂದಿರದ ಒಂದಷ್ಟು ಚಟುವಟಿಕೆಗಳನ್ನು ಭಾಗವಹಿಸಿದ್ದರು. ಧ್ಯಾನದಲ್ಲಿ ಭಾಗವಹಿಸುವ ವೇಳೆ ಅಲ್ಲಿಯ ನೀತಿಯ ಪ್ರಕಾರ ಮಾ ಪ್ರಗ್ಯಾ ಭಾರತಿ ಎಂದು ಅವರಿಗೆ ಹೆಸರಿಡಲಾಗಿತ್ತು ಎಂದು ಸ್ವತಃ ಚೈತ್ರಾ ಅವರೇ ಮಾಹಿತಿ ನೀಡಿದ್ದಾರೆ ಎಂದು ವರದಿಯಾಗಿದೆ.

ಚೈತ್ರಾ ಕೋಟೂರು ಅವರ ವಿವಾಹದ ಬಳಿಕ ನಡೆದ ವಿದ್ಯಾಮಾನಗಳಿಂದ ಅವರು ಬಹಳಷ್ಟು ನೊಂದಿದ್ದು, ಸನ್ಯಾಸಿನಿಯಾಗಿದ್ದಾರೆ ಎಂದು ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು.

ಇನ್ನಷ್ಟು ಸುದ್ದಿಗಳು…

ಅಶ್ಲೀಲ ಚಿತ್ರಗಳ ವ್ಯಾಪಾರದಿಂದ ರಾಜ್ ಕುಂದ್ರಾಗೆ ದಿನವೊಂದಕ್ಕೆ ಬರುತ್ತಿದ್ದ ಆದಾಯ ಎಷ್ಟು ಲಕ್ಷ ಗೊತ್ತಾ?

ಪ್ರೇಯಸಿ ಕೊವಿಡ್ ಗೆ ಬಲಿಯಾದ ಸುದ್ದಿ ತಿಳಿದು ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಪ್ರಿಯಕರ

ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಬಾಲಕಿ ಅದೇ ಬಸ್ ನಡಿಗೆ ಸಿಲುಕಿ ಬಲಿಯಾದಳು | ಹೃದಯ ವಿದ್ರಾವಕ ಘಟನೆ

ಮನೆಗೆ ನುಗ್ಗಲು ಯತ್ನಿಸಿದ ಬೃಹತ್ ಹಾವನ್ನು ತಡೆದು ಮನೆಗೆ ಕಾವಲು ನಿಂತ ಬೆಕ್ಕು!

“ನಾನು ಕೂಡ ಬ್ರಾಹ್ಮಣ” | ಆಟದ ಮೈದಾನಕ್ಕೆ ಜಾತಿಯನ್ನು ಎಳೆದು ತಂದ ಸುರೇಶ್ ರೈನಾ

ಕುದಿಯೋ ಎಣ್ಣೆ, ತುಪ್ಪಕ್ಕೆ ಕೈಹಾಕಿ ಫೇಮಸ್ ಆದ ಬಾಬಾ, ಹೆಣ್ಣಿನ ತಂಟೆಗೆ ಹೋಗಿ ಕೆಟ್ಟ!

ಇತ್ತೀಚಿನ ಸುದ್ದಿ