ಬಿಗ್ ಬಾಸ್ ಮನೆಯಲ್ಲಿ ಜ್ಯೋತಿಷ್ಯ ಹೇಳಿದ ಚೈತ್ರಾ: ಲಾಯರ್ ಜಗದೀಶ್ ದ್ದು ಬೇರೆಯೇ ಕಥೆ
ರೂಲ್ಸ್ ಬ್ರೇಕ್ ಮಾಡಿದ್ದಲ್ಲದೇ ಧ್ವನಿ ಏರಿಸಿ ಎಲ್ಲರ ಬಾಯಿ ಮುಚ್ಚಿಸಿದ್ದ ಚೈತ್ರಾ ಕುಂದಾಪುರ, ಧ್ಯಾನ, ತಪಸ್ಸಿನ ವಿಚಾರಕ್ಕೆ ಎರಡನೇ ದಿನ ಮಾನಸ ಜೊತೆ ಕಿರಿಕ್ ಮಾಡಿಕೊಂಡಿದ್ದರು. ಇದೀಗ ಬಿಗ್ ಮನೆಯಲ್ಲಿ ಜ್ಯೋತಿಷ್ಯ ಹೇಳುವ ಮೂಲಕ ಮತ್ತೊಮ್ಮೆ ಗಮನ ಸೆಳೆದಿದ್ದಾರೆ.
ಚೈತ್ರಾ ಕುಂದಾಪುರ ಜೊತೆಗೆ ನರಕವಾಸಿಯಾಗಿರುವ ಶಿಶಿರ್ ಗೆ ಕೈರೇಖೆಗಳನ್ನು ನೋಡಿ ನಿಮ್ಮ ಭವಿಷ್ಯ ಚೆನ್ನಾಗಿದೆ ಎಂದಿದ್ದಾರೆ. ಆಯಸ್ಸು ಹೆಚ್ಚಿದ್ದು, ಒಳ್ಳೆಯ ಬದುಕು ಕಾಣ್ತೀರಾ ಎಂದು ಹೇಳಿದ್ದಾರೆ. ಅಲ್ಲದೇ 35ರಿಂದ 38 ವರ್ಷಕ್ಕೆ ಶಿಶಿರ್ ಗೆ ಮದುವೆಯಾಗುತ್ತದೆ ಎಂದಿದ್ದಾರೆ.
ಇನ್ನೂ ಚೈತ್ರಾ ಭವಿಷ್ಯನೂ ಹೇಳ್ತಾರಾ? ಅಂತ ಬಿಗ್ ಬಾಸ್ ವೀಕ್ಷಕರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಲಾಯರ್ ಜಗದೀಶ್ ದ್ದು ಬೇರೆಯೇ ಕಥೆ:
ಸ್ವರ್ಗ ನಿವಾಸಿಯಾಗಿರುವ ಲಾಯರ್ ಜಗದೀಶ್ ಗೆ ನರಕದತ್ತ ಹೆಚ್ಚು ಸೆಳೆತ ಕಂಡು ಬಂದಿದೆ. ಅವರು ಸ್ವರ್ಗಕ್ಕಿಂತಲೂ ನರಕ ನಿವಾಸಿಗಳ ಜೊತೆಗೆ ಹೆಚ್ಚು ಟಚ್ ನಲ್ಲಿದ್ದಾರೆ. ಸ್ವರ್ಗದ ನಿವಾಸಿಗಳ ಸೀಕ್ರೆಟ್ ಗಳನ್ನ ನರಕದ ನಿವಾಸಿಗಳು ಬಿಟ್ಟು ಕೊಡುತ್ತಿದ್ದಾರೆ. ಸ್ವರ್ಗದ ವಾಸಿಗಳನ್ನು ದೂರುತ್ತಿದ್ದಾರೆ.
ಜನರ ಸಿಂಪಥಿ ಪಡೆದುಕೊಳ್ಳಲು ಲಾಯರ್ ಜಗದೀಶ್ ಈಗೆಲ್ಲ ಆಡ್ತಿದ್ದಾರೆ ಎಂದು ಯಮುನಾ ಹೇಳಿದ್ದು, ಸ್ವರ್ಗ ನಿವಾಸಿಗಳೆಲ್ಲ ಇದು ನಿಜ ಅಂತಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: