ಚಕ್ಕಾ ಜಾಮ್ ಶಾಂತಿಯುತವಾಗಿ ನಡೆಯುವಂತೆ ನೋಡಿಕೊಳ್ಳುವುದು ಸರ್ಕಾರದ ಜವಾಬ್ದಾರಿ | ಜಗ್ತಾರ್ ಸಿಂಗ್ ಬಜ್ವಾ
06/02/2021
ನವದೆಹಲಿ: ರೈತರ ಹೋರಾಟ ಬೆಂಬಲಿಸಿ ದೇಶಾದ್ಯಂತ ಚಕ್ಕಾ ಜಾಮ್ ನಡೆಸಲು ನಿರ್ಧರಿಸಿದ್ದು, ಈ ಹೋರಾಟವು ಶಾಂತಿಯುತವಾಗಿ ನಡೆಯುವಂತೆ ನೋಡಿಕೊಳ್ಳುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಕಿಸಾನ್ ಅಂದೋಲನ್ ಸಮಿತಿಯ(ಕೆಎಸಿ) ನಾಯಕ ಜಗ್ತಾರ್ ಸಿಂಗ್ ಬಜ್ವಾ ಹೇಳಿದ್ದಾರೆ.
ರೈತ ಸಮುದಾಯ ಶಾಂತಿಯುತವಾಗಿ ರಸ್ತೆ ತಡೆದು ಚಕ್ಕಾ ಜಾಮ್ ನಡೆಸಲು ಬಯಸುತ್ತದೆ. ಸರ್ಕಾರ ತನ್ನ ಸಂಸ್ಥೆಗಳು, ಭದ್ರತಾ ಪಡೆಗಳು, ಪೊಲೀಸರ ಮೂಲಕ ನಮಗೆ ಭದ್ರತೆ ಒದಗಿಸಿ ಯಾವುದೇ ಅಹಿತಕರ ಘಟನೆ ನಡೆಯದಂತೆ, ಹಿಂಸಾಚಾರ ನಡೆಯದಂತೆ ನೋಡಿಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.
ಉತ್ತರ ಪ್ರದೇಶ ಮತ್ತು ಉತ್ತರಾಖಂಡ ಹೊರತುಪಡಿಸಿ ದೇಶದ ಬೇರೆಲ್ಲಾ ಕಡೆಗಳಲ್ಲಿ ಚಕ್ಕಾ ಜಾಮ್ ನಡೆಯಲಿದೆ. ಈ ಎರಡು ರಾಜ್ಯಗಳಲ್ಲಿ ಅಧಿಕಾರಿಗಳ ಮುಂದೆ ಒಡಂಬಡಿಕೆ ಸಲ್ಲಿಸಿದ ನಂತರ ಕೃಷಿ ಕಾಯ್ದೆ ವಿರುದ್ಧ ನಮ್ಮ ಪ್ರತಿಭಟನೆಯನ್ನು ದಾಖಲು ಮಾಡಿಕೊಳ್ಳುತ್ತೇವೆ ಎಂದು ಅವರು ಹೇಳಿದರು.