ಚಕ್ಕಾ ಜಾಮ್ ವೇಳೆ ಬಂದ ಆ್ಯಂಬುಲೆನ್ಸ್! | ರೈತರು ಮಾಡಿದ ಕೆಲಸ ಏನು ಗೊತ್ತಾ? - Mahanayaka
8:01 PM Wednesday 11 - December 2024

ಚಕ್ಕಾ ಜಾಮ್ ವೇಳೆ ಬಂದ ಆ್ಯಂಬುಲೆನ್ಸ್! | ರೈತರು ಮಾಡಿದ ಕೆಲಸ ಏನು ಗೊತ್ತಾ?

06/02/2021

ಹರ್ಯಾಣ:  “ಚಕ್ಕಾ ಜಾಮ್”ನ ಅಂಗವಾಗಿ ಹರ್ಯಾಣದಲ್ಲಿ  ರೈತರು ಹೆದ್ದಾರಿ ತಡೆದಿದ್ದು, ಈ ಸಂದರ್ಭ ಆ್ಯಂಬುಲೆನ್ಸ್ ವೊಂದು ಬಂದಿದ್ದು, ಈ ವೇಳೆ ಟ್ರಾಕ್ಟರ್ ಒಂದರ ನೆರವಿನಿಂದ ಆ್ಯಂಬುಲೆನ್ಸ್ ಗೆ ದಾರಿ ಮಾಡಿಕೊಡಲಾಯಿತು.

ಇಂದು ದೇಶಾದ್ಯಂತ “ಚಕ್ಕಾ ಜಾಮ್” ಮಾಡಲಾಗಿದ್ದು,  ಇದರ ಅಂಗವಾಗಿ ಪಾಲ್ವಾಲ್ ಬಳಿಯ ಅಟೋಹನ್ ಚೌಕ್ ನಲ್ಲಿ ಪಾಲ್ವಾಲ್ –ಆಗ್ರಾ ಹೆದ್ದಾರಿಯನ್ನು ರೈತರು ತಡೆದಿದ್ದಾರೆ. ಈ ವೇಳೆ ಆ್ಯಂಬುಲೆನ್ಸ್ ವೊಂದು ಬಂದಿದ್ದು, ಈ ವೇಳೆ ರೈತರು ಟ್ರ್ಯಾಕ್ಟರ್ ಮೂಲಕ ಪ್ರತಿಭಟನಾ ನಿರತ ರೈತರನ್ನು ಸರಿಸಿ, ಆ್ಯಂಬುಲೆನ್ಸ್ ಗೆ ದಾರಿ ನೀಡಿದ್ದಾರೆ.

ಬಹಳ ದೊಡ್ಡ ಸಂಖ್ಯೆಯಲ್ಲಿ ರೈತರು ಚಕ್ಕಾ ಜಾಮ್ ನಲ್ಲಿ ಭಾಗವಹಿಸಿದ್ದರು. ಲಕ್ಷಾಂತರ ಪ್ರತಿಭಟನಾಕಾರರು ಇದ್ದರೂ ಕೂಡ, ತುರ್ತು ಸಂದರ್ಭದಲ್ಲಿ ರೈತರು ಆ್ಯಂಬುಲೆನ್ಸ್ ಗೆ ದಾರಿ ನೀಡಿರುವುದು ಮೆಚ್ಚುಗೆಗೆ ಪಾತ್ರವಾಗಿದೆ.

ಇತ್ತೀಚಿನ ಸುದ್ದಿ