9 ಗಂಟೆ ಕಳೆದರೂ ಬಿಡದ ಚಳಿ: ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಚಳಿಗೆ ಜನ ತತ್ತರ

ಚಾಮರಾಜನಗರ: ಜಿಲ್ಲೆಯಲ್ಲಿ ಬೆಳಗ್ಗೆ 9 ಗಂಟೆ ಕಳೆದರೂ ಚಳಿ ಬಿಟ್ಟಿಲ್ಲ, ಕೋಲ್ಟ್ ವಾತಾವರಣಕ್ಕೆ ಜಿಲ್ಲೆಯ ಜನರು ತತ್ತರಿಸಿದ್ದು, ಮಂಜು ಮುಸುಕಿದ ವಾತಾವರಣದಲ್ಲಿ ಬೆರಳೆಣಿಕೆ ಜನರು ಓಡಾಡುತ್ತಿರುವುದು ಕಂಡು ಬಂತು.
ಚಳಿಯ ವಾತಾವರಣದಲ್ಲಿ ಬೆಳಗ್ಗೆ 9 ಗಂಟೆಗಳು ಕಳೆದರೂ ಮಂಜು ಮುಸುಕಿದ್ದು, ಸೂರ್ಯನ ಬೆಳಕು ಇನ್ನೂ ಬಿದ್ದಿಲ್ಲ. ಜನರು ಸ್ಪೆಟ್ಟರ್ ಟೋಪಿಗಳನ್ನು ಧರಿಸಿದ್ದರೂ ಭಾರೀ ಚಳಿ ಜನರಲ್ಲಿ ನಡುಕ ಹುಟ್ಟಿಸುತ್ತಿದೆ.
ಚಳಿಯ ವಾತಾವರಣದಲ್ಲಿ ಜನರು ಬೆಳಗ್ಗಿನ ವಾಯು ವಿಹಾರಕ್ಕೆ ತೆರಳಲು ಕೂಡ ಹಿಂದು–ಮುಂದು ನೋಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಡಿಸೆಂಬರ್ ಚಳಿಗೆ ಗಡಿಜಿಲ್ಲೆ ಚಾಮರಾಜನಗರದ ಜನತೆ ಬೆಚ್ಚಿಬಿದ್ದಿದ್ದಾರೆ. ಎತ್ತ ನೋಡಿದರೂ ಮಂಜು ಸುರಿಯುತ್ತಿರುವ ದೃಶ್ಯ, ಚಳಿ ಗಾಳಿ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw