ಪರೀಕ್ಷೆ ಬರೆಯಲು ತೆರಳಿದ್ದ ಯುವತಿಯ ಮೇಲೆ ಚಲಿಸುತ್ತಿದ್ದ ಕಾರಿನಲ್ಲಿ ಅತ್ಯಾಚಾರ! - Mahanayaka
12:55 AM Tuesday 10 - December 2024

ಪರೀಕ್ಷೆ ಬರೆಯಲು ತೆರಳಿದ್ದ ಯುವತಿಯ ಮೇಲೆ ಚಲಿಸುತ್ತಿದ್ದ ಕಾರಿನಲ್ಲಿ ಅತ್ಯಾಚಾರ!

agra case
26/11/2021

ಮಥುರಾ: ಚಲಿಸುತ್ತಿದ್ದ ಕಾರಿನಲ್ಲಿ 21 ವರ್ಷ ವಯಸ್ಸಿನ ಯುವತಿಯ ಮೇಲೆ ಅತ್ಯಾಚಾರ ನಡೆಸಿರುವ ಆತಂಕಕಾರಿ ಘಟನೆ ನಡೆದಿದ್ದು, ಪರೀಕ್ಷೆ ಬರೆಯಲು ತೆರಳಿದ್ದ ಯುವತಿ ಆಗ್ರಾದಿಂದ ವಾಪಸ್ ಆಗುತ್ತಿರುವ ವೇಳೆ ಕಾರಿನಲ್ಲಿ ಅತ್ಯಾಚಾರ ನಡೆಸಲಾಗಿದೆ.

ಸಾಮಾಜಿಕ ಜಾಲತಾಣಗಳ ಮೂಲಕ ಯುವತಿಯನ್ನು ಪರಿಚಯ ಮಾಡಿಕೊಂಡಿದ್ದ ತೇಜ್ ವೀರ್ ಎಂಬಾತ ಈ ಕೃತ್ಯ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಯುವತಿಯ ವಿಶ್ವಾಸ ಗಳಿಸಿದ್ದ ಆರೋಪಿ, ಯುವತಿ ಪರೀಕ್ಷೆ ಬರೆಯಲು ಹೋದ ವೇಳೆ ಆಕೆಯ ಜೊತೆಗೆ ಕಾರಿನಲ್ಲಿ ತೆರಳಿದ್ದಾನೆ.

ಪರೀಕ್ಷೆ ಬರೆದು ಆಗ್ರಾದಿಂದ ವಾಪಸ್ ಆಗುತ್ತಿದ್ದ ಸಂದರ್ಭದಲ್ಲಿ ಕಾರಿನಲ್ಲಿ ಯುವತಿಯ ಮೇಲೆ ಆರೋಪಿ ಅತ್ಯಾಚಾರ ನಡೆಸಿದ್ದಾನೆ. ಬಳಿಕ ಮಥುರಾದ ಕೋಸಿ ಕಲಾನ್ ಪ್ರದೇಶದ ಹೊರ ವಲಯದಲ್ಲಿ ಯುವತಿಯನ್ನು ಬಿಟ್ಟು ಹೋಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಯುವತಿಯ ಸಹೋದರ ನೀಡಿದ ದೂರಿನನ್ವಯ ಪ್ರಮುಖ ಆರೋಪಿ ತೇಜ್ ವೀರ್ ನನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ. ಇನ್ನೋರ್ವ ಆರೋಪಿ ದಿಗಂಬರ್ ಎಂಬಾತ ತಲೆಮರೆಸಿಕೊಂಡಿದ್ದು, ಆತನಿಗಾಗಿ ಪೊಲೀಸರು ಶೋಧ ಆರಂಭಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಇಬ್ಬರ ಪ್ರಾಣ ಬಲಿ ಪಡೆದ ದುಬಾರಿ ಟೊಮೆಟೋ!

“ಓ ಮಾರಿಕೊಂಡ ಮಾಧ್ಯಮಗಳೇ, ಹಂಸಲೇಖ ನೀಡಿದ್ದು ‘ವಿವಾದಾತ್ಮಕ ಹೇಳಿಕೆ’ ಅಲ್ಲ” | ಚಾಟಿ ಬೀಸಿದ ಖ್ಯಾತ ಕಾರ್ಟೂನಿಸ್ಟ್ ದಿನೇಶ್ ಕುಕ್ಕುಜಡ್ಕ

ಬ್ರಾಹ್ಮಣರು ಕದ್ದು ಮುಚ್ಚಿ ಮಾಂಸ ಸೇವಿಸುತ್ತಾರೆ ಎಂದಿದ್ದ ಪೇಜಾವರ ಶ್ರೀ ಮೇಲೆ ಯಾಕೆ ಕೇಸು ಹಾಕಲಿಲ್ಲ? | ಹಂಸಲೇಖ ಬೆಂಬಲಿಗರ ಪ್ರಶ್ನೆ

ವಿಚಾರಣೆಗೆ ಹಾಜರಾದ ಹಂಸಲೇಖ: ಠಾಣೆ ಎದುರು ಪರ ವಿರೋಧ ಪ್ರತಿಭಟನೆ

ಶಾಕಿಂಗ್ ನ್ಯೂಸ್: ಕೈಯ ಮಣಿಕಟ್ಟು ಕೊಯ್ದುಕೊಂಡು ತಾಯಿ ಮತ್ತು ಇಬ್ಬರು ಮಕ್ಕಳು ಆತ್ಮಹತ್ಯೆಗೆ ಶರಣು

ರೈಲಿನಡಿಗೆ ತಲೆಯಿಟ್ಟು ಪಿಯು ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು!

ಇತ್ತೀಚಿನ ಸುದ್ದಿ