ಚಲಿಸುತ್ತಿರುವ ರೈಲಿನಲ್ಲಿ ಹುಚ್ಚಾಟ ಮೆರೆದ ಯುವಕರು!
ಸಾಹಸ ಪ್ರಜ್ಞೆ ಇರಬೇಕು ನಿಜ. ಆದರೆ. ಹುಚ್ಚಾಟವನ್ನು ಸಾಹಸ ಅಂತ ಯಾರೂ ಹೇಳುವುದಿಲ್ಲ. ಅನಗತ್ಯವಾಗಿ ಸಾವಿನೊಂದಿಗೆ ಸರಸವಾಡುವುದನ್ನು ಹುಚ್ಚಾಟ ಎನ್ನದೇ ಇನ್ನೇನು ಅನ್ನಬೇಕು ಅಲ್ಲವೇ? ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋವೊಂದು ಸಾರ್ವಜನಿಕರಲ್ಲಿ ಈ ಪ್ರಶ್ನೆಗಳನ್ನು ಮೂಡಿಸದೇ ಇರದು.
ಹೌದು…! ಚಲಿಸುತ್ತಿರುವ ರೈಲಿನಲ್ಲಿ ಇಬ್ಬರು ಯುವಕರು ಹುಚ್ಚಾಟ ಮೆರೆದಿದ್ದು, ರೈಲ್ವೇ ಸ್ಟೇಷನ್ ರೈಲು ಹತ್ತಿದ ಅವರು, ಚಲಿಸುತ್ತಿದ್ದ ರೈಲಿನಲ್ಲಿ ಮೊದಲು ಫ್ಲಾಟ್ ಫಾರ್ಮ್ ನಲ್ಲಿ ಕಾಲಿರಿಸಿ, ಜಾರುತ್ತಾ ಸಾಗುತ್ತಾರೆ. ಆ ಬಳಿಕ ಆ ಯುವಕರ ಪೈಕಿ ಓರ್ವ ಭಾರೀ ಹುಚ್ಚಾಟ ಮೆರೆಯುತ್ತಾನೆ. ರೈಲು ಬೋಗಿಯ ಬಾಗಿಲಿನಲ್ಲಿ ನೇತಾಡುತ್ತಾ ಸಾಗುತ್ತಾನೆ.
ರೈಲು ಹಳಿಯ ಬದಿಯಲ್ಲಿರುವ ಕಂಬಗಳನ್ನು ಸ್ಪರ್ಶಿಸುತ್ತಾ, ಹುಚ್ಚಾಟ ಮೆರೆಯುತ್ತಾನೆ. ನೋಡುವವರು ಈತ ಈಗ ಬಿದ್ದು ಸತ್ತು ಹೋಗುತ್ತಾನೆ ಅಂದುಕೊಳ್ಳಬೇಕು. ಆದರೆ, ಆತ ಮುಂದಿನ ರೈಲು ನಿಲ್ದಾಣದ ವರೆಗೂ ಅದೇ ರೀತಿಯಾಗಿ ನೇತಾಡುತ್ತಾ ಹೋಗುತ್ತಿರುವುದು ವಿಡಿಯೋದಲ್ಲಿ ಕಂಡು ಬಂದಿದೆ.
ಎಷ್ಟೋ ಜನರು ತಮ್ಮ ಪ್ರಾಣವನ್ನು ಉಳಿಸಿಕೊಳ್ಳಲು ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡುತ್ತಾರೆ. ಜೀವದ ಬೆಲೆ ಏನು ಅನ್ನುವುದು ಎಲ್ಲರಿಗೂ ಗೊತ್ತಿದೆ. ಆದರೆ, ಈ ಯುವಕರು ಮಾಡಿರುವ ಘನಂದಾರಿ ಕೆಲಸವನ್ನು ನೋಡಿ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ನಿಮಗೆ ಪ್ರಾಣ ಎನ್ನುವುದು ಇಷ್ಟೊಂದು ಅಗ್ಗವಾಗಿದೆಯೇ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನಿಸಿದ್ದಾರೆ.
ಈ ವಿಡಿಯೋ ಎಲ್ಲಿಯದು ಎನ್ನುವುದು ಇನ್ನೂ ತಿಳಿದು ಬಂದಿಲ್ಲ. ಆದರೆ, ಈ ವಿಡಿಯೋದಲ್ಲಿರುವ ಯುವಕರು ಎಲ್ಲಿದ್ದರೂ ಬಂಧಿಸಬೇಕು. ಇಂತಹ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದರೆ ಯುವಜನರನ್ನು ದಾರಿ ತಪ್ಪಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ.
ಇನ್ನಷ್ಟು ಸುದ್ದಿಗಳು…
ಅತ್ಯಾಚಾರ ಯತ್ನ ವಿಫಲವಾದಾಗ ವೃದ್ಧೆಯನ್ನು ಕೊಂದು ಮೃತದೇಹದ ಮೇಲೆಯೇ ಹೇಯ ಕೃತ್ಯ
ತಲೆಗೆ ಗುಂಡು ಹಾರಿಸಿದ ಸ್ಥಿತಿಯಲ್ಲಿ ವಿದ್ಯಾರ್ಥಿಯ ಶವ ಪತ್ತೆ: ಆತ್ಮಹತ್ಯೆಯೋ?, ಕೊಲೆಯೋ? ಎಂಬ ಶಂಕೆ!
ಕ್ಲಬ್ ಹೌಸ್ ಹೌಸ್ ನಲ್ಲಿ ಇಂದು ಪ್ರಧಾನಿ ಮೋದಿ ಜನ್ಮ ದಿನಾಚರಣೆ: ಸಂಸದ ಪ್ರತಾಪ್ ಸಿಂಹ ಭಾಷಣ
ಚಾರ್ಮಾಡಿ ಘಾಟ್ ನ ತಿರುವಿನಲ್ಲಿ ಕಂದಕಕ್ಕೆ ಉರುಳಿದ ಕಾರು!
ಸಿನಿಮಾ, ನಾಟಕ ಪ್ರದರ್ಶನಗಳಿಗೆ ಪೂರ್ಣ ಪ್ರಮಾಣದ ಅವಕಾಶ ನೀಡಿ | ದೇವದಾಸ್ ಕಾಪಿಕಾಡ್ ಒತ್ತಾಯ
ದೇವಾಲಯ ತೆರವು: ಸಂಸದ ತೇಜಸ್ವಿ ಸೂರ್ಯ, ಪ್ರತಾಪ್ ಸಿಂಹಗೆ ಹಿಂದೂ ಕಾರ್ಯಕರ್ತರ ಮುತ್ತಿಗೆ
ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಗೆ ಪರ್ಯಾಯ ರಾಜಕೀಯ ಪಕ್ಷ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ | ಡಾ.ಎಂ.ವೆಂಕಟಸ್ವಾಮಿ