ಆಸ್ಪತ್ರೆ, ಇಂದಿರಾ ಕ್ಯಾಂಟೀನ್, ಹಾಸ್ಟೆಲ್ ಗೆ ಚಾಮರಾಜನಗರ ಡಿಸಿ ದಿಢೀರ್ ಭೇಟಿ
ಚಾಮರಾಜನಗರ: ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪನಾಗ್ ಅವರು ಚಾಮರಾಜನಗರದ ಇಂದಿರಾ ಕ್ಯಾಂಟೀನ್, ಆಸ್ಪತ್ರೆ, ಹಾಸ್ಟೆಲ್ ಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮೊದಲು ಜಿಲ್ಲಾಧಿಕಾರಿ ಕಚೇರಿ ಯ ಗೇಟ್ ಬಳಿ ಪಕ್ಕದ ಇಂದಿರಾ ಕ್ಯಾಂಟೀನ್ ಗೆ ಅನಿರೀಕ್ಷಿತ ಭೇಟಿ ನೀಡಿ ಅಡುಗೆ ಸಾಮಗ್ರಿಗಳು, ದಿನಸಿ ದಾಸ್ತಾನು ವೀಕ್ಷಣೆ ಮಾಡಿದರು.ಶುಚಿತ್ವ,ಆಹಾರ ವಿತರಣೆ,ಮೆನು ಪರಿಶೀಲಿಸಿದರು.
ರಾತ್ರಿ ಗ್ರಾಹಕರಿಗೆ ವಿತರಿಸಲು ಸಿದ್ದಪಡಿಸಲಾಗಿದ್ದ ರೈಸ್ ಬಾತ್ ಅನ್ನು ಜಿಲ್ಲಾಧಿಕಾರಿ ಅವರು ಸೇವಿಸಿ ಗುಣಮಟ್ಟ ಪರಿಶೀಲಿಸಿದರು.
ಪ್ರತಿದಿನ ಟೋಕನ್ ವಿತರಿಸಬೇಕು.ಆ ಪ್ರಕಾರವೇ ಆಹಾರ ನೀಡಬೇಕು.ಆಹಾರದಲ್ಲಿ ಗುಣಮಟ್ಟ, ನಿಗದಿತ ಪ್ರಮಾಣ,ಶುಚಿತ್ವ ಕಾಪಾಡಿ ಕೊಳ್ಳ ಬೇಕು.ಎಲ್ಲಿಯೂ ಲೋಪಗಳಾಗಾದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದರು.
ಕ್ಯಾಂಟೀನ್ ಗೆ ಸಿ.ಸಿ.ಕೆಮರಾ ಅಳವಡಿಸಬೇಕು.ಪ್ರತಿ ನಿತ್ಯ ಎಷ್ಟು ಮಂದಿಗೆ ಆಹಾರ ವಿತರಿಸಲಾಗಿದೆ ಎಂಬ ಪೂರ್ಣ ವರದಿ ಲೆಕ್ಕ ಪತ್ರ ಸಲ್ಲಿಸುವಂತೆ ಕ್ಯಾಂಟೀನ್ ನಿರ್ವಾಹಕ ರಿಗೆ ಜಿಲ್ಲಾಧಿಕಾರಿ ಅವರು ತಾಕೀತು ಮಾಡಿದರು.
ಬಳಿಕ ನಗರದ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿ ಇರುವ ತಾಯಿಮಕ್ಕಳ ಆಸ್ಪತ್ರೆ ಹಾಗೂ ತುರ್ತು ನಿಗಾ ಘಟಕಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ತಾಯಿ ಮಕ್ಕಳ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಮಹಿಳೆಯರ ಆರೋಗ್ಯ ವಿಚಾರಿಸಿದರು. ಚಿಕಿತ್ಸೆ ಹೇಗೆ ನೀಡಲಾಗುತ್ತಿದೆ? ವೈದ್ಯಕೀಯ ಸೇವೆ ಸರಿಯಾಗಿ ಸಿಗುತ್ತಿದೆಯೇ ಎಂದು ಪ್ರಶ್ನಿಸಿದರು.
ತೀವ್ರತರ ಮಕ್ಕಳ ನಿಘಾ ಘಟಕ,ಅಪೌಷ್ಟಿಕತೆ ಮಕ್ಕಳ ನಿರ್ವಹಣೆ ವಿಭಾಗಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದರು.ಅಪೌಷ್ಟಿಕತೆ ನಿವಾರಣೆಗೆ ಅನುಸರಿಸಲಾಗುತ್ತಿರುವ ವಿಧಾನಗಳ ಬಗ್ಗೆ ಮಾಹಿತಿ ಪಡೆದರು. ಈ ಸಂಬಂಧಿಸಿದಂತೆ ಅಗತ್ಯವಾದ ಸೂಚನೆ ನೀಡಿದರು.
ತದ ನಂತರ ನಗರದ ಸಮಾಜ ಕಲ್ಯಾಣ ಇಲಾಖೆಯ ಬಾಲಕಿಯರ ಹಾಸ್ಟೆಲ್ ಗೆ ಭೇಟಿ ನೀಡಿ ಮೂಲ ಸೌಕರ್ಯಗಳನ್ನು ಪರಿಶೀಲಿಸಿದರು.ಆಹಾರ ಪದಾರ್ಥಗಳ ದಾಸ್ತಾನು ವೀಕ್ಷಿಸಿದರು.ವಿದ್ಯಾರ್ಥಿನಿಯರಿಗೆ ಸಿದ್ದ ಮಾಡಿದ್ದ ಊಟದ ರುಚಿ ನೋಡಿ ಗುಣಮಟ್ಟ ಪರಿಶೀಲಿಸಿದರು.ವಿದ್ಯಾರ್ಥಿನಿಯರ ಅಹವಾಲಗಳನ್ನು ಆಲಿಸಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 74835 51849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/D73015iu7jn2glm2MECosd
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw