ಎಲ್ಲ ಟ್ಯಾಂಕ್ ಗಳಿಂದಲೂ ನೀರು ಕುಡಿದ ದಲಿತರು: ಕೊಳಕು ಮನಸ್ಥಿತಿಗಳಿಗೆ ತಕ್ಕ ತಿರುಗೇಟು
ಮೈಸೂರು: ದಲಿತ ಮಹಿಳೆ ನಳ್ಳಿಯಿಂದ ನೀರು ಕುಡಿದ ಕಾರಣಕ್ಕೆ ಇಡೀ ಟ್ಯಾಂಕ್ ನ ನೀರು ಖಾಲಿ ಮಾಡಿಸಿ, ಗೋಮೂತ್ರದಿಂದ ಶುದ್ಧ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಳಕು ಮನಸ್ಥಿತಿಗಳಿಗೆ ದಲಿತರು ತಕ್ಕ ತಿರುಗೇಟು ನೀಡಿದ್ದಾರೆ.
ಚಾಮರಾಜನಗರ ತಾಲೂಕಿನ ಹೆಗ್ಗೂಠಾರ ಗ್ರಾಮದಲ್ಲಿ ತಮ್ಮನ್ನು ತಾವು ಮೇಲ್ವರ್ಗ ಎಂದು ತಿಳಿದುಕೊಂಡಿರುವ ಕೆಲವು ಕೊಳಕು ಮನಸ್ಥಿತಿಗಳು, ದಲಿತ ಮಹಿಳೆ ಟ್ಯಾಂಕ್ ನಿಂದ ನೀರು ಕುಡಿದಿದ್ದಾಳೆ ಎಂದು ಟ್ಯಾಂಕ್ ಸ್ವಚ್ಛಗೊಳಿಸಿ ವಿಕೃತಿ ಮೆರೆದಿದ್ದರು. ಇದೀಗ ಇಲ್ಲಿನ ದಲಿತ ಯುವಕರು ಘಟನೆಯನ್ನು ಖಂಡಿಸಿ ಭಾನುವಾರ ಗ್ರಾಮಕ್ಕೆ ತೆರಳಿ ಗ್ರಾಮದ ಪ್ರತಿ ಟ್ಯಾಂಕ್ ನಿಂದಲೂ ನೀರು ಕುಡಿದು ಜಾತಿ ಪೀಡೆಗಳಿಗೆ ತಿರುಗೇಟು ನೀಡಿದ್ದಾರೆ.
ಇನ್ನೂ ಚಾಮರಾಜನಗರ ತಹಶೀಲ್ದಾರ್ ಬಸವರಾಜ್, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಮಲ್ಲಿಕಾರ್ಜುನ ಅವರೂ ಪೊಲೀಸರೊಂದಿಗೆ ಗ್ರಾಮಕ್ಕೆ ಭೇಟಿ ನೀಡಿದ್ದು, ಇದು ಸಾರ್ವಜನಿಕ ಬಳಕೆಗೆ ಇರುವ ಟ್ಯಾಂಕ್, ಈ ಟ್ಯಾಂಕ್ ನಿಂದ ಯಾರು ಬೇಕಾದರೂ ನೀರು ಕುಡಿಯಬಹುದು ಎಂಬ ಸಂದೇಶ ನೀಡಿದ್ದಾರೆ.
ಚಾಮರಾಜನಗರಕ್ಕೆ ಸಚಿವ ವಿ.ಸೋಮಣ್ಣ ಭೇಟಿ:
ಭಾನುವಾರ ಚಾಮರಾಜನಗರಕ್ಕೆ ಭೇಟಿ ನೀಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು, ಘಟನೆ ಬಗ್ಗೆ ಅಧಿಕಾರಿಗಳ ಮಾಹಿತಿ ಪಡೆದುಕೊಂಡಿದ್ದು, ತನಿಖೆಗೆ ಆದೇಶಿಸಿದ್ದಾರೆ.
ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ಪಡೆದುಕೊಂಡಿದ್ದೇನೆ. ಘಟನೆಯ ಕುರಿತು ತನಿಖೆ ನಡೆಸಿ ಅಪರಾಧದಲ್ಲಿ ಭಾಗಿಯಾಗಿರುವ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದ್ದೇನೆ. ಇದೊಂದು ವಿಷಾದನೀಯ ಘಟನೆ ಎಂದು ಸಚಿವ ಸೋಮಣ್ಣ ಅವರು ಹೇಳಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka