ಬಿಳಿಕಲ್ಲು ಕ್ವಾರಿ ಕುಸಿದು ಇಬ್ಬರು ಕಾರ್ಮಿಕರ ದಾರುಣ ಸಾವು
ಚಾಮರಾಜನಗರ: ಬಿಳಿಕಲ್ಲು ಕ್ವಾರಿ ಕುಸಿದು ಇಬ್ಬರು ಕಾರ್ಮಿಕರು ಮೃತಪಟ್ಟಿರುವ ಘಟನೆ ಚಾಮರಾಜನಗರ ತಾಲೂಕಿನ ಬಿಸಲವಾಡಿ ಗ್ರಾಮದಲ್ಲಿ ನಡೆದಿದೆ.
ಚಾಮರಾಜನಗರ ತಾಲೂಕಿನ ಕಾಗಲವಾಡಿ ಮೋಳೆ ಗ್ರಾಮದ ಶಿವರಾಜು ಹಾಗೂ ಕುಮಾರ್ ಮೃತ ದುರ್ದೈವಿಗಳು. ಸಿದ್ದರಾಜು ಎಂಬಾತ ಬಚಾವಾದರೂ ಗಂಭೀರವಾಗಿ ಗಾಯಗೊಂಡಿದ್ದಾನೆ ಎಂದು ತಿಳಿದುಬಂದಿದೆ.
ರೇಣುಕಾದೇವಿ ಎಂಬವರ ಹೆಸರಿನಲ್ಲಿ ಈ ಬಿಳಿಕಲ್ಲು ಕ್ವಾರಿಯ ಪರವಾನಗಿ ಇದ್ದು ಅವರ ಪತಿ ಭಾಸ್ಕರ್ ಎಂಬವರು ಇದನ್ನು ನಡೆಸುತ್ತಿದ್ದರು. ಗುಂಡ್ಲುಪೇಟೆ ತಾಲೂಕಿನ ಮಡಹಳ್ಳಿ ಗುಡ್ಡ ಕುಸಿತ ಪ್ರಕರಣ ಮಾಸುವ ಮುನ್ನವೇ ಈ ದುರಂತ ನಡೆದಿರುವುದು ವಿಪರ್ಯಾಸವಾಗಿದೆ.
ಗಣಿಗಾರಿಕೆ ಅಧಿಕಾರಿಗಳ ಜಾಣಮೌನದಿಂದ ದುರಂತ ಮರುಕಳಿಸಿರುವ ಆರೋಪ ಕೇಳಿಬಂದಿದೆ. ಸ್ಥಳಕ್ಕೆ ಅಧಿಕಾರಿಗಳು ತೆರಳಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/HeAiP3WAQfT6ajtrJVJ4kP
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka