“ಒಬ್ಬನೇ ಬಾ” ಎಂಬ ಫೋನ್ ಕರೆಗೆ ಓಗೊಟ್ಟು ಹೋದಾತ ಶವವಾಗಿ ಪತ್ತೆ!

ಚಾಮರಾಜನಗರ: ವ್ಯಕ್ತಿಯೋರ್ವ ಅನುಮಾನಸ್ಪದವಾಗಿ ಮೃತಪಟ್ಟಿರುವ ಘಟನೆ ಹನೂರು ತಾಲೂಕಿನ ಅಲಗುಮೂಲೆ ಗ್ರಾಮದಲ್ಲಿ ಜರುಗಿದೆ.
ಹನೂರು ತಾಲೂಕಿನ ಅಲಗುಮೂಲೆ ಗ್ರಾಮದ ಕುಮಾರ್ (45)ಮೃತಪಟ್ಟ ವ್ಯಕ್ತಿ. ಅಲಗೂಮೂಲೆ ಗ್ರಾಮದ ಕುಮಾರ್ ಎಂಬುವರು ಬೆಂಗಳೂರು ಮೂಲದ ಪ್ರತಾಪ್ ಎಂಬುವರಿಗೆ ಸೇರಿದ ಜಮೀನಿನಲ್ಲಿ ತನ್ನ ಹಸುಗಳನ್ನು ಮೇಯಿಸಿಕೊಂಡು ಜೀವನ ಸಾಗಿಸುತ್ತಿದ್ದ, ಅದರಂತೆ ಡಿ.27 ರಂದು ಜಮೀನಿನಲ್ಲಿ ಕೆಲಸ ಮುಗಿಸಿ ವಾಪಸ್ ಮನೆಗೆ ಬಂದಿದ್ದಾರೆ. ಈ ಸಂದರ್ಭದಲ್ಲಿ ಇದೇ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಆರೋಗ್ಯಸ್ವಾಮಿ ಎಂಬಾತ ದೂರವಾಣಿ ಕರೆ ಮಾಡಿ ನೀನೊಬ್ಬನೇ ಜಮೀನಿನ ಬಳಿಗೆ ಬಾ ಎಂದು ಕರೆದಿದ್ದಾನೆ.
ಆತನ ಕರೆಗೆ ಓಗೊಟ್ಟು ತನ್ನ ಟಿವಿಎಸ್ ಬೈಕ್ ನಲ್ಲಿ ಪ್ರತಾಪ್ ಎಂಬವರ ಜಮೀನಿಗೆ ತೆರಳಿದ್ದು ಎಷ್ಟು ಹೊತ್ತಾದೂ ವಾಪಾಸ್ ಬಾರದಿದ್ದರಿಂದ ಕುಟುಂಬಸ್ಥರು ಜಮೀನಿಗೆ ಹೋಗಿ ನೋಡಿದ ವೇಳೆ ಅಂಗಾತವಾಗಿ ಬಿದ್ದು ಮೃತಪಟ್ಟಿದ್ದು ಬೆಳಕಿಗೆ ಬಂದಿದೆ.
ಈ ಸಂಬಂಧ ಮೃತ ಕುಮಾರನ ಸಹೋದರ ಮಾದೇಶ್ ದೂರು ನೀಡಿದ್ದಾರೆ. ಹನೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/HeAiP3WAQfT6ajtrJVJ4kP
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka