ಚಮೋಲಿ ದುರಂತ: ಒಂದು ವರ್ಷದ ನಂತರ ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಪತ್ತೆ
ಉತ್ತರಾಖಂಡ್: ಸುಮಾರು ಒಂದು ವರ್ಷದ ಹಿಂದೆ ನಡೆದ ಚಮೋಲಿ ದುರಂತದಲ್ಲಿ ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ರೈನಿ ಗ್ರಾಮದಲ್ಲಿ ಪತ್ತೆಯಾಗಿದೆ.
ನಾಪತ್ತೆಯಾದ ವ್ಯಕ್ತಿಯನ್ನು 21 ವರ್ಷದ ರೋಹಿತ್ ಭಂಡಾರಿ ಎಂದು ಗುರುತಿಸಲಾಗಿದೆ. ಜೋಶಿಮಠದ ಕಿಮನಾ ಗ್ರಾಮದ ನಿವಾಸಿಯಾಗಿರುವ ಈತ ಚಮೋಲಿ ಪ್ರವಾಹದ ವೇಳೆ ನೀರಿನಲ್ಲಿ ಕೊಚ್ಚಿ ಹೋಗಿದ್ದನು.
ಈತನ ಮೃತದೇಹ ತಪೋವನ ಸುರಂಗದಲ್ಲಿ ಪತ್ತೆಯಾಗಿದ್ದು, ವ್ಯಕ್ತಿಯನ್ನು ಮರಣೋತ್ತರ ಪರೀಕ್ಷೆ ನಡೆಸಿದ ಪೊಲೀಸರು ಮೃತದೇಹವನ್ನು ಸಂಬಂಧಿಕರಿಗೆ ಹಸ್ತಾಂತರ ಮಾಡಿದ್ದಾರೆ. ಇದಕ್ಕೂ ಮುನ್ನ ಫೆ. 16ರಂದು ಗೌರವ್ ಪ್ರಸಾದ್ ಎಂಬವರ ಮೃತದೇಹ ಸುರಂಗವೊಂದರಲ್ಲಿ ಪತ್ತೆಯಾಗಿತ್ತು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಕೊಲಂಬಿಯಾದಲ್ಲಿ ಆರು ತಿಂಗಳವರೆಗೆ ಗರ್ಭಪಾತ ಅಪರಾಧವಲ್ಲ: ನ್ಯಾಯಾಲಯದ ಮಹತ್ವದ ತೀರ್ಪು
ಚಿನ್ನದ ಗಣಿಯಲ್ಲಿ ಸ್ಫೋಟ: 59 ಮಂದಿ ಸಾವು; ನೂರಕ್ಕೂ ಹೆಚ್ಚು ಮಂದಿಗೆ ಗಾಯ
ಶಿವಮೊಗ್ಗದಲ್ಲಿ ಕೊಲೆಯಾದ ಹರ್ಷ ಭಯೋತ್ಪಾದಕ ಎಂದ ವಿದೇಶಿ ಪತ್ರಕರ್ತ: ಡಿಜಿಪಿ ಸ್ಪಷ್ಟನೆ