ಮೇಲ್ಜಾತಿಯ ಮಹಿಳೆ ತಯಾರಿಸಿದ ಆಹಾರ ನಾವು ಸೇವಿಸುವುದಿಲ್ಲ | ದಲಿತ ವಿದ್ಯಾರ್ಥಿಗಳಿಂದ ಪಟ್ಟು - Mahanayaka
8:14 AM Thursday 12 - December 2024

ಮೇಲ್ಜಾತಿಯ ಮಹಿಳೆ ತಯಾರಿಸಿದ ಆಹಾರ ನಾವು ಸೇವಿಸುವುದಿಲ್ಲ | ದಲಿತ ವಿದ್ಯಾರ್ಥಿಗಳಿಂದ ಪಟ್ಟು

dalith students
27/12/2021

ಚಂಪಾವತ್: ಅಸ್ಪೃಶ್ಯತಾ ಆಚರಣೆಯ ವಿರುದ್ಧ ಇದೀಗ ದಲಿತ ಸಮುದಾಯ ತಿರುಗಿ ಬಿದ್ದಿದೆ. ಉತ್ತರಾಖಂಡದ ಚಂಪಾವತ್ ಜಿಲ್ಲೆಯ ಸುಖಿಧಾಂಗ್ ಗ್ರಾಮದ ಸರ್ಕಾರಿ ಶಾಲೆಯಲ್ಲಿ ದಲಿತ ಮಹಿಳೆ ತಯಾರಿಸಿದ ಆಹಾರ ತಿನ್ನಲು ಮೇಲ್ಜಾತಿಯವರ ಮಕ್ಕಳು ನಿರಾಕರಿಸಿದ ಬೆನ್ನಲ್ಲೇ, ಆ ಮಹಿಳೆಯನ್ನು ಕೆಲಸದಿಂದ ವಜಾ ಮಾಡಿರುವ ಘಟನೆಗೆ ದೇಶಾದ್ಯಂತ ವಿರೋಧ ವ್ಯಕ್ತವಾಗಿತ್ತು. ಆದರೆ ಇದೀಗ ಈ ಘಟನೆ ಹೊಸ ತಿರುವು ಪಡೆದುಕೊಂಡಿದೆ.

ಹೌದು…! ದಲಿತ ಮಹಿಳೆಯನ್ನು ವಜಾಗೊಳಿಸಿದ ಬಳಿಕ ಮೇಲ್ಜಾತಿಯ ಮಹಿಳೆಯೊಬ್ಬರನ್ನು ಅಡುಗೆ ಕೆಲಸಕ್ಕೆ ನೇಮಿಸಲಾಗಿದೆ. ಇದೀಗ ದಲಿತ ವಿದ್ಯಾರ್ಥಿಗಳು, ನಾವು ಮೇಲ್ಜಾತಿಯವರು ಮಾಡಿದ ಆಹಾರವನ್ನು ಸೇವಿಸುವುದಿಲ್ಲ ಎಂದು ಪ್ರತ್ಯುತ್ತರ ನೀಡಿದ್ದು, ಇದೀಗ ಜಾತಿ ಪೀಡೆ ವ್ಯವಸ್ಥೆಗೆ ತಕ್ಕ ತಿರುಗೇಟು ನೀಡಿದಂತಾಗಿದೆ.

ಮೇಲ್ಜಾತಿಯವರು ಮಾಡಿರುವ ಅಡುಗೆಯನ್ನು ಸೇವಿಸಲು ದಲಿತ ವಿದ್ಯಾರ್ಥಿಗಳು ನಿರಾಕರಿಸಿದ್ದಾರೆ ಎಂದು ಶಾಲೆಯ ಪ್ರಾಂಶುಪಾಲ ಪ್ರೇಮ್ ಸಿಂಗ್ ಶಿಕ್ಷಣ ಇಲಾಖೆಗೆ ಪತ್ರ ಬರೆದಿದ್ದು, ಹೀಗಾಗಿ ಈ ವಿಚಾರ ಬಹಿರಂಗವಾಗಿದೆ.  ದಲಿತ ಮಹಿಳೆ ಮಾಡಿದ ಅಡುಗೆಯನ್ನು ನೀವು ನಿರಾಕರಿಸಿದರೆ, ನಿಮ್ಮ ಜಾತಿಯವರು ಮಾಡಿದ ಅಡುಗೆ ನಾವು ಸೇವಿಸುವುದಿಲ್ಲ ಎಂದು ದಲಿತರ ಹೊಸ ಪೀಳಿಗೆಯ ಮಕ್ಕಳು ತಿರುಗೇಟು ನೀಡಿದ್ದಾರೆ.

ದಲಿತ ಮಹಿಳೆಯನ್ನು ಕೆಲಸದಿಂದ ವಜಾಗೊಳಿಸಿ, ಮೇಲ್ಜಾತಿಯ ಮಹಿಳೆಯನ್ನು ಕೆಲಸಕ್ಕೆ ನೇಮಿಸಿದ ಬಳಿಕ ದಲಿತ ವಿದ್ಯಾರ್ಥಿಗಳು ತಮ್ಮ ಮನೆಯಿಂದಲೇ ಆಹಾರ ತೆಗೆದುಕೊಂಡು ಶಾಲೆಗೆ ಬರುತ್ತಿದ್ದಾರೆ. ಮೇಲ್ಜಾತಿಯ ಮಹಿಳೆ ಮಾಡಿದ ಅಡುಗೆ ನಾವು ಸೇವಿಸಲು ತಯಾರಿಲ್ಲ ಎನ್ನುವ ಸ್ಪಷ್ಟ ಸಂದೇಶವನ್ನು ನೀಡಿದ್ದಾರೆ.

ಈ ವಿಚಾರ ಬೆಳಕಿಗೆ ಬಂದ ಬಳಿಕ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಕುಮಾವೂನ್ ಡಿಐಜಿ ನೀಲೇಶ್ ಆನಂದ್ ಭರಣ್ ಶಾಲೆಗೆ ಭೇಟಿ ನೀಡಿ, ದಲಿತ ಮಹಿಳೆಯ ವಜಾ ವಿಚಾರವಾಗಿ ತನಿಖೆ ನಡೆಸಿ ಕ್ರಮಕೈಗೊಳ್ಳುವಂತೆ ತಿಳಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DbJM9kayC1K4utc3ntXPdh

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಸನ್ನಿ ಲಿಯೋನ್ ಮೇಲೆ ಅರ್ಚಕರ ಕೆಂಗಣ್ಣು: ಕ್ಷಮೆ ಕೇಳದಿದ್ದರೆ ಭಾರತದಲ್ಲಿರಲು ಬಿಡಲ್ಲ ಎಂದು ಬೆದರಿಕೆ

ಕರ್ನಾಟಕ ಬಂದ್ ನಡುವೆಯೇ ಇನ್ನೊಂದು ಶಾಕ್: ಡಿ.31ರಿಂದ ಕಸ ಗುತ್ತಿಗೆದಾರ ಸಂಘದಿಂದ ಅನಿರ್ದಿಷ್ಠಾವಧಿ ಮುಷ್ಕರ

ಅಭಿಮಾನಿಗಳಿಗೆ ಕೈಮುಗಿದು ಬೇಡಿಕೊಂಡ ನಿಖಿಲ್ ಕುಮಾರಸ್ವಾಮಿ | ಕಾರಣ ಏನು ಗೊತ್ತಾ?

ಪುತ್ರಿಯ ನಿಶ್ಚಿತಾರ್ಥದ ಫೋಟೋ ಹಂಚಿಕೊಂಡ ಸಚಿವೆ ಸ್ಮೃತಿ ಇರಾನಿ

ನಾನು ದೊಡ್ಡ ಪೋಲಿ ಆಟ ಆಡಿ ಬಂದವನು | ಹಂಸಲೇಖ

ನ್ಯೂಡಲ್ಸ್ ತಯಾರಿಕಾ ಘಟಕದ ಬಾಯ್ಲರ್ ಸ್ಫೋಟ: 6 ಕಾರ್ಮಿಕರು ಸಾವು: 5 ಕಿ.ಮೀ.ವರೆಗೆ ಕೇಳಿತು ಸ್ಟೋಟದ ಶಬ್ಧ!

ಇತ್ತೀಚಿನ ಸುದ್ದಿ