ಅಪಘಾತದಲ್ಲಿ ಮೃತಪಟ್ಟರೂ 6 ಮಕ್ಕಳ ಜೀವ ಉಳಿಸಿದ ಚಂದನ! - Mahanayaka
6:04 PM Wednesday 30 - October 2024

ಅಪಘಾತದಲ್ಲಿ ಮೃತಪಟ್ಟರೂ 6 ಮಕ್ಕಳ ಜೀವ ಉಳಿಸಿದ ಚಂದನ!

chandana
29/07/2024

ತುಮಕೂರು: ಅಪಘಾತದಲ್ಲಿ ಗಾಯಗೊಂಡು   ಚಿಕಿತ್ಸೆ ಪಡೆದರೂ ಫಲಕಾರಿಯಾಗದೆ ಮೃತಪಟ್ಟ ಶಾಲಾ ಬಾಲಕಿಯ ಅಂಗಾಂಗವನ್ನು ಪೋಷಕರು ದಾನ ಮಾಡಿರುವ ಮಾನವೀಯ ಘಟನೆ ತುಮಕೂರಿನಲ್ಲಿ ನಡೆದಿದೆ.

ಮಗಳ ಸಾವಿನ ನೋವಿನಲ್ಲೂ ಪೋಷಕರು ಅಂಗಾಂಗ ದಾನದ ಮೂಲಕ ಸಾರ್ಥಕತೆ ಮೆರೆದಿದ್ದಾರೆ.  ತುಮಕೂರು ಜಿಲ್ಲೆ ತಿಪಟೂರು ನಗರದ ಶ್ರೀ ವಿವೇಕಾನಂದ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಓದುತ್ತಿದ್ದ ಚಂದನ, ಜು.23ರಂದು ಶಾಲೆ ಮುಗಿಸಿ ವಾಪಸ್ ಮನೆಗೆ ಬರುವಾಗ ಅಪಘಾತ ಸಂಭವಿಸಿತ್ತು.  ಲಾರಿ ಡಿಕ್ಕಿ ಹೊಡೆದ ನಂತರ  ಚಂದನ ತೆಲೆಗೆ ಪೆಟ್ಟಾಗಿ ಮೆದುಳು ನಿಷ್ಕ್ರಿಯಗೊಂಡಿತ್ತು.

ಅಪಘಾತದ ಬಳಿಕ ಹಾಸನ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದಳು. ನಂತರ ಚಂದನಳ ಅಗಾಂಗ ದಾನ ಮಾಡಲು ಒಪ್ಪಿದ ಪೋಷಕರ ನಿರ್ಧಾರಕ್ಕೆ  ಆಸ್ಪತ್ರೆ ಸಿಬ್ಬಂದಿ ಗೌರವ ಸಲ್ಲಿಸಿದರು.

ಚಂದನಳ ಅಂಗಾಂಗಗಳನ್ನು ಮೈಸೂರು ಹಾಗೂ ಬೆಂಗಳೂರಿನ 6 ಮಕ್ಕಳಿಗೆ ಜೋಡಣೆ ಮಾಡಲಾಯಿತು.  ಇಂದು ಸಂಜೆ ಚಂದನಾಳ ಅಂತ್ಯಸಂಸ್ಕಾರ ನೆರವೇರಲಿದೆ.

ತಿಪಟೂರ್ ನಗರದ ಹಾಸನ ವೃತ್ತದಿಂದ ಹಳೆಪಾಳ್ಯದ ಸ್ವಗೃಹದವರೆಗೂ ಸರ್ಕಾರಿ ಗೌರವಗಳೊಂದಿಗೆ ಮತ್ತು ವಿವಿಧ ಶಾಲಾ ಮತ್ತು ಸಂಘ ಸಂಸ್ಥೆಗಳಿಂದ ಗೌರವ ಸಮರ್ಪಣೆಗಳೊಂದಿಗೆ  ಮೆರವಣಿಗೆಯ ಮೂಲಕ ಮೃತ ದೇಹವನ್ನು ಸಾಗಿಸಲಾಯಿತು. ಮೆರವಣಿಗೆಯಲ್ಲಿ ಸಾವಿರಾರು ನಾಗರಿಕರು ಮೃತಳಾದ ಚಂದನ ಅವರ ಆತ್ಮಕ್ಕೆ ಶಾಂತಿ ಕೋರಿದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ