ಭೀಕರ ರೈಲು ಅಪಘಾತ: ಹಳಿ ತಪ್ಪಿದ ಹಲವು ಬೋಗಿಗಳು; 2 ಸಾವು, 10 ಮಂದಿಗೆ ಗಾಯ - Mahanayaka
2:21 AM Monday 16 - September 2024

ಭೀಕರ ರೈಲು ಅಪಘಾತ: ಹಳಿ ತಪ್ಪಿದ ಹಲವು ಬೋಗಿಗಳು; 2 ಸಾವು, 10 ಮಂದಿಗೆ ಗಾಯ

18/07/2024

ಮತ್ತೊಂದು ರೈಲು ದುರಂತ ಘಟನೆ ನಡೆದಿದೆ. ಚಂಡೀಗಢ-ದಿಬ್ರುಘರ್ ಎಕ್ಸ್ ಪ್ರೆಸ್ ನ ಸುಮಾರು ಆರು ಬೋಗಿಗಳು ಉತ್ತರ ಪ್ರದೇಶದ ಗೊಂಡಾ ಬಳಿ ಹಳಿ ತಪ್ಪಿವೆ.

ಇಲ್ಲಿಯವರೆಗೆ ಇಬ್ಬರು ಸಾವನ್ನಪ್ಪಿದ ವರದಿಗಳಿವೆ ಮತ್ತು ಡಜನ್ಗಟ್ಟಲೆ ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ. ಹಳಿತಪ್ಪಿದ ಆರು ಬೋಗಿಗಳಲ್ಲಿ ಕನಿಷ್ಠ ನಾಲ್ಕು ಎಸಿ ಬೋಗಿಗಳು ಸೇರಿವೆ. ಜಿಲಾಹಿ ನಿಲ್ದಾಣದ ಬಳಿ ಈ ಅಪಘಾತ ಸಂಭವಿಸಿದೆ. ಪ್ರಸ್ತುತ 2 ಜನರು ಸಾವನ್ನಪ್ಪಿದ್ದಾರೆ ಮತ್ತು ಇತರ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ದೃಢಪಡಿಸಿದ್ದಾರೆ. ಅಲ್ಲದೇ ಗಾಯಗೊಂಡವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿದೆ. ಪ್ರಸ್ತುತ, ಪರಿಹಾರ ಮತ್ತು ರಕ್ಷಣಾ ಕಾರ್ಯಗಳು ನಡೆಯುತ್ತಿವೆ” ಎಂದು ಉತ್ತರ ಪ್ರದೇಶದ ಪರಿಹಾರ ಆಯುಕ್ತರು ತಿಳಿಸಿದ್ದಾರೆ.

“ಹಳಿ ತಪ್ಪುವ ಮೊದಲು ದೊಡ್ಡ ಶಬ್ದವನ್ನು ಕೇಳಿದ್ದೇನೆ” ಎಂದು ರೈಲಿನ ಚಾಲಕ ಆಘಾತಕಾರಿ ಹೇಳಿಕೆ ನೀಡಿದ್ದಾರೆ. ಇದು ರೈಲು ಹಳಿ ತಪ್ಪಿದ ಹಿಂದೆ ಸಮಾಜ ವಿರೋಧಿ ಶಕ್ತಿಗಳ ಕೈವಾಡವಿದೆ ಎಂಬ ಅನುಮಾನವನ್ನು ಹುಟ್ಟುಹಾಕಿದೆ. ಆದರೆ, ತನಿಖೆಯ ನಂತರವೇ ಸತ್ಯ ಹೊರಬರಲಿದೆ.
ರೈಲು ದಿಬ್ರುಗಢಕ್ಕೆ ತೆರಳುತ್ತಿತ್ತು. ರಕ್ಷಣಾ ಕಾರ್ಯಾಚರಣೆಯಲ್ಲಿ ಸ್ಥಳೀಯ ಆಡಳಿತಕ್ಕೆ ಸಹಾಯ ಮಾಡಲು ಸೇನಾ ಜವಾನರ ತುಕಡಿ ಸ್ಥಳಕ್ಕೆ ತಲುಪಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಕಚೇರಿಯ ಪ್ರಕಾರ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಗೊಂಡಾ ಜಿಲ್ಲೆಯಲ್ಲಿ ಸಂಭವಿಸಿದ ರೈಲು ಅಪಘಾತದ ಬಗ್ಗೆ ಗಮನ ಹರಿಸಿದ್ದಾರೆ. ಕೂಡಲೇ ಸ್ಥಳಕ್ಕೆ ತಲುಪಿ ಪರಿಹಾರ ಕಾರ್ಯಗಳನ್ನು ಚುರುಕುಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆಯೂ ಅವರು ಸೂಚನೆ ನೀಡಿದ್ದಾರೆ.


Provided by

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ