ಸಲಿಂಗ ಕಾಮಕ್ಕೆ ಬಲಿಯಾದ್ರಾ ಚಂದ್ರಶೇಖರ್?: ಮೃತದೇಹದಲ್ಲಿ ಒಳ ಉಡುಪು ಇರಲಿಲ್ಲ!
ದಾವಣಗೆರೆ: ಹೊನ್ನಾಳಿ ಶಾಸಕ ರೇಣುಕಾಚಾರ್ಯ ಅವರ ಸಹೋದರನ ಪುತ್ರ ಚಂದ್ರು ಸಾವಿನ ಪ್ರಕರಣ ಹಲವಾರು ಅನುಮಾನಗಳಿಗೆ ಕಾರಣವಾಗುತ್ತಿದ್ದು, ಚಂದ್ರು ತಂದೆ ನೀಡಿರುವ ಹೇಳಿಕೆ ಇದೀಗ ತೀವ್ರ ಚರ್ಚೆಗೆ ಕಾರಣವಾಗಿದೆ.
ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಇದು ಕೊಲೆ ಅಲ್ಲ ಅಪಘಾತ ಎನ್ನುವ ವಿಚಾರ ತಿಳಿದು ಬಂದಿದೆ ಎನ್ನಲಾಗುತ್ತಿದೆ. ಆದರೆ, ಚಂದ್ರು ತಂದೆ ಆಡಿರುವ ಮಾತುಗಳು ಚಂದ್ರಶೇಖರ್ ಸಲಿಂಗ ಕಾಮಕ್ಕೆ ಬಲಿಯಾದ್ರಾ? ಅನ್ನೋ ಅನುಮಾನಗಳಿಗೆ ಕಾರಣವಾಗಿದೆ.
ಮೃತಪಟ್ಟ ಸಂದರ್ಭದಲ್ಲಿ ಚಂದ್ರು ಒಳ ಉಡುಪು ಇರಲಿಲ್ಲ. ಚಂದ್ರುನ ಕಿವಿಗೆ ಕಚ್ಚಿದ್ದಾರೆ ಎಂಬ ಆರೋಪಗಳನ್ನು ಚಂದ್ರು ತಂದೆ ಮಾಡಿದ್ದಾರೆ. ಕಿರಣ್ ಮತ್ತು ಗೆಳೆಯರ ಮೇಲೆ ಚಂದ್ರು ತಂದೆ ಅನುಮಾನ ಪಟ್ಟಿದ್ದಾರೆ.
ಇತ್ತ ರೇಣುಕಾಚಾರ್ಯ ಈ ಕೇಸ್ ಸಂಬಂಧ ಬೇರೆಯದ್ದೇ ಆರೋಪ ಮಾಡ್ತಿದ್ದಾರೆ. ಬೆದರಿಕೆ ಕರೆ ಬಂದಿತ್ತು ಎಂಬಂತೆ ಹಲವು ಬಗೆಯ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಪೊಲೀಸರು ತನಿಖೆಯನ್ನು ಸರಿಯಾಗಿ ಮಾಡಿಲ್ಲ ಎಂದು ಆಕ್ರೋಶ ಕೂಡ ವ್ಯಕ್ತಪಡಿಸಿದ್ದಾರೆ.
ಚಂದ್ರು ತಂದೆ ನೀಡಿರುವ ಹೇಳಿಕೆ ಬಗ್ಗೆ ರೇಣುಕಾಚಾರ್ಯ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಆದರೆ, ಕಿರಣ್ ನನ್ನು ಪೊಲೀಸರು ಸರಿಯಾಗಿ ವಿಚಾರಣೆ ನಡೆಸಿಲ್ಲ, ಪಂಚನಾಮೆ ವೇಳೆ ನಮ್ಮನ್ನು ಕರೆದಿಲ್ಲ ಎಂದು ಪೊಲೀಸರು ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾಕಷ್ಟು ಅನುಮಾನಗಳಿಗೆ ಕಾರಣವಾಗಿರುವ ಚಂದ್ರಶೇಖರ್ ನಿಗೂಢ ಸಾವು ಪ್ರಕರಣ ದಿನಕ್ಕೊಂದು ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಪೋಸ್ಟ್ ಮಾರ್ಟಂ ವರದಿಯಿಂದ ಚಂದ್ರು ಸಾವಿನ ಸತ್ಯಾಸತ್ಯತೆ ತಿಳಿದು ಬರಬೇಕಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka