ಕಸ್ಟಮ್ಸ್ ಬ್ಯಾಗೇಜ್ ಡಿಕ್ಲರೇಷನ್ ನಿಯಮದಲ್ಲಿ ಬದಲಾವಣೆ ವಿಳಂಬ: ಗಲ್ಫ್ ನಿಂದ ಬಂಗಾರವನ್ನು ತರಲು ಅನಿವಾಸಿ ಭಾರತೀಯರಿಗೆ ತೊಂದರೆ
ಕಸ್ಟಮ್ಸ್ ಬ್ಯಾಗೇಜ್ ಡಿಕ್ಲರೇಷನ್ ನಿಯಮದಲ್ಲಿ ಬದಲಾವಣೆ ತರಲು ಕೇಂದ್ರ ಸರಕಾರ ಇನ್ನೂ ತಯಾರಾಗದೆ ಇರುವ ಕಾರಣದಿಂದ ಗಲ್ಫ್ ರಾಷ್ಟ್ರಗಳಿಂದ ಬಂಗಾರವನ್ನು ತರ ಬಯಸುವ ಅನಿವಾಸಿ ಭಾರತೀಯರಿಗೆ ತೊಂದರೆಯಾಗುತ್ತಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಬಂಗಾರದ ಬೆಲೆ ಗಗನಕೇರುತಿದ್ದರೂ ತೆರಿಗೆ ರಹಿತವಾಗಿ ಭಾರತಕ್ಕೆ ತರುವ ಬಂಗಾರದ ಬೆಲೆಯನ್ನು ಕೇಂದ್ರ ಸರಕಾರ ಏರಿಸಿಲ್ಲ. ಈಗಿನ ನಿಯಮವನ್ನು 2016ರಲ್ಲಿ ರೂಪಿಸಲಾಗಿದ್ದು ಆಗ ಬಂಗಾರಕ್ಕೆ ಇಷ್ಟು ಬೆಲೆ ಇರಲಿಲ್ಲ.
ಈ ಕಸ್ಟಮ್ಸ್ ನಿಯಮದ ಪ್ರಕಾರ ವಿದೇಶದಲ್ಲಿ ಒಂದು ವರ್ಷ ಇದ್ದು ಮರಳಿ ಬರುವ ಪುರುಷರು 20 ಗ್ರಾಂ ಬಂಗಾರವನ್ನು ಮತ್ತು ಮಹಿಳೆಯರು 40 ಗ್ರಾಂ ಬಂಗಾರವನ್ನು ಭಾರತಕ್ಕೆ ತರಬಹುದಾಗಿದೆ ಆದರೆ 20 ಗ್ರಾಂ ಬಂಗಾರಕ್ಕೆ 50,000 ರೂಪಾಯಿಯನ್ನು ನಿಗದಿಪಡಿಸಲಾಗಿದ್ದು 40 ಗ್ರಾಂ ಬಂಗಾರಕ್ಕೆ ಒಂದು ಲಕ್ಷ ರೂಪಾಯಿಯನ್ನು ನಿಗದಿಪಡಿಸಲಾಗಿದೆ. ಇದಕ್ಕಿಂತ ಹೆಚ್ಚಾದರೆ ತೆರಿಗೆಯನ್ನು ವಿಧಿಸಬಹುದು ಎಂದು ನಿಯಮದಲ್ಲಿ ಹೇಳಲಾಗಿದೆ.
2016ರಲ್ಲಿ ಬಂಗಾರಕ್ಕೆ ಇದ್ದ ಬೆಲೆಯನ್ನು ಆಧಾರವಾಗಿಸಿಕೊಂಡು ಈ ಬೆಲೆ ನಿಗದಿಪಡಿಸಲಾಗಿದೆ ಆದರೆ ಈಗ ಬಂಗಾರಕ್ಕೆ ಪ್ರತಿದಿನ ಬೆಲೆ ಹೆಚ್ಚಳವಾಗುತ್ತಿದೆ. ಗ್ರಾಮ್ ಗೆ 7,500 ರೂಪಾಯಿವರೆಗೆ ಬೆಲೆ ತಲುಪಿದೆ, ಇದರ ಪ್ರಕಾರ 50,000 ರೂಪಾಯಿಗೆ 8 ಗ್ರಾಂ ಬಂಗಾರ ಕೂಡ ಸಿಗುವುದಿಲ್ಲ.
ಹಿಂದಿನ ನಿಯಮವನ್ನು ಅನುಸರಿಸಿ 20 ಗ್ರಾಂ ತೂಕದ ಬಂಗಾರದೊಂದಿಗೆ ವಿಮಾನ ನಿಲ್ದಾಣಕ್ಕೆ ತಲುಪುವ ಸಾಮಾನ್ಯ ವ್ಯಕ್ತಿಗಳನ್ನು ಕಷ್ಟಮ್ಸ್ ಪರೀಕ್ಷೆಯ ವೇಳೆ ಹಿಡಿದಿಡಲಾಗುತ್ತದೆ ಮತ್ತು ಪ್ರಕರಣ ದಾಖಲಿಸಲಾಗುತ್ತದೆ. ಬೆಲೆಯ ಅಂತರವನ್ನು ತೋರಿಸಿ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ ಎಂದು ವರದಿಯಾಗಿದೆ.
ಆದ್ದರಿಂದ ಕಷ್ಟಮ್ಸ್ ಬ್ಯಾಗೇಜ್ ಡಿಕ್ಲರೇಶನ್ ನಿಯಮದಲ್ಲಿ ಇಷ್ಟು ರೂಪಾಯಿಯ ಬಂಗಾರ ಎಂದು ನಿಗದಿಪಡಿಸುವುದಕ್ಕಿಂತ ಇಷ್ಟು ಗಗ್ರಾಮ್ ಬಂಗಾರ ಎಂದು ಹೇಳಿದರೆ ಮಾರುಕಟ್ಟೆಯಲ್ಲಿ ಬಂಗಾರದ ಬೆಲೆ ಎಷ್ಟೇ ಹೆಚ್ಚು ಕಡಿಮೆಯಾದರೂ ಅನಿವಾಸಿ ಭಾರತೀಯರು ವಿಮಾನ ನಿಲ್ದಾಣದಲ್ಲಿ ತೊಂದರೆಗೆ ಒಳಪಡುವುದು ತಪ್ಪುತ್ತದೆ ಎಂದು ಹೇಳಲಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj