ಚಾರ್ಮಾಡಿ ಘಾಟ್: ರಸ್ತೆ ಬದಿಯಲ್ಲೇ ಹೊತ್ತಿ ಉರಿಯುತ್ತಿರುವ ಅರಣ್ಯ

ಕೊಟ್ಟಿಗೆಹಾರ: ಚಾರ್ಮಾಡಿ ಘಾಟ್‍ನ ಬಿದಿರುತಳ ಸಮೀಪ ಅರಣ್ಯದಲ್ಲಿ ಕಾಡ್ಗಿಚ್ಚಿನಿಂದಾಗಿ ಹತ್ತಾರು ಎಕರೆ ಅರಣ್ಯ ಬೆಂಕಿಗಾಹುತಿಯಾಗಿದೆ.
ಅರಣ್ಯದ ನಡುವೆ ಹಾದು ಹೋಗಿರುವ ರಸ್ತೆ ಬದಿಯಲ್ಲೇ ಬೆಂಕಿ ಧಗಧಗಿಸಿ ಉರಿಯುತ್ತಿದ್ದು ಬಿರುಬಿಸಿಲಿನಿಂದ ಒಣಗಿ ನಿಂತ ಹುಲ್ಲು, ಒಣಗಿದ ಎಲೆಗಳಿಂದಾಗಿ ವೇಗವಾಗಿ ಎಲ್ಲೆಡೆಗೆ ಹರಡುತ್ತಿದೆ.
ಅರಣ್ಯ ಇಲಾಖೆ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸುತ್ತಿದ್ದು ಒಂದೆಡೆ ಬೆಂಕಿ ಆರಿಸಿದರೆ ಮತ್ತೊಂದು ಕಡೆಯಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದ, ಅರಣ್ಯ ಸಿಬ್ಬಂದಿಗೆ ಸವಾಲಾಗಿ ಪರಿಣಮಿಸಿದೆ.
ಕಳೆದ ಕೆಲ ದಿನಗಳಿಂದ ಚಾರ್ಮಾಡಿ ಘಾಟ್‍ನ ಆಲೇಕಾನ್ ಅರಣ್ಯ, ದೇವರಮನೆ, ಬಲ್ಲಾಳರಾಯನ ದುರ್ಗ ಭಾಗದಲ್ಲಿ ಕಾಡ್ಗಿಚ್ಚು ಕಾಣಿಸಿಕೊಳ್ಳುತ್ತಿದೆ. ಪೆಬ್ರವರಿ ತಿಂಗಳಲ್ಲಿ ಸುರಿಯುವ ಮಳೆ ಈ ಬಾರಿ ಬಾರದೇ ಇರುವುದರಿಂದ ಕಾಡ್ಗಿಚ್ಚು ಹಬ್ಬುವುದು ಹೆಚ್ಚಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw