ಚಾರ್ಮಾಡಿ ಘಾಟ್: ಶೌಚಾಲಯದ ಮೇಲೆ ಮರ ಬಿದ್ದು ಹಾನಿ
ಕೊಟ್ಟಿಗೆಹಾರ: ಚಾರ್ಮಾಡಿ ಘಾಟಿಯ ಅಣ್ಣಪ್ಪ ಸ್ವಾಮಿ ದೇವಸ್ಥಾನದ ಬಲಗಡೆ ಇರುವ ಸಾರ್ವಜನಿಕ ಶೌಚಾಲಯದ ಮೇಲೆ ಮರ ಉರುಳಿ ಬಿದ್ದು ಶೌಚಾಲಯದ ಮೇಲ್ಛಾವಣಿ ದ್ವಂಸವಾಗಿದೆ.
ಕಳೆದ ಕೆಲವು ತಿಂಗಳುಗಳ ಹಿಂದೆ ಪಾದಯಾತ್ರಿಕರಿಗಾಗಿ ಶೌಚಾಲಯದ ಮುಂಭಾಗದಲ್ಲಿ ಹೊಸ ಶೀಟುಗಳನ್ನು ಹಾಕಿ ಶೌಚಾಲಯ ದುರಸ್ತಿ ಮಾಡಲಾಗಿತ್ತು.ಮಹಿಳೆಯರಿಗೆ ಹಾಗೂ ಗಂಡಸರಿಗೆ ಪ್ರತ್ಯೇಕ ತಡೆ ಶೀಟುಗಳನ್ನು ಹಾಕಿ ಅನುಕೂಲ ಮಾಡಿ ಕೊಡಲಾಗಿತ್ತು.
ಆದರೆ ಪಕ್ಕದಲ್ಲಿ ಬೃಹತ್ತಾದ ಮರ ಬಿದ್ದು ಮೇಲ್ಛಾವಣಿ ಹಾಗೂ ತಡೆ ಶೀಟುಗಳು ದ್ವಂಸವಾಗಿ ಅಪಾರ ಹಾನಿ ಸಂಭವಿಸಿದೆ.ಸ್ಥಳಕ್ಕೆ ಉಪ ವಲಯ ಅರಣ್ಯ ಅಧಿಕಾರಿ ಬಸವರಾಜ್, ಅರಣ್ಯ ರಕ್ಷಕ ಅಭಿ ಭೇಟಿ ನೀಡಿ ಪರಿಶೀಲಿಸಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 7483551849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw