ಚಾರ್ಮಾಡಿ ಘಾಟ್ ಮೃತದೇಹ ಶೋಧಕ್ಕೆ ತೆರೆ : ಬರೀಗೈಯಲ್ಲಿ ವಾಪಾಸಾದ ಬೆಂಗಳೂರು ಪೊಲೀಸರ ತಂಡ
ಕೊಟ್ಟಿಗೆಹಾರ: ಕಳೆದ ಮೂರು ದಿನಗಳಿಂದ ಚಾರ್ಮಾಡಿ ಘಾಟಿಯಲ್ಲಿ ಎಸೆದಿದ್ದ ಎಚ್.ಶರತ್ ಅವರ ಶವದ ಶೋಧವನ್ನು ಮುಂದುವರೆಸಿದ್ದ ಪೊಲೀಸರು ಗುರುವಾರವೂ ಶೋಧ ಕಾರ್ಯ ನಡೆಸಿ ಶವ ಸಿಗದೇ ಶೋಧ ಕಾರ್ಯಕ್ಕೆ ತೆರೆ ಎಳೆದು ಕರೆ ತಂದಿದ್ದ ಆರೋಪಿಗಳ ಜತೆ ಪೊಲೀಸರು ಬೆಂಗಳೂರಿಗೆ ರಾತ್ರಿ ಪ್ರಯಾಣ ಬೆಳೆಸಿದರು.
ಆರೋಪಿಗಳು ಶವ ಎಸೆದ ಜಾಗವನ್ನು ಗುರುತು ಹಚ್ಚದೇ ಇರುವುದೇ ಶವ ಶೋಧ ಕಾರ್ಯ ವಿಳಂಬವಾಗಲು ಕಾರಣವಾಯಿತು. ಮೂರು ದಿನ ಕಬ್ಬನ್ ಪಾರ್ಕ್ ಮತ್ತು ಅಶೋಕನಗರ ಪೊಲೀಸರು ಮೂಡಿಗೆರೆಯ ಸಾಮಾಜಿಕ ಸಕ್ರೀಯ ಕಾರ್ಯಕರ್ತರು,ಸಮಾಜ ಸೇವಕ ಮೊಹಮ್ಮದ್ ಆರೀಪ್ ಹಾಗೂ ಸ್ಥಳೀಯರ ಸಹಕಾರದಿಂದ ಚಾರ್ಮಾಡಿ ಅಣ್ಣಪ್ಪ ಸ್ವಾಮಿ ದೇವಸ್ಥಾನದಿಂದ ಮುಂದಿನ ಪ್ರಪಾತ, ಸೋಮನಕಾಡು ಹಾಗೂ ದಕ್ಷಿಣ ಕನ್ನಡ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಹಲವೆಡೆ ಇಂಚಿಂಚು ಶೋಧ ಕಾರ್ಯಾಚರಣೆ ನಡೆಸಿ ಶವ ಹಾಕಿದ್ದ ಗೋಣಿಚೀಲ ಶೋಧಿಸಿದರೂ ಶವ ಸಿಗದೇ, ಕರೆ ತಂದಿದ್ದ ಇಬ್ಬರು ಆರೋಪಿಗಳನ್ನು ವಾಪಾಸ್ ಕರೆದುಕೊಂಡು ಹೋಗಿದ್ದಾರೆ.
ಚಾರ್ಮಾಡಿ ಘಾಟಿಯಲ್ಲಿ ಶೋಧ ಕಾರ್ಯದಲ್ಲಿ ಸ್ಥಳೀಯ ಎರಡು ಜಿಲ್ಲಾ ವ್ಯಾಪ್ತಿಯ ಪತ್ರಕರ್ತರು ಕೈಜೋಡಿಸಿದ್ದರು. ಅವರೆಲ್ಲರ ಸಹಕಾರವನ್ನು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯ ಎಸಿಪಿ ರಾಜೇಂದ್ರ ಹಾಗೂ ಅವರ ವಿಶೇಷ ಪೊಲೀಸ್ ತಂಡದವರು ಅಭಿನಂದಿಸಿದರು.
ಶವ ಶೋಧ ಕಾರ್ಯಾಚರಣೆಯಲ್ಲಿ ಕಬ್ಬನ್ ಪಾರ್ಕ್ ಎಸಿಪಿ ರಾಜೇಂದ್ರ, ಠಾಣೆಯ ಸರ್ಕಲ್ ಇನ್ ಸ್ಪೆಕ್ಟರ್ ಚೈತನ್ಯ, ಅಶೋಕನಗರ ಪೊಲೀಸ್ ಠಾಣೆಯ ಸಬ್ ಇನ್ ಸ್ಪೆಕ್ಟರ್ ಜಿ.ಎ.ಅಶ್ವಿನಿ, ಸಹಾಯಕ ಇನ್ ಸ್ಪೆಕ್ಟರ್ ಹರಿಚಂದ್ರ, ಎಎಸೈಐ ರೇಣುಕಾ, ಪೊಲೀಸ್ ಸಿಬ್ಬಂದಿಗಳಾದ ನಂದೀಶ್, ವಸಂತ, ಜಾಕೀರ್, ಲೋಕೇಶ್, ಸೋಮು ಲಮಾಣಿ, ಪ್ರಮೋದ್ ಭಾಗವಹಿಸಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw