ಚಾರ್ಮಾಡಿ ಘಾಟಿಯಲ್ಲಿ ರಾತ್ರಿ ವೇಳೆ ಕೆಟ್ಟು ನಿಂತ ಲಾರಿ: ಪ್ರಯಾಣಿಕರ ಪರದಾಟ
ಬೆಳ್ತಂಗಡಿ: ಚಾರ್ಮಾಡಿ ಘಾಟಿಯಲ್ಲಿ ಲಾರಿಯೊಂದು ಕೆಟ್ಟು ನಿಂತ ಪರಿಣಾಮ ಗಂಟೆಗಟ್ಟಲೆ ವಾಹನ ಸಂಚಾರಕ್ಕೆ ತಡೆಯುಂಟಾಯಿತು.
ಚಾರ್ಮಾಡಿ ಘಾಟಿಯ 10 ನೇ ತಿರುವಿನಲ್ಲಿ ಜು 19 ಮಂಗಳವಾರ ರಾತ್ರಿ ಸುಮಾರು 8:30 ರ ಸುಮಾರಿಗೆ ಇಂಧನ ತುಂಬಿದ ಟ್ಯಾಂಕರ್ ತಾಂತ್ರಿಕ ದೋಷದಿಂದ ಮಾರ್ಗ ಮದ್ಯೆ ಕೆಟ್ಟು ನಿಂತ ಪರಿಣಾಮ ವಾಹನ ಸಂಚಾರಕ್ಕೆ ತಡೆಯುಂಟಾಯಿತು.
ಬೆಂಗಳೂರು ಸೇರಿಂತೆ ಇನ್ನಿತರ ಕಡೆಗಳಿಗೆ ಹೋಗುವ ಬಸ್ಸು ಹಾಗೂ ಇತರ ವಾಹನಗಳು ಸಾಲುಗಟ್ಟಿ ನಿಲ್ಲುವಂತಾಯಿತು. ಈ ಬಗ್ಗೆ ಮಾಹಿತಿ ಪಡೆದ ಹೊಯ್ಸಳದ ಪೊಲೀಸರು ಕೊಟ್ಟಿಗೆ ಹಾರ ಚಾರ್ಮಾಡಿ ಗೇಟ್ ಬಳಿ ನಿಯಂತ್ರಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ನಂತರ ಕ್ರೇನ್ ತರಿಸಿ ಟ್ಯಾಂಕರ್ ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಈಗಾಗಲೇ ಶಿರಾಡಿ, ಸಂಪಾಜೆಯಲ್ಲಿ ಮಾರ್ಗ ಕುಸಿತದಿಂದ ವಾಹನ ಸಂಚಾರಕ್ಕೆ ತಡೆಯಾಗಿರುವುದರಿಂದ ಹೆಚ್ಚಿನ ವಾಹನ ಸಂಚಾರ ಈ ರಸ್ತೆಯಲ್ಲಿಇದೆ. ವಾಹನ ದಟ್ಟನೆ ಹಾಗೂ ಅತೀ ಹೆಚ್ಚು ಬಸ್ಸುಗಳು ಸಂಚಾರಿಸುವುದರಿಂದ ನಿಯಂತ್ರಿಸಲು ಪೊಲೀಸರು ಹರ ಸಾಹಸ ಪಡುವಂತಾಯಿತು. ಸ್ಥಳದಲ್ಲಿ ಹೊಯ್ಸಳದ ಪಿಎಸ್ ವೆಂಕಪ್ಪ ಮತ್ತು ಬಸವರಾಜ್, ಸಂಚಾರಿ ಇದ್ದು ಸಂಚಾರ ನಿಯಂತ್ರಿಸಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka