ಫೇಸ್ ಬುಕ್-ವಾಟ್ಸಾಪ್ ನಲ್ಲಿ ಚಾಟ್ ಮಾಡಿದಳು ಎಂದು ಪತ್ನಿಯನ್ನು ಕೊಂದ ಪತಿ! - Mahanayaka

ಫೇಸ್ ಬುಕ್-ವಾಟ್ಸಾಪ್ ನಲ್ಲಿ ಚಾಟ್ ಮಾಡಿದಳು ಎಂದು ಪತ್ನಿಯನ್ನು ಕೊಂದ ಪತಿ!

05/02/2021

ತೆಲಂಗಾಣ:  ಪತ್ನಿ ಫೇಸ್ ಬುಕ್ ಹಾಗೂ ವಾಟ್ಸಾಪ್ ನಲ್ಲಿ ಹೆಚ್ಚು ಚಾಟ್ ಮಾಡುತ್ತಿದ್ದಾಳೆ ಎಂಬ ಕಾರಣಕ್ಕೆ ಕೋಪಗೊಂಡ ಪತಿಯೋರ್ವ ಪತ್ನಿಯನ್ನು ಹತ್ಯೆ ಮಾಡಿರುವ ಘಟನೆ ತೆಲಂಗಾಣದ ಖಮ್ಮಮ್​ ಜಿಲ್ಲೆಯ ಯೆರ್ರಪಲೇಂ ಗ್ರಾಮದಲ್ಲಿ ನಡೆದಿದೆ.

ಎರ್ರಮಲ್ಲಾ ನವ್ಯಾ ಮೃತ ಮಹಿಳೆಯಾಗಿದ್ದು, ಪತ್ನಿ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾಗಿ  ಸಕ್ರಿಯವಾಗಿದ್ದಾಳೆ ಎಂಬ ಕಾರಣಕ್ಕಾಗಿ ಪ್ರತಿ ದಿನ ದಂಪತಿ ನಡುವೆ ಜಗಳ ಏರ್ಪಡುತ್ತಿತ್ತು. ಇದೇ ಜಗಳ ತಾರಕಕ್ಕೇರಿ ಕೊಲೆಯಲ್ಲಿ ಅಂತ್ಯವಾಗಿದೆ ಎಂದು ಹೇಳಲಾಗಿದೆ.

ನಾಗ ಶೇಷು ರೆಡ್ಡಿ ಕೊಲೆ ಆರೋಪಿಯಾಗಿದ್ದು, ಮದುವೆಯಾಗಿ ಕೆಲವೇ ತಿಂಗಳಲ್ಲಿ ಈತ ತನ್ನ ಪತ್ನಿಯನ್ನು ಹತ್ಯೆ ಮಾಡಿದ್ದಾನೆ. ತನ್ನ ಪತ್ನಿ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾಗಿ ಸಕ್ರಿಯವಾಗಿದ್ದು, ಸದಾ ಚಾಟ್ ಮಾಡುತ್ತಿರುತ್ತಾಳೆ. ಆಕೆಗೆ ಬೇರೆ ಸಂಬಂಧವಿದೆ ಎಂದು ಆರೋಪಿ ಶಂಕಿಸುತ್ತಿದ್ದ ಎಂದು ಹೇಳಲಾಗದೆ.

ಇತ್ತೀಚಿನ ಸುದ್ದಿ