ಚಾಯ್ ವಾಲ ಪ್ರಧಾನಿಯಾಗಬಹುದು, ಚಾಯ್ ವಾಲಿ ಹಳ್ಳಿಯ ಮುಖ್ಯಸ್ಥೆಯಾಗಬಾರದೇ? | ರಾಜಕೀಯಕ್ಕೆ ಇಳಿದ ಚಾಯ್ ವಾಲಿ ಯಾರು? - Mahanayaka
9:58 PM Thursday 14 - November 2024

ಚಾಯ್ ವಾಲ ಪ್ರಧಾನಿಯಾಗಬಹುದು, ಚಾಯ್ ವಾಲಿ ಹಳ್ಳಿಯ ಮುಖ್ಯಸ್ಥೆಯಾಗಬಾರದೇ? | ರಾಜಕೀಯಕ್ಕೆ ಇಳಿದ ಚಾಯ್ ವಾಲಿ ಯಾರು?

chaywala
12/04/2021

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರಿಂದ ಸ್ಫೂರ್ತಿ ಪಡೆದ ಚಹಾ ಮಾರುವ ಅಂಗಡಿಯ ಮಹಿಳೆಯೊಬ್ಬರು ತಾನೂ ರಾಜಕೀಯಕ್ಕೆ ಕಾಲಿಟ್ಟಿದ್ದು,  ಮೂರು ವರ್ಷಗಳಿಂದ ಚಹಾ ಮಾರಾಟ ಮಾಡುತ್ತಿದ್ದ ಮಹಿಳೆ ಇದೀಗ ಪ್ರಧಾನಿ ನರೇಂದ್ರ ಮೋದಿ ಅವರಿಂದ ಸ್ಫೂರ್ತಿ ಪಡೆದು ಪಂಚಾಯತ್ ಚುನಾವಣೆಗೆಯಲ್ಲಿ ಸ್ಪರ್ಧೆ ಮಾಡಲು ಮುಂದಾಗಿದ್ದಾರೆ.

ಮೀರತ್ ವಿವಿಯಿಂದ ಪದವಿ ಪಡೆದಿರುವ ಮೀನಾಕ್ಷಿ ಎಂಬ ಮಹಿಳೆ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಯೋಜನೆಯಡಿಯಲ್ಲಿ ಚಹಾದಂಗಡಿ ತೆರೆದಿದ್ದರು. ಚಹಾದ ಅಂಗಡಿ ತೆರೆಯುವ ಮೂಲಕ ತಮ್ಮ ಮೂವರು ಮಕ್ಕಳನ್ನು ಸಲಹುತ್ತಿದ್ದಾರೆ. ಪತಿ ಗ್ಯಾನ್ ಸಿಂಗ್ ಕಾರ್ಪೆಂಟರ್ ಕೆಲಸ ಮಾಡುತ್ತಿದ್ದಾರೆ.

ಚಹಾವಾಲಾ ಆಗಿದ್ದ ಪ್ರಧಾನಿ ನರೇಂದ್ರ ಮೋದಿ ದೇಶದ ಪ್ರಧಾನಿಯಾದರು. ಚಹಾವಾಲಿಯಾಗಿರುವ ನಾನೇಕೆ ಹಳ್ಳಿಯ ಮುಖ್ಯಸ್ಥೆಯಾಗಬಾರದು ಎಂದು ಮೀನಾಕ್ಷಿ ಪ್ರಶ್ನಿಸಿದ್ದಾರೆ. ನಾನು ಸ್ವತಂತ್ರವಾಗಿ ಸ್ಪರ್ಧಿಸಲು ನಿರ್ಧರಿಸಿದ್ದೇನೆ. ಹಳ್ಳಿಯ ಜನರ ಬೆಂಬಲ ಸಂಪೂರ್ಣವಾಗಿ ನನಗಿದೆ. ಜನರು ಕೂಡ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ತನ್ನನ್ನು ಒತ್ತಾಯಿಸಿದ್ದಾರೆ ಎಂದು ಮಹಿಳೆ ಹೇಳಿದ್ದಾರೆ.

ಇತ್ತೀಚಿನ ಸುದ್ದಿ