ಪ್ರಾಂಚೈಸಿ ಹೆಸರಿನಲ್ಲಿ ಮೋಸ: ‘ಇಡ್ಲಿ ಗುರು’ ಮಾಲಿಕ ಕಾರ್ತಿಕ್ ಶೆಟ್ಟಿ ಅರೆಸ್ಟ್! - Mahanayaka
5:16 AM Saturday 7 - September 2024

ಪ್ರಾಂಚೈಸಿ ಹೆಸರಿನಲ್ಲಿ ಮೋಸ: ‘ಇಡ್ಲಿ ಗುರು’ ಮಾಲಿಕ ಕಾರ್ತಿಕ್ ಶೆಟ್ಟಿ ಅರೆಸ್ಟ್!

idly guru
14/02/2024

ಬೆಂಗಳೂರು: ಪ್ರಾಂಚೈಸಿ ಹೆಸರಿನಲ್ಲಿ ಮೋಸ ಮಾಡಿರುವ ಆರೋಪದಲ್ಲಿ ‘ಇಡ್ಲಿ ಗುರು’ ಹೊಟೇಲ್ ಮಾಲಿಕನನ್ನು ಪೊಲೀಸರು ಮುಂಬೈನಲ್ಲಿ ಬಂಧಿಸಿದ್ದಾರೆ.

ಪ್ರಾಂಚೈಸಿ ಹೆಸರಿನಲ್ಲಿ ತನ್ನ ಬಳಿಯಿಂದ 3 ಲಕ್ಷ ರೂಪಾಯಿ ಹಣ ಪಡೆದು ಮೋಸ ಮಾಡಲಾಗಿದೆ. ಫುಡ್ ಕಾರ್ಟ್ ತಂದು ನಿಲ್ಲಿಸಿ ಸ್ವಲ್ಪ ದಿನವಾದರೂ ವ್ಯಾಪಾರವಾಗುತ್ತಿಲ್ಲ, ಬೇರೆ ಶಿಫ್ಟ್ ಮಾಡೋಣ ಅಂತ ಶಿಫ್ಟ್ ಮಾಡಿದರು. ಕಮಿಷನ್ ನೀಡುವುದಾಗಿ ಹೇಳಿ ಕಮಿಷನ್ ಸಹ ನೀಡಿಲ್ಲ, ಅಂಗಡಿಗೆ ಖರ್ಚಾದ ಹಣವನ್ನೂ ನೀಡಿಲ್ಲ, ಈ ಬಗ್ಗೆ ಆರೋಪಿಗಳನ್ನ ಭೇಟಿಯಾದ ವೇಳೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಚೇತನ್ ಎಂಬವರು  ದೂರು ನೀಡಿದ್ದರು. ಈ ದೂರಿನನ್ವಯ ಕಾಮಾಕ್ಷಿಪಾಳ್ಯ ಪೊಲೀಸರು ಎಫ್ ಐಆರ್ ದಾಖಲಿಸಿದ್ದರು.

ಹೊಟೇಲ್ ಮಾಲಿಕ ಕಾರ್ತಿಕ್ ಶೆಟ್ಟಿ, ಆತನ ಪತ್ನಿ ಮಂಜುಳಾ, ತಂದೆ ಬಾಬು ಶೆಟ್ಟಿ ಹಾಗೂ ಹೊಟೇಲ್ ಸಿಬ್ಬಂದಿ ದಿವಾಕರ್ ಎಂಬಾತನ ವಿರುದ್ಧ ವಂಚನೆ ಪ್ರಕರಣ ದಾಖಲಾಗಿತ್ತು.


Provided by

ಎಫ್ ಐಆರ್ ದಾಖಲಾಗುತ್ತಿದ್ದಂತೆಯೇ ಕಾರ್ತಿಕ್ ಶೆಟ್ಟಿ ತಲೆಮರೆಸಿಕೊಂಡಿದ್ದ, ಇಂದು ಮುಂಬೈನಲ್ಲಿ ಕಾರ್ತಿಕ್ ಶೆಟ್ಟಿಯನ್ನು ಬಂಧಿಸಿರುವ ಪೊಲೀಸರು ವಿಚಾರಣೆಗಾಗಿ ಕರೆತರುತ್ತಿದ್ದಾರೆ ಎಂದು ವರದಿಯಾಗಿದೆ.

ಇತ್ತೀಚಿನ ಸುದ್ದಿ