ದೇವರಿಗೇ ಮೋಸ!: 2 ಸಾವಿರ ನೋಟು ಜೆರಾಕ್ಸ್ ಮಾಡಿ ಹುಂಡಿಗೆ ಹಾಕಿದ ಭಕ್ತ!

ಚಿಕ್ಕಮಗಳೂರು: ದೇವರಿಗ್ಯಾಕೆ ದುಡ್ಡು… ಅನ್ನೋ ಪ್ರಶ್ನೆ ಸಾಕಷ್ಟು ಜನ ಕೇಳ್ತಾರೆ, ಆದ್ರೆ ಇಲ್ಲೊಬ್ಬ ಭಕ್ತ ಆಸಾಮಿ ದೇವರಿಗೇ ನಕಲಿ ನೋಟು ಹಾಕಿ ಯಾಮಾರಿಸಿದ ಘಟನೆ ನಡೆದಿದೆ.
ಹೌದು… ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ದಕ್ಷಿಣ ಕಾಶಿ ಕಳಸೇಶ್ವರ ದೇವಾಲಯದ ಹುಂಡಿಯಲ್ಲಿ ನಕಲಿ ನೋಟೊಂದು ಪತ್ತೆಯಾಗಿದೆ. ಭಕ್ತನೋರ್ವ 2 ಸಾವಿರ ರೂಪಾಯಿಯ ನೋಟನ್ನು ಕಲರ್ ಜೆರಾಕ್ಸ್ ಮಾಡಿ ದೇವರ ಹುಂಡಿಗೆ ಹಾಕಿದ್ದಾನೆ.
ಹುಂಡಿಯಲ್ಲಿ ಸಿಕ್ಕಿದ ಜೆರಾಕ್ಸ್ ನೋಟನ್ನು ಕಂಡು ಸದಸ್ಯರು ಶಾಕ್ ಆಗಿದ್ದಾರೆ. ಕೊನೆಗೆ ಜೆರಾಕ್ಸ್ ನೋಟನ್ನು ಆಡಳಿತ ಮಂಡಳಿಯವರು ಹರಿದು ಹಾಕಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw