ಸರ್ಕಾರದಿಂದಲೇ ಈ ಬಡ ಜೀವಗಳಿಗೆ ವಂಚನೆ: ಜೀವನದಲ್ಲಿ ಜಿಗುಪ್ಸೆಗೊಂಡ ನೆರೆ ಸಂತ್ರಸ್ತರಿಂದ ಸಾವಿಗೆ ಯತ್ನ
ಮೂಡಿಗೆರೆ: ನಾಲ್ಕು ವರ್ಷಗಳಿಂದ ನೆರೆ ಸಂತ್ರಸ್ತರಿಗೆ ಪರಿಹಾರ ನೀಡದೇ, ಮೂಲಭೂತ ಸೌಕರ್ಯ ಕೂಡ ನೀಡದೇ ಸರ್ಕಾರ ಕೇವಲ ಭರವಸೆಗಳನ್ನು ನೀಡುತ್ತಲೇ ವಂಚಿಸುತ್ತಿದ್ದು, ಸರ್ಕಾರದ ನಿರ್ಲಕ್ಷ್ಯದಿಂದ ಜಿಗುಪ್ಸೆಗೊಂಡ ಗ್ರಾಮಸ್ಥರು ಪೆಟ್ರೋಲ್ ಸುರಿದುಕೊಂಡು ಸಾವಿಗೆ ಶರಣಾಗಲು ಯತ್ನಿಸಿದ ಘಟನೆ ಮೂಡಿಗೆರೆ ತಾಲೂಕು ಕಚೇರಿಯಲ್ಲಿ ನಡೆಯಿತು.
ಮೂಡಿಗೆರೆ ತಾಲೂಕಿನ ಮಲೆಮನೆ-ಮಧುಗುಂಡಿ ಗ್ರಾಮಸ್ಥರು 2019ರಲ್ಲಿ 11 ಕುಟುಂಬಗಳು ನೆರೆಯಿಂದ ಬದುಕು ಕಳೆದುಕೊಂಡಿದ್ದರು. ನೆರೆಯಿಂದಾಗಿ ಗ್ರಾಮಸ್ಥರು ಮನೆ-ಆಸ್ತಿ-ಹೊಲ-ಗದ್ದೆ-ತೋಟ ಎಲ್ಲವನ್ನೂ ಕಳೆದುಕೊಂಡಿದ್ದರು. ಈ ಸಂದರ್ಭದಲ್ಲಿ ಸರ್ಕಾರ ಸೂಕ್ತ ಪರಿಹಾರದ ಭರವಸೆ ನೀಡಿತ್ತು. ಆದರೆ ಇದೀಗ ನಾಲ್ಕು ವರ್ಷಗಳು ಕಳೆದರೂ ಗ್ರಾಮಸ್ಥರನ್ನು ವಂಚಿಸಿದ್ದು, ಪರ್ಯಾಯ ಜಾಗ ತೋರಿಸಿದರೂ, ಆ ಜಾಗಕ್ಕೆ ಮತ್ತೊಬ್ಬರಿಗೆ ದಾಖಲೆ ಮಾಡಿಕೊಟ್ಟು ವಂಚಿಸಿದೆ ಎಂದು ಗ್ರಾಮಸ್ಥರು ಕಣ್ಣೀರು ಹಾಕಿದ್ದಾರೆ.
ಮನೆಯ ಒಂದು ಚಮಚ ಕೂಡ ಸಿಗದಂತೆ ಎಲ್ಲವನ್ನೂ ನಾವು ಕಳೆದುಕೊಂಡಿದ್ದೇವೆ. ಸರ್ಕಾರ ಏನಾದರೂ ಪರಿಹಾರ ನೀಡುತ್ತದೆ ಎನ್ನುವ ಭರವಸೆಯಲ್ಲಿದ್ದೆವು, ಆದರೆ ಇದೀಗ ತಮ್ಮ ಭವಿಷ್ಯದ ಬಗ್ಗೆ ಆತಂಕದಲ್ಲಿದ್ದೇವೆ ಎಂದು ನೊಂದ ಸಂತ್ರಸ್ತರು ಕಣ್ಣೀರು ಹಾಕಿದ್ದಾರೆ.
ಯಾವುದೋ ಕೆಲಸಕ್ಕೆ ಬಾರದ ವಿಚಾರಗಳಿಗೆ ನಮ್ಮ ಸರ್ಕಾರಗಳು ಕೋಟಿ ಕೋಟಿ ಹಣವನ್ನು ಕಣ್ಣು ಮುಚ್ಚಿ ಮಂಜೂರು ಮಾಡುತ್ತಿದೆ. ಆದ್ರೆ, ನಿಜವಾಗಿಯೂ ವಾಸಿಸಲು ಸೂರು, ಮೂಲಭೂತ ವ್ಯವಸ್ಥೆಗಳನ್ನು ಜನರು ಪಡೆಯಬೇಕಾದರೆ, ಭಿಕ್ಷೆ ಬೇಡುವುದಕ್ಕೂ ಹೀನಾಯ ಸ್ಥಿತಿಗೆ ಬಂದು ನಿಲ್ಲಬೇಕೆ? ಅನ್ನೋ ಪ್ರಶ್ನೆಗಳು ಕೇಳಿ ಬಂದಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw