ಸತತ 22 ದಿನಗಳ ನಂತರ ನಾಪತ್ತೆಯಾಗಿದ್ದ ಹೆಣ್ಣು ಚೀತಾ ಪ್ರತ್ಯಕ್ಷ: ಎಲ್ಲಿಗೆ ಹೋಗಿತ್ತು ಚಿರತೆ..? - Mahanayaka
7:17 PM Wednesday 11 - December 2024

ಸತತ 22 ದಿನಗಳ ನಂತರ ನಾಪತ್ತೆಯಾಗಿದ್ದ ಹೆಣ್ಣು ಚೀತಾ ಪ್ರತ್ಯಕ್ಷ: ಎಲ್ಲಿಗೆ ಹೋಗಿತ್ತು ಚಿರತೆ..?

13/08/2023

ಜುಲೈ 21ರಂದು ಮಧ್ಯಪ್ರದೇಶದ ಶಿಯೋಪುರ್ ಜಿಲ್ಲೆಯ ಕುನೋ ರಾಷ್ಟ್ರೀಯ ಉದ್ಯಾನವದಲ್ಲಿ ನಾಪತ್ತೆಯಾಗಿದ್ದ ಹೆಣ್ಣು ಚೀತಾ ಕೊನೆಗೂ 22 ದಿನಗಳ ನಂತರ ಪತ್ತೆಯಾಗಿದೆ. ದಕ್ಷಿಣ ಆಫ್ರಿಕಾದಿಂದ ತರಲಾಗಿದ್ದ ಚೀತಾಗಳ ಪೈಕಿ ಈ ಹೆಣ್ಣು ಚೀತಾಗೆ ಆಳವಡಿಸಿದ್ದ ರೆಡಿಯೋ ಕಾಲರ್ ಕೆಲಸ ಮಾಡುವುದನ್ನು ನಿಲ್ಲಿಸಿದ್ದ ಬಳಿಕ ಈ ಚೀತಾ ನಾಪತ್ತೆಯಾಗಿತ್ತು.

ಕ್ಷಣವೇ ಕಾರ್ಯಾಚರಣೆ ಪ್ರಾರಂಭಿಸಿದ ಅಧಿಕಾರಿಗಳು ನಿರ್ವಾ ಹೆಸರಿನ ಈ ಹೆಣ್ಣು ಚೀತಾದ ಪತ್ತೆಗೆ ವ್ಯಾಪಕ ಶೋಧ ನಡೆಸಿದ್ದರು. ಸತತ 22 ದಿನಗಳ ಕಾರ್ಯಾಚರಣೆಯ ಫಲವಾಗಿ ಈ ರಾಷ್ಟ್ರೀಯ ಉದ್ಯಾನವನದ  ಧೋರೆಟ್ ವ್ಯಾಪ್ತಿಯಲ್ಲಿ ಇಂದು ಈ ಚೀತಾವನ್ನು ಸೆರೆ ಹಿಡಿಯಲಾಗಿದೆ.

ನಿರ್ವಾಳನ್ನು ಪತ್ತೆಹಚ್ಚುವುದಕ್ಕಾಗಿ ಅಧಿಕಾರಿಗಳು, ಪಶುವೈದ್ಯರು, ಚೀತಾ ಟ್ರ್ಯಾಕರ್ ಗಳು ಸೇರಿದಂತೆ ನೂರಕ್ಕೂ ಹೆಚ್ಚು ಕ್ಷೇತ್ರ ಸಿಬ್ಬಂದಿ ಹಗಲಿರುಳು ಕಾರ್ಯಾಚರಣೆ ನಡೆಸಿದ್ದರು. ಇಷ್ಟು ಮಾತ್ರವಲ್ಲದೇ ಎರಡು ಡ್ರೋನ್ ತಂಡ, ಒಂದು ಶ್ವಾನದಳ ಮತ್ತು ಸಾಕಾನೆಗಳನ್ನೂ ಸಹ ಈ ಕಾರ್ಯಾಚರಣೆಯಲ್ಲಿ ಸೇರಿಸಿಕೊಳ್ಳಲಾಗಿತ್ತು. ಕೊನೆಗೂ ಉಪಗ್ರಹದ ಮೂಲಕ ಚೀತಾ ಇರುವಿಕೆಯ ಮಾಹಿತಿ ಲಭಿಸಿತ್ತು.

ಇತ್ತೀಚಿನ ಸುದ್ದಿ