ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿರುವ ಈ ದೇವಿ ಯಾರು? - Mahanayaka
11:39 PM Tuesday 4 - February 2025

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿರುವ ಈ ದೇವಿ ಯಾರು?

chengalpattu devi
28/12/2021

ಚೆನ್ನೈ: ತಾನು ಅನ್ನಪೂರ್ಣೆ, ಆದಿ ಪರಾಶಕ್ತಿ, ದೇವರ ಅವತಾರ ಎಂದು ಮಹಿಳೆ ಹೇಳಿಕೊಂಡಿರುವ ಮಹಿಳೆಯೊಬ್ಬರ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತಮಿಳುನಾಡಿನಲ್ಲಿ ಈ ಮಹಿಳೆ ಇದೀಗ ಭಾರೀ ಫೇಮಸ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ಮಹಿಳೆಯ ಸುದ್ದಿ ಹವಾ ಸೃಷ್ಟಿಸಿದೆ.

ತಮಿಳುನಾಡಿನ ಚೆಂಗಲ್ಪಟ್ಟು ಜಿಲ್ಲೆಯ ತಿರುಪೋರೂರು ನಿವಾಸಿಯಾಗಿರುವ ಈ ಮಹಿಳೆ ತನ್ನನ್ನು ಆದಿ ಪರಾಶಕ್ತಿಯ ಅವತಾರ ಎಂದು ಘೋಷಿಸಿಕೊಂಡಿದ್ದು, ಈಕೆ ದೇವಿಯ ಅವತಾರದಲ್ಲಿ ನಾನಾ ರೀತಿಯಾಗಿ ಫೋಟೋಗಳಿಗೆ ಪೋಸು ನೀಡಿರುವುದು ಮತ್ತು ಭಕ್ತರ ಜೊತೆಗೆ ಸಂವಹನ ನಡೆಸುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಸದ್ಯ ವೈರಲ್ ಆಗುತ್ತಿರುವ ವಿಡಿಯೋವೊಂದರಲ್ಲಿ ಮಹಿಳೆ ದೇವಿಯ ಹಾವಭಾವಗಳೊಂದಿಗೆ ಕುಳಿತುಕೊಂಡಿದ್ದು, ಆಕೆಯ ಕಾಲನ್ನು ಹಿಡಿದುಕೊಂಡು ಮಹಿಳೆಯೊಬ್ಬರು ಕಿರುಚಾಡುತ್ತಿದ್ದಾರೆ. ಇನ್ನು ಕೆಲವು ಭಕ್ತರು ಆಕೆಯನ್ನು ಆರಾಧಿಸುತ್ತಿದ್ದು, ಅವರಿಗೆಲ್ಲ ಮಹಿಳೆ ದೇವಿಯಂತೆಯೇ ಆಶೀರ್ವಾದ ಮಾಡುತ್ತಿರುವುದು ಕಂಡು ಬಂದಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DbJM9kayC1K4utc3ntXPdh

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಶಾಸಕನಿಗೆ ಪೊಲೀಸರ ‘ಪ್ಯಾಂಟ್ ಒದ್ದೆ’ ಮಾಡಿಸುವ ಶಕ್ತಿ ಇದೆ ಎಂದ ಕಾಂಗ್ರೆಸ್ ನಾಯಕ!

ಕೊರಗ ಸಮುದಾಯದ ಮೆಹೆಂದಿ ಕಾರ್ಯಕ್ರಮದಲ್ಲಿ ಪೊಲೀಸರಿಂದ ಲಾಠಿ ಚಾರ್ಜ್!

ಜನರಿಗೊಂದು ನ್ಯಾಯ, ನಾಯಕರಿಗೊಂದು ನ್ಯಾಯ: ಬಿಜೆಪಿ ಕಾರ್ಯಕರಣಿ ಸಭೆಯಲ್ಲಿ ಮಾಸ್ಕ್ ಧರಿಸದೇ ನಿರ್ಲಕ್ಷ್ಯ

ಅಂತ್ಯ ಸಂಸ್ಕಾರಕ್ಕೆ ಕೆಲವೇ ನಿಮಿಷ ಬಾಕಿ ಇರುವಾಗ ಕಣ್ತೆರೆದು ಮಾತನಾಡಿದ ವೃದ್ಧ!

ಗ್ರಾಮದ ಮುಖ್ಯಸ್ಥೆಯ ಮೃತದೇಹ ನಗ್ನ ಸ್ಥಿತಿಯಲ್ಲಿ ಪತ್ತೆ

ನೈಟ್ ಕರ್ಫ್ಯೂಗೆ ಪದೇ ಪದೇ ವಿರೋಧ ಮಾಡೋದು ಸರಿಯಲ್ಲ: ಸಚಿವ ಕೆ.ಸುಧಾಕರ್

ಇತ್ತೀಚಿನ ಸುದ್ದಿ