ಚೆರ್ನೋಬಿಲ್‌ ನ ಪರಮಾಣು ವಿದ್ಯುತ್ ಸ್ಥಾವರ ವಶಕ್ಕೆ ಪಡೆದ ರಷ್ಯಾ ಪಡೆಗಳು - Mahanayaka
10:19 AM Thursday 12 - December 2024

ಚೆರ್ನೋಬಿಲ್‌ ನ ಪರಮಾಣು ವಿದ್ಯುತ್ ಸ್ಥಾವರ ವಶಕ್ಕೆ ಪಡೆದ ರಷ್ಯಾ ಪಡೆಗಳು

chernobyl plant
25/02/2022

ಉಕ್ರೇನ್: ರಷ್ಯಾ ದಾಳಿ ಉಕ್ರೇನ್​ಗೆ ಮಾತ್ರವಲ್ಲ, ಸುತ್ತಲಿನ ರಾಷ್ಟ್ರಗಳ ಮೇಲೆಯೂ ಆತಂಕ ಮೂಡಿಸಿದೆ. ರಷ್ಯಾದ ಪಡೆಗಳು ಭೀಕರ ದಾಳಿ ನಡೆಸಿ, ಉಕ್ರೇನ್ ಪಡೆಗಳನ್ನು ಹಿಮ್ಮೆಟ್ಟಿಸಿದ್ದು, ಪ್ರಮುಖ ನಗರವಾದ ಚೆರ್ನೋಬಿಲ್​ನಲ್ಲಿರುವ ಪರಮಾಣು ವಿದ್ಯುತ್ ಸ್ಥಾವರ(Chernobyl nuclear power plant )ವನ್ನು ವಶಕ್ಕೆ ಪಡೆದುಕೊಂಡಿವೆ ಎಂದು ಉಕ್ರೇನ್​​ ಮಾಹಿತಿ ನೀಡಿದೆ.

ಚೆರ್ನೋಬಿಲ್​ನಲ್ಲಿರುವ ಪರಮಾಣು ವಿದ್ಯುತ್ ಸ್ಥಾವರವನ್ನು ರಷ್ಯಾ ವಶಕ್ಕೆ ಪಡೆದುಕೊಂಡ ನಂತರ, ಆ ಸ್ಥಾವರದಲ್ಲಿ ವಿಕಿರಣ ಸೋರಿಕೆಯಾಗಬಹುದು ಎಂಬ ಭಯ ಸುತ್ತಲಿನ ಪ್ರದೇಶಗಳಲ್ಲಿ ಆವರಿಸಿದೆ ಎಂದು ಡೈಲಿ ಮೇಲ್ ವರದಿ ಮಾಡಿದೆ. ಪರಮಾಣು ಅಸ್ತ್ರಗಳನ್ನು ಉಕ್ರೇನ್​ನ ಚೆರ್ನೋಬಿಲ್​ನಲ್ಲಿ ಶೇಖರಿಸಿಟ್ಟಿರಬಹುದೆಂಬ ಮಾಹಿತಿ ಹಿನ್ನೆಲೆಯಲ್ಲಿ ರಷ್ಯಾ ದಾಳಿ ನಡೆಸಿದೆ ಎನ್ನಲಾಗಿದೆ.

ಈ ಕುರಿತಂತೆ ವಿಡಿಯೋವೊಂದು ಬಿಡುಗಡೆಯಾಗಿದ್ದು, ರಷ್ಯಾದ ಟ್ಯಾಂಕರ್​ಗಳು ಮತ್ತು ಶಸ್ತ್ರಸಜ್ಜಿತ ವಾಹನಗಳು ನಾಶವಾದ ರಿಯಾಕ್ಟರ್‌ನ ಮುಂದೆ ನಿಂತಿರುವುದು ಗೊತ್ತಾಗುತ್ತದೆ. ಉಕ್ರೇನ್ ರಾಜಧಾನಿ ರಾಜಧಾನಿ ಕೀವ್​ನಿಂದ ಉತ್ತರಕ್ಕೆ 60 ಮೈಲುಗಳಷ್ಟು ದೂರದಲ್ಲಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇಷ್ಟು ಮಾತ್ರವಲ್ಲದೇ ಒಡೆಸ್ಸಾ ಕರಾವಳಿಯಲ್ಲಿ ಹಡಗೊಂದನ್ನು ಬಾಂಬ್ ದಾಳಿಯ ಮೂಲಕ ನಾಶಪಡಿಸಲಾಗಿದೆ.

ಈಗಾಗಲೇ ಕೆಲವು ಮಿಲಿಟರಿ ನೆಲೆಗಳು, ವಿಮಾನ ನಿಲ್ದಾಣಗಳು, ನಗರಗಳು ಮತ್ತು ಬಂದರುಗಳನ್ನು ರಷ್ಯಾ ತನ್ನ ಅಧೀನಕ್ಕೆ ತೆಗದುಕೊಂಡಿದ್ದು, ಉಳಿದ ಪ್ರದೇಶಗಳಲ್ಲಿ ಉಕ್ರೇನ್ ಹೋರಾಟ ಮುಂದುವರಿಸಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಹಸುಗಳ ಮೇಲೆ ಲೈಂಗಿಕ ದೌರ್ಜನ್ಯ: ವ್ಯಕ್ತಿಯ ಬಂಧನ

ಯುವತಿಯನ್ನು ಪ್ರೀತಿಸಿದ್ದಕ್ಕೆ ಯುವಕನ ಕಣ್ಣನ್ನೇ ಕಿತ್ತ ದುಷ್ಕರ್ಮಿಗಳು

ದೇಶಕ್ಕಾಗಿ ಈಶ್ವರಪ್ಪ, ಯಡಿಯೂರಪ್ಪ ತ್ಯಾಗ ಮಾಡಲಿ, ಹರ್ಷ ತಾಯಿಗೆ ಬಿಜೆಪಿ ಟಿಕೆಟ್ ನೀಡಲಿ | ಬಿಜೆಪಿ ನಾಯಕರ ತಲೆಕೆಡಿಸಿದ ಅಭಿಯಾನ

ನಾವು ಅವರ ಹತ್ತು ಜನರನ್ನು ಹೊಡೆಯುತ್ತೇವೆ: ರಿಷಿಕುಮಾರ್ ಸ್ವಾಮೀಜಿಯಿಂದ ಮತ್ತೆ ವಿವಾದಾತ್ಮಕ ಹೇಳಿಕೆ

ದೇಶದ ಸಂವಿಧಾನ, ಕಾನೂನು, ಪೊಲೀಸ್ ಠಾಣೆಗೆ ಗೌರವ ಕೊಡಿ: ಪ್ರಮೋದ್ ಮುತಾಲಿಕ್

ಇತ್ತೀಚಿನ ಸುದ್ದಿ