“ಬ್ರಾಹ್ಮಣರನ್ನು ನಮ್ಮ ಗ್ರಾಮಗಳಿಗೆ ಬರಲು ಬಿಡಬಾರದು” ಎಂದಿದ್ದ ಛತ್ತೀಸ್ ಗಢ ಸಿಎಂ ತಂದೆ ನಂದ ಕುಮಾರ್ ಬಘೇಲ್ ಜೈಲು ಪಾಲು! - Mahanayaka
9:51 PM Sunday 14 - September 2025

“ಬ್ರಾಹ್ಮಣರನ್ನು ನಮ್ಮ ಗ್ರಾಮಗಳಿಗೆ ಬರಲು ಬಿಡಬಾರದು” ಎಂದಿದ್ದ ಛತ್ತೀಸ್ ಗಢ ಸಿಎಂ ತಂದೆ ನಂದ ಕುಮಾರ್ ಬಘೇಲ್ ಜೈಲು ಪಾಲು!

nand kumar baghel
07/09/2021

ರಾಯ್ ಪುರ:  ಬ್ರಾಹ್ಮಣ ಸಮುದಾಯದ ವಿರುದ್ಧ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಛತ್ತೀಸ್ ಗಢ ಸಿಎಂ ಭೂಪೇಶ್ ಬಘೇಲ್ ಅವರ ತಂದೆ ನಂದ ಕುಮಾರ್ ಬಘೇಲ್ ಅವರನ್ನು ಬಂಧಿಸಲಾಗಿದ್ದು, ಅವರಿಗೆ ಕೋರ್ಟ್ 15 ದಿನಗಳ ಕಸ್ಟಡಿ ವಿಧಿಸಿದೆ.


Provided by

ಇನ್ನೂ ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಛತ್ತೀಸ್ ಗಢ ಸಿಎಂ ಭೂಪೇಶ್ ಬಘೇಲ್,  ಕಾನೂನಿನ ಎದುರು ಎಲ್ಲರೂ ಸಮಾನರೇ, ನನ್ನ ಸರ್ಕಾರದಲ್ಲಿ ಯಾರೂ ಮೇಲಿಲ್ಲ, ಮುಖ್ಯಮಂತ್ರಿಯ ತಂದೆಯಾದರೂ ಕಾನೂನಿನ ಮುಂದೆ ಎಲ್ಲರೂ ಸಮಾನರು. ಎಲ್ಲ ಸಮುದಾಯದ ನಡುವೆ ಏಕತೆ ಸೌಹಾರ್ದತೆಯನ್ನು ಕಾಪಾಡುವುದು ಮುಖ್ಯಮಂತ್ರಿಯಾಗಿರುವ ನನ್ನ ಕರ್ತವ್ಯವಾಗಿದೆ ಎಂದು ಅವರು ಹೇಳಿದ್ದಾರೆ.

ನನ್ನ ತಂದೆಗೂ ನನಗೂ ಇರುವ ಸಿದ್ಧಾಂತದ ವ್ಯತ್ಯಾಸಗಳು ಎಲ್ಲರಿಗೂ ತಿಳಿದಿದೆ. ನಮ್ಮ ರಾಜಕೀಯ ಸಿದ್ಧಾಂತಗಳು ಹಾಗೂ ನಂಬಿಕೆಗಳು ಬೇರೆ ಬೇರೆಯಾಗಿದೆ. ನಾನು ಅವರ ಮಗನಾಗಿ ಅವರನ್ನು ಗೌರವಿಸುತ್ತೇನೆ ಎಂದು ಅವರು ಹೇಳಿದ್ದಾರೆ.

ಉತ್ತರ ಪ್ರದೇಶದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಛತ್ತೀಸ್ ಗಢ ಸಿಎಂ ಭೂಪೇಶ್ ಬಘೇಲ್ ಅವರ ತಂದೆ ನಂದ ಕುಮಾರ್ ಬಘೇಲ್, ಬ್ರಾಹ್ಮಣರು ವಿದೇಶಿಯರು ಅವರನ್ನು ನಾವು ಬಹಿಷ್ಕರಿಸಬೇಕು. ಬ್ರಾಹ್ಮಣರನ್ನು ನಮ್ಮ ಗ್ರಾಮಗಳಿಗೆ ಬರಲು ಬಿಡಬಾರದು ಎಂದು ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಕೇಸು ದಾಖಲಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿದೆ.

ಇನ್ನಷ್ಟು ಸುದ್ದಿಗಳು…

ಕೃಷಿ ಇಲಾಖೆಯಲ್ಲಿ 210 ಕೋಟಿ ರೂ. ಭ್ರಷ್ಟಾಚಾರ: ಬಿ.ಸಿ.ಪಾಟೀಲ್ ವಿರುದ್ಧ ಎಸಿಬಿಗೆ ದೂರು

ಪಂಜ್ ಶಿರ್ ಗಳನ್ನು ತಾಲಿಬಾನ್ ವಶಕ್ಕೆ ಪಡೆದಿರುವುದು ಸುಳ್ಳು | ಸ್ಪಷ್ಟಪಡಿಸಿದ NRF

ನಿಫಾ ವೈರಸ್ ನ ರೋಗ ಲಕ್ಷಣಗಳೇನು ಗೊತ್ತಾ? | ರೋಗಿ ಕೋಮಾಕ್ಕೆ ಹೋಗುವ ಸಾಧ್ಯತೆ ಹೆಚ್ಚು!

ರೈಡಿಂಗ್ ಹೊರಟಿದ್ದ ಬೈಕ್ ಕಂಟೈನರ್ ಗೆ ಡಿಕ್ಕಿ | ಓರ್ವ ಸಾವು, ಇಬ್ಬರಿಗೆ ಗಂಭೀರ ಗಾಯ

ಸ್ನಾನಕ್ಕೆ ಹೋಗಿ 2 ಗಂಟೆಯಾದರೂ ವಿದ್ಯಾರ್ಥಿನಿ ಮರಳಿ ಬರಲಿಲ್ಲ | ಬಾತ್ ರೂಮ್ ಬಾಗಿಲು ಮುರಿದು ನೋಡಿದಾಗ ಕಾದಿತ್ತು ಶಾಕ್

ಕೊವಿಡ್ ಲಸಿಕೆ ಪಡೆದ ಬಳಿಕ ನಮ್ಮ ಮಗ ಮೃತಪಟ್ಟ | ಪೋಷಕರಿಂದ ಗಂಭೀರ ಆರೋಪ

ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ: ಬೆಳಗಾವಿ ಬಿಜೆಪಿ ತೆಕ್ಕೆಗೆ, ಧಾರವಾಡ, ಕಲಬುರ್ಗಿ ಅತಂತ್ರ

 

ಇತ್ತೀಚಿನ ಸುದ್ದಿ