ಚಿಕನ್ ಫಾಕ್ಸ್: ಒಂದೇ ಕುಟುಂಬದ ಇಬ್ಬರು ಬಾಲಕರ ಸಾವು
ಕಲಬುರಗಿ: ಚಿಕನ್ ಫಾಕ್ಸ್ ನಿಂದ ಬಳಲುತ್ತಿದ್ದ ಒಂದೇ ಕುಟುಂಬದ ಇಬ್ಬರು ಬಾಲಕರು ಸಾವನಪ್ಪಿರುವ ಘಟನೆ ವರದಿಯಾಗಿದ್ದು, ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ನಾಲವಾರ ಗ್ರಾಮದಲ್ಲಿ ನಡೆದಿದೆ.
15 ವರ್ಷ ವಯಸ್ಸಿನ ಇಮ್ರಾನ್ ಹಾಗೂ 8 ವರ್ಷ ವಯಸ್ಸಿನ ರಹೆಮಾನ್ ಮೃತ ಪಟ್ಟವರು ಎಂದು ಹೇಳಲಾಗಿದೆ. ಈ ಕುಟುಂಬದ ಅಫಿಜಾ ಬೇಗಂ (32) , ಅರ್ಮಾನ್ (6) , ನಫಿಜಾ (13) ಎಂಬವರು ಕೂಡ ಚಿಕನ್ ಫಾಕ್ಸ್ ನಿಂದ ಬಳಲುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಚಿಕನ್ ಫಾಕ್ಸ್ ನಿಂದ ಬಳಲುತ್ತಿರುವ ಕುಟುಂಬಸ್ಥರನ್ನು ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೂ ನಾಲವಾರ ಗ್ರಾಮದ ಮತ್ತಿಬ್ಬರು ಮಕ್ಕಳಿಗೂ ಚಿಕಿನ್ ಫಾಕ್ಸ್ ಆಗಿದೆ ಎನ್ನಲಾಗಿದ್ದು, ಗ್ರಾಮಸ್ಥರು ಸಾಂಕ್ರಾಮಿಕ ರೋಗದ ಭೀತಿಯಲ್ಲಿದ್ದಾರೆ.
ಇದೇ ಸಂದರ್ಭದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಸುಮಾರು 340 ಮನೆಗಳ ಸರ್ವೇ ಕಾರ್ಯ ನಡೆಸಿದ್ದು, ರಕ್ತದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Bk3PAoJFRvJLUSBPd39m1C
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಗಾಂಜಾ ಬೆಳೆದು ಬೆಂಗಳೂರಿನಲ್ಲಿ ಮಾರಾಟ: ಇಬ್ಬರು ಆರೋಪಿಗಳ ಸೆರೆ
ಬಿಜೆಪಿ ಕಚೇರಿಯಲ್ಲೇ ಬಡಿದಾಡಿಕೊಂಡು ಕಾರ್ಯಕರ್ತರು: ಮಾಜಿ ಶಾಸಕ ಸುರೇಶ್ ಗೌಡರ ಬೆಂಬಲಿಗನ ವಿರುದ್ಧ ದೂರು
ಎರಡು ತಂಡಗಳ ನಡುವೆ ಗಲಾಟೆ: ಮಾರಾಕಾಸ್ತ್ರದೊಂದಿಗೆ ಬಂದ ಯುವಕ
ಫೆ.7ರಿಂದ ಬಜೆಟ್ ಪೂರ್ವಭಾವಿ ಸಿದ್ಧತೆ: ಸಿಎಂ ಬಸವರಾಜ ಬೊಮ್ಮಾಯಿ
ರಾಜ್ಯ ಸರ್ಕಾರ ಮಲಗಿ ಬಿಟ್ಟಿದೆ: ಮಾಜಿ ಸಚಿವ ಸಂತೋಷ್ ಲಾಡ್