ನನಗೆ ಒಳ್ಳೆಯ ಚಿಕಿತ್ಸೆ ದೊರೆಯುತ್ತಿದ್ದರೆ, ನಾನು ಬದುಕುತ್ತಿದ್ದೆ | ಸಾವಿಗೂ ಮೊದಲು ನಟನ ಟ್ವೀಟ್
10/05/2021
ನವದೆಹಲಿ: “ನನಗೆ ಒಳ್ಳೆಯ ಚಿಕಿತ್ಸೆ ದೊರೆಯುತ್ತಿದ್ದರೆ, ನಾನು ಬದುಕುತ್ತಿದ್ದೆ” ಎಂದು ಕೊರೊನಾದಿಂದ ಸಾಯುವ ಮೊದಲು ನಟ ಹಾಗೂ ಯೂಟ್ಯೂಬರ್ ಟ್ವೀಟ್ ಮಾಡಿದ್ದು, ಭಾರತದ ವೈದ್ಯಕೀಯ ವ್ಯವಸ್ಥೆಗೆ ಹಿಡಿದ ಕನ್ನಡಿಯಂತೆ ಈ ಘಟನೆ ಕಂಡು ಬಂದಿದೆ.
ರಾಹುಲ್ ವೊಹ್ರಾ ಮೇ 8ರಂದು ಟ್ವೀಟ್ ಮಾಡಿ, ನನಗೆ ಒಳ್ಳೆಯ ಚಿಕಿತ್ಸೆ ದೊರೆಯುತ್ತಿದ್ದರೆ ನಾನು ಬದುಕುತ್ತಿದ್ದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಮನಿಶ್ ಸಿಸೋಡಿಯಾ ಅವರ ಹೆಸರುಗಳನ್ನು ಉಲ್ಲೇಖಿಸಿ, ನಾನು ಬೇಗನೇ ಹುಟ್ಟಿ ಬರುತ್ತೇನೆ, ಒಳ್ಳೆಯ ಕೆಲಸ ಮಾಡುತ್ತೇನೆ ಎಂದು ಅಸಹಾಯಕರಾಗಿ ಹೇಳಿದ್ದಾರೆ.
ಬದುಕುವ ಆಸೆ ಕಳೆದುಕೊಂಡ ಬಳಿಕ ಅವರು ಈ ಟ್ವೀಟ್ ಮಾಡಿದ್ದು, ಅವರ ಟ್ವೀಟ್ ನೋಡಿದ ಸಾಕಷ್ಟು ಸಂಖ್ಯೆಯ ಜನರು ಕಣ್ಣೀರು ಹಾಕಿದ್ದಾರೆ. ಭಾರತದಲ್ಲಿ ಕೊರೊನಾ ಸೋಂಕಿತರಿಗೆ ಉತ್ತಮ ಚಿಕಿತ್ಸೆ ದೊರೆಯುತ್ತಿಲ್ಲ. ಆಸ್ಪತ್ರೆಗಳಲ್ಲಿ ಮಾರುದ್ದದ ಬಿಲ್ ಮಾತ್ರ ಕೊಡುತ್ತಿದ್ದಾರೆಯೇ ಹೊರತು, ಸರಿಯಾದ ಚಿಕಿತ್ಸೆ ನೀಡುತ್ತಿಲ್ಲ ಎನ್ನುವ ಆರೋಪಗಳು ಕೇಳಿ ಬಂದಿದೆ.