ಚಿಕಿತ್ಸೆ ನೀಡುವ ನೆಪದಲ್ಲಿ ಇಬ್ಬರು ಸಹೋದರಿಯರ ಮೇಲೆ ಅತ್ಯಾಚಾರ | ನಕಲಿ ವೈದ್ಯನಿಗೆ ಕೋರ್ಟ್ ಕೊಟ್ಟ ಶಿಕ್ಷೆ ಏನು ಗೊತ್ತಾ?
ರಾಯ್ ಪುರ್: ಇಬ್ಬರು ಸಹೋದರಿಯರನ್ನು ಚಿಕಿತ್ಸೆ ನೀಡುವ ನೆಪದಲ್ಲಿ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಕಲಿ ವಕೀಲನೋರ್ವನಿಗೆ 40 ವರ್ಷ ಜೈಲು ಶಿಕ್ಷೆ ವಿಧಿಸಿ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ತೀರ್ಪುನೀಡಿದೆ.
ಇಬ್ಬರು ಯುವತಿಯರನ್ನು ಅತ್ಯಾಚಾರ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಲಾವೊಂದೊಂದು ಪ್ರಕರಣಕ್ಕೆ 20 ವರ್ಷ ಶಿಕ್ಷೆ ವಿಧಿಸಲಾಗಿದೆ. ಈ ಪ್ರಕಾರವಾಗಿ ಒಟ್ಟು 40 ವರ್ಷಗಳ ಶಿಕ್ಷೆ ವಿಧಿಸಲಾಗಿದೆ. ಒಂದರ ಹಿಂದೊಂದರಂತೆ ಈ ಶಿಕ್ಷೆಯನ್ನು ವಿಧಿಸಲಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.
2016ರ ಡಿ. 21 ಹಾಗೂ 19 ವರ್ಷದ ಸಂತ್ರಸ್ತ ಯುವತಿಯನ್ನು ಅವರ ಕುಟುಂಬದವರು ಹೊಟ್ಟೆ ಹಾಗೂ ಸೊಂಟದ ನೋವಿನ ಚಿಕಿತ್ಸೆಗಾಗಿ ಈ ನಕಲಿ ವೈದ್ಯರ ಬಳಿ ಕರೆದೊಯ್ದಿದ್ದರು.
ಈ ವೇಳೆ ಅಪರಾಧಿಯು ಬ್ಲ್ಯಾಕ್ ಮ್ಯಾಜಿಕ್ ಮೂಲಕ ಸೊಂಟ ನೋವು ಗುಣಪಡಿಸುವುದಾಗಿ ಇಬ್ಬರು ಯುವತಿಯರ ಮೇಲೆ ಅತ್ಯಾಚಾರ ನಡೆಸಲು ಆರಂಭಿಸಿದ್ದ. ಈ ವಿಚಾರವನ್ನು ಪೋಷಕರಿಗೆ ಹೇಳಿದರೆ, ಗಂಭೀರ ಪರಿಣಾಮ ಎದುರಿಸುತ್ತೀರಿ ಎಂದು ಸಹೋದರಿಯರಿಗೆ ಬೆದರಿಕೆ ಹಾಕಿದ್ದ.
ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಪೂಜಾ ಜೈಸ್ವಾಲ್ ಅವರು ಪ್ರಕರಣದ ವಿಚಾರಣೆ ನಡೆಸಿದ್ದು, ಐಪಿಸಿ ಸೆಕ್ಷನ್ ಅಡಿಯಲ್ಲಿ ಅತ್ಯಾಚಾರಿ ಗಾಂಧಿ ನಗರ ನಿವಾಸಿ ಸಮಯ್ ಲಾಲ್ ದೆವಾಂಗನ್(48) ಗೆ 40 ವರ್ಷ ಜೈಲು ಶಿಕ್ಷೆ ವಿಧಿಸಿದ್ದಾರೆ.