ಚೆಕಪ್ ಗೆ ಹೋದ ಮಹಿಳೆಯ ವಸ್ತ್ರ ಕಳಚಿ ಲೈಂಗಿಕ ಕಿರುಕುಳ | ವೈದ್ಯ ಅರೆಸ್ಟ್
ಪಣಜಿ: ವೈದ್ಯರು ಎಂದರೆ ಜೀವ ಉಳಿಸುವ ದೇವರು ಎಂದೇ ಎಲ್ಲರು ನಂಬುತ್ತಾರೆ. ವೈದ್ಯರ ಬಳಿಗೆ ಹೋಗುವಾಗ ಯಾವುದೇ ಭಯವಿಲ್ಲದೇ ಎಲ್ಲರೂ ಹೋಗುತ್ತಾರೆ. ಆದರೆ, ಕೆಲವು ವೈದ್ಯರ ದುಷ್ಕೃತ್ಯಗಳಿಂದ ವೈದ್ಯರ ಮೇಲೆಯೂ ಮಹಿಳೆಯರು ಅನುಮಾನದಿಂದ ನೋಡುವಂತಹ ಪ್ರಸಂಗಗಳ ಎದುರಾಗಿವೆ.
ಗೋವಾದಲ್ಲಿ ನಡೆದ ಘಟನೆಯೊಂದರಲ್ಲಿ, ಇಲ್ಲಿನ ಪ್ರಸಿದ್ಧ ವೈದ್ಯನೋರ್ವ ತನ್ನ ಬಳಿಗೆ ಚಿಕಿತ್ಸೆಗೆ ಆಗಮಿಸಿದ್ದ ಮಹಿಳೆಯ ಜೊತೆಗೆ ಅಸಭ್ಯವಾಗಿ ವರ್ತಿಸಿದ್ದು, ಲೈಂಗಿಕ ದೌರ್ಜನ್ಯ ನಡೆಸಲು ಮುಂದಾದ ಘಟನೆ ನಡೆದಿದೆ. ಆದರೆ ಈ ವೇಳೆ ಎಚ್ಚೆತ್ತುಕೊಂಡ ಮಹಿಳೆ ವೈದ್ಯನಿಂದ ತಪ್ಪಿಸಿಕೊಂಡು ಬಳಿಕ ಪೊಲೀಸರಿಗೆ ದೂರು ನೀಡಿದ್ದಾರೆ.
ಮಹಿಳೆಗೆ ತೀವ್ರವಾಗಿ ಬೆನ್ನುನೋವು ಇದ್ದುದರಿಂದಾಗಿ ಇಲ್ಲಿನ ಪ್ರಸಿದ್ಧ ಮೂಳೆ ತಜ್ಞನ ಬಳಿಗೆ ತೆರಳಿದ್ದರು. ಚೆಕ್ ಅಪ್ ನಡೆಸುವ ನೆಪದಲ್ಲಿ ವೈದ್ಯ ಮಹಿಳೆಯನ್ನು ಕೋಣೆಗೆ ಕರೆದೊಯ್ದಿದ್ದು, ಮಹಿಳೆ ಧರಿಸಿದ್ದ ಪ್ಯಾಂಟ್ ನ್ನು ಕಳಚಿ ಖಾಸಗಿ ಅಂಗವನ್ನು ಮುಟ್ಟಿ ಲೈಂಗಿಕ ದೌರ್ಜನ್ಯ ಎಸಗಲು ಮುಂದಾಗಿದ್ದಾನೆ. ವೈದ್ಯನ ಉದ್ದೇಶ ಅರಿವಾಗುತ್ತಿದ್ದಂತೆಯೇ ಸಂತ್ರಸ್ತ ಮಹಿಳೆ ಅಲ್ಲಿಂದ ತಪ್ಪಿಸಿಕೊಂಡು ಓಡಿದ್ದಾರೆ.
ಆ ಬಳಿಕ ಅವರು ಮನೆಗೆ ಹೋಗಿ ತಮ್ಮ ಪತಿಗೆ ವಿಚಾರ ಮುಟ್ಟಿಸಿದ್ದು, ಬಳಿಕ ಇಬ್ಬರೂ ಮಾಪುಸಾ ಪೊಲೀಸರನ್ನು ಭೇಟಿ ಮಾಡಿ ದೂರು ದಾಖಲಿಸಿದ್ದು, ಇವರ ದೂರಿನನ್ವಯ ವೈದ್ಯನನ್ನು ಅರೆಸ್ಟ್ ಮಾಡಿರುವ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.
ಸದ್ಯ ದೇಶಾದ್ಯಂತ ಎಲ್ಲಿ ನೋಡಿದರೂ ಸಾಲು ಸಾಲು ಅತ್ಯಾಚಾರ ಪ್ರಕರಣಗಳೇ ನಡೆಯುತ್ತಿವೆ. ಬಹುತೇಕ ಬಾರಿ ದೌರ್ಜನ್ಯಗಳನ್ನು ಮಹಿಳೆಯರು ಸಹಿಸಿಕೊಳ್ಳುತ್ತಿರುತ್ತಾರೆ. ಆದರೆ, ಲೈಂಗಿಕ ದೌರ್ಜನ್ಯಗಳಾಗುವಂತಹ ಸಂದರ್ಭಗಳು ಕಂಡು ಬಂದರೆ, ತಕ್ಷಣವೇ ಮೊದಲು ಸ್ಥಳದಿಂದ ತಪ್ಪಿಸಿಕೊಳ್ಳಲು ಮಹಿಳೆಯರು ಯತ್ನಿಸಬೇಕು. ಬಳಿಕ ಪೊಲೀಸರಿಗೆ ದೂರು ನೀಡಬೇಕು. ಎಂದಿಗೂ ಲೈಂಗಿಕ ದೌರ್ಜನ್ಯಗಳನ್ನು ಸಹಿಸಬಾರದು. ಲೈಂಗಿಕ ದೌರ್ಜನ್ಯಗಳನ್ನು ಮೆಟ್ಟಿ ನಿಲ್ಲಲು ಧೈರ್ಯ ಮಾತ್ರವೇ ಪ್ರಬಲ ಅಸ್ತ್ರವಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/KPRE32QAEFL3ZvRW2wbYvj
ಇನ್ನಷ್ಟು ಸುದ್ದಿಗಳು…
ಗರ್ಭಿಣಿ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ರೈಲ್ವೆ ಹಳಿಯಲ್ಲಿ ಎಸೆದು ಹೋದ ಕಾಮುಕರು
ಬೆಂಗಳೂರಿನ ಪ್ಲೈಓವರ್ ಮೇಲೆ ಮತ್ತೊಂದು ಭೀಕರ ಅಪಘಾತ | ಯುವಕ, ಯುವತಿಯ ದಾರುಣ ಸಾವು
ನಿಧಿಗಾಗಿ ತನ್ನ ಪತ್ನಿಯನ್ನೇ ನರಬಲಿ ನೀಡಲು ಮುಂದಾದ ಪತಿ!
ಬಿಜೆಪಿಯ ಅಧಿಕಾರವಧಿಯಲ್ಲಿ ಹಿಂದುತ್ವ ಅಪಾಯದ ಸ್ಥಿತಿಯಲ್ಲಿದೆ | ಕೆಪಿಸಿಸಿ ವಕ್ತಾರ ಸುಧೀರ್ ಕುಮಾರ್ ಮರೋಳಿ
ರಾಜ್ಯದಲ್ಲಿಯೂ ತಟ್ಟಿದ ಭಾರತ್ ಬಂದ್ ಬಿಸಿ: ಕೃಷಿ ಕಾಯ್ದೆಗಳನ್ನು ವಿರೋಧಿಸಿ ತೀವ್ರ ಪ್ರತಿಭಟನೆ
ಪ್ರತಿಭಟನಾಕಾರರನ್ನು ನಿಯಂತ್ರಿಸುತ್ತಿದ್ದ ಡಿಸಿಪಿಯ ಕಾಲಿನ ಮೇಲೆ ಹರಿದ ಕಾರು!
ದೇಶಾದ್ಯಂತ ಬುಗಿಲೆದ್ದ ರೈತರ ಆಕ್ರೋಶ: ವಿವಿಧ ಹೆದ್ದಾರಿ ತಡೆದು ತೀವ್ರ ಪ್ರತಿಭಟನೆ