ಹೊಟೇಲ್ ಗೆ ನುಗ್ಗಿದ ಕ್ಯಾಂಟರ್: ಇಬ್ಬರು ಸಾವು, ಗರ್ಭಿಣಿ ಸೇರಿದಂತೆ ಹಲವರಿಗೆ ಗಂಭೀರ ಗಾಯ
![chikkaballapura](https://www.mahanayaka.in/wp-content/uploads/2022/09/chikkaballapura.jpg)
ಚಿಕ್ಕಬಳ್ಳಾಪುರ: ಭೀಕರ ಅಪಘಾತವೊಂದರಲ್ಲಿ ಇಬ್ಬರು ದಾರುಣವಾಗಿ ಸಾವನ್ನಪ್ಪಿ ಹಲವರು ಗಾಯಗೊಂಡ ಘಟನೆ ನಗರದ ರಾಷ್ಟ್ರೀಯ ಹೆದ್ದಾರಿ 44ರ ರಾಮದೇವರಗುಡಿ ಬಳಿ ಸಂಭವಿಸಿದೆ.
ಬೆಂಗಳೂರು ಕಡೆಯಿಂದ ಬಂದ ಕ್ಯಾಂಟರ್ ರಸ್ತೆಗೆ ಅಡ್ಡವಾಗಿ ಬಂದ ಕಾರನ್ನು ತಪ್ಪಿಸುವ ಭರದಲ್ಲಿ ಹೈವೆಯ ಮತ್ತೊಂದು ಬದಿಗೆ ನುಗ್ಗಿದ್ದು, ಪರಿಣಾಮವಾಗಿ ನಿಯಂತ್ರಣ ಕಳೆದುಕೊಂಡು ಇಲ್ಲಿನ ಪ್ರಣವ್ ಹೊಟೇಲ್ ಮುಂಭಾಗದಲ್ಲಿ ಬೈಕ್ ಹಾಗೂ ಐದು ಕಾರುಗಳಿಗೆ ಡಿಕ್ಕಿಯಾಗಿದೆ.
ಈ ವೇಳೆ ಕ್ಯಾಂಟರ್ ಗೆ ಅಡ್ಡ ಸಿಕ್ಕಿದ ಬೈಕ್ ಸವಾರ ಪಿ ಚೊಕ್ಕನಹಳ್ಳಿ ಗ್ರಾಮದ ಪಿ.ಜನಾರ್ಧನ (20) ಮತ್ತು ಪ್ರಣವ್ ಹೋಟೆಲ್ ಸೆಕ್ಯೂರಿಟಿ ಗಾರ್ಡ್ ನಾರಾಯಣಸ್ವಾಮಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಹೊಟೇಲ್ ಗೆ ತಿಂಡಿ ತಿನ್ನಲು ಬಂದಿದ್ದ ಕಾಡಿಗುಡಿ ನಿವಾಸಿಗಳಾದ ಸಾಫ್ಟ್ವೇರ್ ಇಂಜಿನಿಯರ್ ಹರ್ಷ ದೇಶಪಾಂಡೆ ಅವರ ಪತ್ನಿ ಮಾನಸ ಹಾಗೂ ಅವರ ತಂದೆ ನರಸಿಂಹ ಮೇಲೆ ಕ್ಯಾಂಟರ್ ಹರಿದು ಗಂಭೀರ ಗಾಯಗೊಂಡಿದ್ದಾರೆ. ಮಾನಸ ಗರ್ಭಿಣಿಯಾಗಿದ್ದು ಕಾಲಿನ ಮೇಲೆ ಕ್ಯಾಂಟರ್ ಹರಿದ ಪರಿಣಾಮ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.
ಘಟನೆಗೆ ಸಂಬಂಧಿಸಿದಂತೆ ಕ್ಯಾಂಟರ್ ಚಾಲಕ ತಮಿಳುನಾಡು ಮೂಲದ ಅಜಿತ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಪೇರೇಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka