ಚಿಕ್ಕಮಗಳೂರು: ಅಡಿಕೆ ತೋಟ ನೋಡಲು ಹೋಗಿದ್ದ ವೃದ್ಧೆ ಸಾವು: ಮಳೆಗೆ ಮೂರನೇ ಬಲಿ

ಚಿಕ್ಕಮಗಳೂರು: ಅಡಿಕೆ ತೋಟ ನೋಡಲು ಹೋಗಿದ್ದ ವೃದ್ಧೆ ನಾಪತ್ತೆಯಾಗಿದ್ದ ಘಟನೆಗೆ ಸಂಬಂಧಿಸಿದಂತೆ ಇದೀಗ ವೃದ್ಧೆಯ ಮೃತದೇಹ ತಾಯಿಹಳ್ಳದಲ್ಲಿ ಪತ್ತೆಯಾಗಿದೆ.
ಹೊಸಸಿದ್ರಳ್ಳಿ ಗ್ರಾಮದ ರೇವಮ್ಮ (62) ಸಾವನ್ನಪ್ಪಿದ ಮಹಿಳೆಯಾಗಿದ್ದಾರೆ. ಇವರ ಸಾವಿನೊಂದಿಗೆ ಮಳೆಗೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಮೂವರು ಬಲಿಯಾದಂತಾಗಿದೆ.
ಸಖರಾಯಪಟ್ಟಣ ಸಮೀಪದ ಹೊಸ ಸಿದ್ರಳ್ಳಿ ಗ್ರಾಮದ ಬಳಿ ಈ ಘಟನೆ ನಡೆದಿದ್ದು, ಅಡಿಕೆ ತೋಟ ನೋಡಲು ನಿನ್ನೆ ಸಂಜೆ ತೆರಳಿದ್ದ ರೇವಮ್ಮನವರು ತಾಯಿ ಹಳ್ಳದಲ್ಲಿ ಕೊಚ್ಚಿ ಹೋಗಿದ್ದರು.
ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಧಾರಾಕಾರ ಮಳೆ ಹಿನ್ನೆಲೆ ಹಳ್ಳಗಳು ತುಂಬಿ ಹರಿಯುತ್ತಿವೆ. ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ74835 51849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw