ಮತ್ತೋರ್ವ ಯುವಕನ ಮೇಲೆ ಕಾಡುಕೋಣ ದಾಳಿ: 15 ದಿನಗಳಲ್ಲಿ ಮೂರು ಬಾರಿ ಕಾಡುಕೋಣ ದಾಳಿ - Mahanayaka
10:22 PM Wednesday 12 - March 2025

ಮತ್ತೋರ್ವ ಯುವಕನ ಮೇಲೆ ಕಾಡುಕೋಣ ದಾಳಿ: 15 ದಿನಗಳಲ್ಲಿ ಮೂರು ಬಾರಿ ಕಾಡುಕೋಣ ದಾಳಿ

chikkamagaluru
05/01/2023

ಚಿಕ್ಕಮಗಳೂರು:  ಚಿಕ್ಕಮಗಳೂರು ಜಿಲ್ಲೆಯಲ್ಲಿ ಇತ್ತೀಚೆಗಷ್ಟೇ ಕಾಡುಕೋಣ ದಾಳಿಗೆ ವ್ಯಕ್ತಿಯೊಬ್ಬರು ಬಲಿಯಾಗಿದ್ದರು, ಇದೀಗ ಮತ್ತೋರ್ವ ಯುವಕನ ಮೇಲೆ ಕಾಡುಕೋಣ ದಾಳಿ ನಡೆಸಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ನಿಡಗೋಡು ಗ್ರಾಮದಲ್ಲಿ ನಡೆದಿದೆ.

ಮನೋಜ್ ಎಂಬವರು ಕಾಡು ಕೋಣ ದಾಳಿಯಿಂದಾಗಿ ಗಾಯಗೊಂಡವರಾಗಿದ್ದು, ಇವರನ್ನು ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಮನೋಜ್ ತೋಟದಲ್ಲಿದ್ದ ವೇಳೆ ಕಾಡುಕೋಣ ಏಕಾಏಕಿ ದಾಳಿ ನಡೆಸಿದೆ. ಕಳೆದ 15 ದಿನಗಳಲ್ಲಿ ಕಾಡು ಕೋಣ ಮೂರನೇ ಬಾರಿಗೆ ಜನರ ಮೇಲೆ ದಾಳಿ ನಡೆಸಿದೆ. ಈಗಾಗಲೇ ಕಾಡುಕೋಣ ದಾಳಿಗೆ ವೋರ್ವರು ಬಲಿಯಾಗಿದ್ದಾರೆ. ಈ ಪ್ರಕರಣ ಸೇರಿದಂತೆ ಒಟ್ಟು ಇಬ್ಬರು ಗಾಯಗೊಂಡಿದ್ದಾರೆ. ಘಟನೆ ಸಂಬಂಧ ಮಲ್ಲಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Provided by

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ