ಚಿಕ್ಕಮಗಳೂರು: ತೋಟಕ್ಕೆ ಬಂದವು ಎಂದು ಕೋಳಿಗಳಿಗೆ ವಿಷ..!

ಚಿಕ್ಕಮಗಳೂರು: ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ವರ್ಕಾಟೆ ಗ್ರಾಮದಲ್ಲಿ ಕೋಳಿಗಳಿಗೆ ವಿಷವಿಟ್ಟು ಸಾಯಿಸಿದ ಅಮಾನವೀಯ ಘಟನೆ ನಡೆದಿದ್ದು, ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆ ವಿವರ:
ಪ್ರದೀಪ್ ಹಾಗೂ ಬಿಷ್ಮಯ್ಯಗೌಡ ಎಂಬುವವರಿಗೆ ಸೇರಿದ ಎರಡು ಹುಂಜ ಹಾಗೂ ಒಂದು ಕೋಳಿಯನ್ನು ದುಗ್ಗಪ್ಪ ಎಂಬುವವರು ವಿಷ ನೀಡಿ ಸಾಯಿಸಿದ ಆರೋಪ ಎದುರಿಸುತ್ತಿದ್ದಾರೆ. ತೋಟಕ್ಕೆ ಕೋಳಿಗಳು ಬಂದವು ಎಂಬ ಕಾರಣಕ್ಕೆ, ಭತ್ತ ಹಾಗೂ ಅಕ್ಕಿಗೆ ವಿಷ ಬೆರೆಸಿ ಕೋಳಿಗಳಿಗೆ ನೀಡಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಕಣ್ಣಾರೆ ವೀಕ್ಷಿಸಿದ ಸಾಕ್ಷಿ:
ಬಿಷ್ಮಯ್ಯರವರ ಪತ್ನಿ ಈ ಕೃತ್ಯವನ್ನು ಕಣ್ಣಾರೆ ನೋಡಿದ್ದು, ಕೂಡಲೇ ಈ ಕುರಿತು ಪುತ್ರ ಹಾಗೂ ಹಕ್ಕುಸ್ವಾಮಿಗಳಿಗೆ ಮಾಹಿತಿ ನೀಡಿದ್ದಾರೆ. ಇದರಿಂದ 4500 ರೂ. ನಷ್ಟವಾಗಿದೆ ಎಂದು ಪ್ರದೀಪ್ ಹಾಗೂ ಬಿಷ್ಮಯ್ಯ ಪೊಲೀಸರಿಗೆ ದೂರು ನೀಡಿದ್ದಾರೆ.
ಮೂರು ವರ್ಷಗಳಿಂದಲೂ ಇದೇ ನಡತೆ?
ಆರೋಪಿ ದುಗ್ಗಪ್ಪ ಕಳೆದ ಮೂರು ವರ್ಷಗಳಿಂದಲೂ ಕೋಳಿಗಳನ್ನು ನಿರ್ದಯವಾಗಿ ಸಾಯಿಸುತ್ತಿದ್ದಾನೆ ಎಂಬ ಆರೋಪ ಸ್ಥಳೀಯರು ಮಾಡಿದ್ದು, ಈ ಘಟನೆಯು ಕಾನೂನು ಹೋರಾಟಕ್ಕೆ ತಲುಪಿದೆ.
ಈ ಸಂಬಂಧ ಎನ್.ಆರ್.ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಳ್ಳುತ್ತಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: