ಹಾವು ಕಚ್ಚಿದ ಪರಿಣಾಮ ಉರಗತಜ್ಞ ಸಾವು: ತಾನೇ ಹಿಡಿದಿದ್ದ ಹಾವಿನಿಂದ ಸಾವಿಗೀಡಾದ ಸ್ನೇಕ್ ನರೇಶ್
ಚಿಕ್ಕಮಗಳೂರು: ಹಾವು ಕಚ್ಚಿದ ಪರಿಣಾಮ ಉರಗತಜ್ಞ ಸಾವನ್ನಪ್ಪಿರುವ ದಾರುಣ ಘಟನೆ ಚಿಕ್ಕಮಗಳೂರು ನಗರದ ಹೌಸಿಂಗ್ ಬೋರ್ಡ್ ನಲ್ಲಿ ನಡೆದಿದೆ.
ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಸ್ನೇಕ್ ನರೇಶ್ ಎಂದೇ ಖ್ಯಾತಿ ಹೊಂದಿದ್ದ ನರೇಶ್(51) ಸಾವನ್ನಪ್ಪಿದ ಉರಗತಜ್ಞರಾಗಿದ್ದು, ಇವರು 2013ರಲ್ಲಿ ವಿಧಾನಸಭಾ ಚುನಾವಣೆಗೂ ಸ್ಪರ್ಧಿಸಿದ್ದರು. ಹಾವಿನ ಬಗ್ಗೆ ಶಾಲಾ ಮಕ್ಕಳಿಗೆ ಜಾಗೃತಿ ಕೂಡ ಮೂಡಿಸುತ್ತಿದ್ದರು.
ಬೆಳಗ್ಗೆ ಒಂದು ನಾಗರ ಹಾವನ್ನು ನರೇಶ್ ಸೆರೆ ಹಿಡಿದಿದ್ದರು. ಮಧ್ಯಾಹ್ನ ಮತ್ತೊಂದು ಹಾವನ್ನು ಹಿಡಿಯಲು ಕರೆ ಬಂದಿದ್ದು, ಅಲ್ಲಿ ಹೋಗಲು ಅವರು ಸಿದ್ಧರಾಗಿದ್ದರು. ಸ್ಕೂಟಿಯ ಡಿಕ್ಕಿಯಲ್ಲಿ ಹಾವಿನ ಚೀಲವಿದ್ದು ಡಿಕ್ಕಿ ಓಪನ್ ಮಾಡಿ, ಹಾವಿನ ಚೀಲದ ಗಂಟು ಬಿಗಿ ಮಾಡಲು ಮುಂದಾಗ ನರೇಶ್ ಅವರಿಗೆ ಹಾವು ಕಚ್ಚಿದೆ. ಈ ವೇಳೆ ನರೇಶ್ ಅವರನ್ನು ಆಸ್ಪತ್ರೆಗೆ ಕರೆತರುವಷ್ಟರಲ್ಲಿ ಅವರು ಸಾವನ್ನಪ್ಪಿದ್ದರು.
ನರೇಶ್ ಅವರ ಸ್ಕೂಟಿಯ ಡಿಕ್ಕಿಯಲ್ಲಿ ಎರಡು ಹಾವುಗಳಿದ್ದರೆ, ಅವರ ಕಾರಿನಲ್ಲಿ ಸುಮಾರು 30ಕ್ಕೂ ಹೆಚ್ಚು ಹಾವುಗಳಿದ್ದವು. ಹಿಡಿದ ಹಾವುಗಳನ್ನು ನರೇಶ್ 15 ದಿನಗಳಿಗೊಮ್ಮೆ ಚಾರ್ಮಡಿಗೆ ಹೋಗಿ ಬಿಟ್ಟು ಬರುತ್ತಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw