ಚಿಕ್ಕಮಗಳೂರು: ಆಸ್ಪತ್ರೆಗೆ ದಾಖಲಾಗಿದ್ದ ಆರೋಪಿ ಪರಾರಿ ! - Mahanayaka
12:37 AM Tuesday 4 - February 2025

ಚಿಕ್ಕಮಗಳೂರು: ಆಸ್ಪತ್ರೆಗೆ ದಾಖಲಾಗಿದ್ದ ಆರೋಪಿ ಪರಾರಿ !

mk purnesh
13/01/2024

ಚಿಕ್ಕಮಗಳೂರು: ಇಲ್ಲಿನ ಆಸ್ಪತ್ರೆಗೆ ದಾಖಲಾಗಿದ್ದ ಕೊಲೆ ಯತ್ನದ ಆರೋಪಿ ಪರಾರಿಯಾಗಿರುವ ಘಟನೆ ನಡೆದಿದೆ.

ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಐಪಿಸಿ 504,326,307 ಕೊಲೆ ಯತ್ನ ಪ್ರಕರಣದ ಆರೋಪಿ ಎಂ .ಕೆ ಪೂರ್ಣೇಶ್ ನನ್ನು ಚಿಕ್ಕಮಗಳೂರು ನಗರದ ಮಲ್ಲೇಗೌಡ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು.

ಬಲಗಾಲಿಗೆ ಗಾಯವಾಗಿದ್ದು ಸೂಕ್ತ ಚಿಕಿತ್ಸೆಗೆ ದಾಖಲಿಸಿದ್ದ  ಆರೋಪೀ ಬೆಳಗಿನ ಜಾವ ಆಸ್ಪತ್ರೆಯಿಂದ ಪರಾರಿಯಾಗಿರುತ್ತಾನೆ.

ಆರೋಪಿ  ಕುಂಟುತ್ತಾ ನಡೆಯುತ್ತಿದ್ದು ಈತನು ಕಂಡುಬಂದಲ್ಲಿ ಅಥವಾ ಈತನ ಇರುವಿಕೆ ಬಗ್ಗೆ ಸುಳಿವು ಸಿಕ್ಕಲ್ಲಿ ಕೂಡಲೇ ಜಿಲ್ಲಾ ನಿಯಂತ್ರಣ ಕೊಠಡಿಗೆ ತಿಳಿಸುವಂತೆ ಜಿಲ್ಲಾ ರಕ್ಷಣಾಧಿಕಾರಿಗಳು ಮನವಿ ಮಾಡಿದ್ದಾರೆ.

ಮಾಹಿತಿ ಸಂಖ್ಯೆ: ಚಿಕ್ಕಮಗಳೂರು 9480805100, 8277991000, 08262-230540 08262-235608 ಅಥವಾ  ಪಿಎಸ್ಐ  ಬಾಳೆಹೊನ್ನೂರು ಠಾಣೆ 9480805158, 08266-250666

ಇತ್ತೀಚಿನ ಸುದ್ದಿ