ಮಗುವಿನ ಕೈಕಾಲು ಕಟ್ಟಿ ಬಿರುಬಿಸಿಲಿನಲ್ಲಿ ಮಲಗಿಸಿದ ಪಾಪಿ ತಾಯಿ!
ದೆಹಲಿ: ಮಗಳು ಹೋಮ್ ಮಾಡಲಿಲ್ಲ ಎನ್ನುವ ಕೋಪದಿಂದ ತಾಯಿಯೊಬ್ಬಳು ತನ್ನ 6 ವರ್ಷ ವಯಸ್ಸಿನ ಮಗಳ ಕೈ ಕಾಲು ಕಟ್ಟಿ ಬಿರುಬಿಸಿಲಿನಲ್ಲಿ ಟೆರೆಸ್ ನಲ್ಲಿ ಮಲಗಿಸಿದ ಅಮಾನವೀಯ ಘಟನೆ ಘಟನೆ ದೆಹಲಿಯ ಕಾರವಾರ ನಗರದಲ್ಲಿ ನಡೆದಿದೆ.
ದೆಹಲಿಯ ಬಿಸಿಲಿನ ಬೇಗೆಯಲ್ಲಿ ಮಗು ತಾಸುಗಟ್ಟಲೆ ಟೆರೇಸ್ ಮೇಲೆ ಮಲಗಿ ಅಳುತ್ತಿದ್ದು, ಮಗು ಅಳುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಬಾಲಕಿಯ ಕಾಲುಗಳು ಮತ್ತು ಕೈಗಳನ್ನು ಕಟ್ಟಲಾಗಿದ್ದರಿಂದ ಮಗುವಿಗೆ ಸ್ವಲ್ಪವೂ ಮಿಸುಕಾಡಲು ಸಾಧ್ಯವಾಗಿರಲಿಲ್ಲ.
ಮಗು ಜೋರಾಗಿ ಅಳುತ್ತಿರುವುದನ್ನು ಕಂಡ ಅಕ್ಕಪಕ್ಕದವರು ತಮ್ಮ ಮೊಬೈಲ್ ನಲ್ಲಿ ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ವೀಡಿಯೊ ವೈರಲ್ ಆಗುತ್ತಿದ್ದಂತೆ, ಘಟನೆಯ ಬಗ್ಗೆ ಕೆಲವರು ಪೊಲೀಸರಿಗೆ ದೂರು ನೀಡಿದ್ದಾರೆ.
ಸದ್ಯ ಆರೋಪಿ ತಾಯಿ ವಿರುದ್ಧ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಕೇರಳದಲ್ಲಿ ಪತ್ತೆಯಾದ ಜೀರುಂಡೆ ಜ್ವರ: ವಿದ್ಯಾರ್ಥಿ ಸಾವು
ಖ್ಯಾತ ನಟಿ ನಯನತಾರಾ, ವಿಘ್ನೇಶ್ ಶಿವ ಅದ್ದೂರಿ ವಿವಾಹ
ಕೋಲ್ಡ್ ಡ್ರಿಂಕ್ ನಲ್ಲಿ ಸತ್ತ ಹಲ್ಲಿ: ಮೆಕ್ ಡೊನಾಲ್ಡ್ಸ್ ಗೆ ವಿಧಿಸಿದ ದಂಡ ಎಷ್ಟು ಗೊತ್ತಾ?
ಪ್ರೇಯಸಿಯ ಮೇಲಿನ ಕೋಪದಿಂದ ಮ್ಯೂಸಿಯಮ್ ಗೆ ನುಗ್ಗಿ ಪ್ರಾಚೀನ ವಸ್ತುಗಳನ್ನು ಪುಡಿಗೈದ ಯುವಕ!