ಅಪಾರ್ಟ್ ಮೆಂಟ್ ನ ಲಿಫ್ಟ್ ನಲ್ಲಿ ಸಿಲುಕಿದ ಮಗು: ಉಸಿರುಗಟ್ಟಿ ಸಾವು

ಆಧುನಿಕ ತಂತ್ರಜ್ಞಾನಗಳು ಮಾನವ ಬದುಕನ್ನು ಸುಲಭಗೊಳಿಸಿದೆಯಾದರೂ ಅದರಿಂದ ಅನಾಹುತಗಳೂ ತಪ್ಪಿದ್ದಲ್ಲ. ತಂತ್ರಜ್ಞಾನಕ್ಕೆ ನಾವು ಹೆಚ್ಚು ಹೆಚ್ಚು ಒಗ್ಗಿಕೊಂಡಂತೆ ಅದರಿಂದಾಗುವ ಅಪಾಯಗಳಿಗೂ ನಾವು ಹೆಚ್ಚೆಚ್ಚು ಹತ್ತಿರವಾಗುತ್ತಿದ್ದೇವೆ ಎಂದೇ ಅರ್ಥ.
ಇದೀಗ ಹೈದರಾಬಾದ್ ನಿಂದ ಬಂದಿರುವ ಸುದ್ದಿಯೊಂದು ಇದನ್ನೇ ಸೂಚಿಸುತ್ತದೆ. ಇಲ್ಲಿನ ಮಕ್ತೂಬಾ ಅಪಾರ್ಟ್ ಮೆಂಟ್ ನ ಲಿಫ್ಟ್ ನಲ್ಲಿ ಸಿಲುಕಿದ ಮಗುವೊಂದು ದಾರುಣ ಅಂತ್ಯ ಕಂಡಿದೆ. ಆಸಿಫ್ ನಗರ್ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ರಾತ್ರಿ ಈ ಘಟನೆ ನಡೆದಿದೆ.
ಮೃತಪಟ್ಟ ನರೇಂದ್ರ ಎಂಬ ಬಾಲಕ ಲಿಫ್ಟ್ ನಲ್ಲಿ ಆಡುತ್ತಿದ್ದಾಗ ಈ ಘಟನೆ ನಡೆದಿದೆ. ಈ ಬಾಲಕ ವಾಚ್ ಮ್ಯಾನ್ ನ ಮಗ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಬಾಲಕನನ್ನು ಆಸ್ಪತ್ರೆಗೆ ಸಾಗಿಸಿದರೂ ಪ್ರಯೋಜನವಾಗಲಿಲ್ಲ.
ಕಳೆದ ತಿಂಗಳೂ ಇದೇ ಹೈದರಾಬಾದಿನಲ್ಲಿ ಇಂಥದ್ದೇ ಘಟನೆ ನಡೆದಿತ್ತು. ಶಾಂತಿನಗರದ ಅಪಾರ್ಟ್ಮೆಂಟ್ ನ ಲಿಫ್ಟ್ ನಲ್ಲಿ ಸಿಲುಕಿದ ಆರು ವಯಸ್ಸಿನ ಮಗು ದಾರುಣ ಅಂತ್ಯ ಕಂಡಿತ್ತು.
ಆದ್ದರಿಂದ ಹೆತ್ತವರು ಮಕ್ಕಳ ಬಗ್ಗೆ ಜಾಗರೂಕತೆಯನ್ನು ಪಾಲಿಸಬೇಕು ಮತ್ತು ಮಕ್ಕಳು ಲಿಫ್ಟ್ ಬಳಸದಂತೆ ನೋಡಿಕೊಳ್ಳಬೇಕು ಅಥವಾ ಮಕ್ಕಳೊಂದಿಗೆ ಹಿರಿಯರು ಜೊತೆ ಇರಬೇಕು ಎಂದು ಎಚ್ಚರಿಕೆ ನೀಡಲಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj