ಉರ್ದು ಭಾಷೆಯನ್ನ ಕಲಿಸಿ ಮಕ್ಕಳನ್ನು ಮೌಲಾನ ಮಾಡುತ್ತಾರೆ: ಯುಪಿ ಸಿಎಂ ಯೋಗಿ ವಿವಾದಾತ್ಮಕ ಹೇಳಿಕೆ

ವಿಧಾನಸಭೆಯಲ್ಲಿ ಮಾತಾಡುವ ಭಾಷೆಗಳಲ್ಲಿ ಉರ್ದು ಭಾಷೆಯನ್ನು ಕೂಡ ಸೇರಿಸಬೇಕು ಎಂಬ ಸಮಾಜವಾದಿ ಪಕ್ಷದ ಆಗ್ರಹವನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ತಿರಸ್ಕರಿಸಿದ್ದಾರೆ ಉರ್ದು ಭಾಷೆಯನ್ನ ಕಲಿಸಿ ಮಕ್ಕಳನ್ನು ಮೌಲಾನ ಮಾಡುವುದು ಅವರ ಉದ್ದೇಶ ಎಂದು ಯೋಗಿ ಪ್ರತಿಕ್ರಿಯಿಸಿದ್ದಾರೆ. ವಿಧಾನಸಭೆಯಲ್ಲಿ ಬಜೆಟ್ ಅಧಿವೇಶನದಲ್ಲಿ ಮಾತಾಡುತ್ತಾ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.
ಅಖಿಲೇಶ್ ಯಾದವ್ ಅವರು ತನ್ನ ಮಕ್ಕಳನ್ನು ಇಂಗ್ಲಿಷ್ ಮೀಡಿಯಂ ಶಾಲೆಗೆ ಕಳುಹಿಸಿಕೊಡುತ್ತಾರೆ. ಉಳಿದವರ ಮಕ್ಕಳು ಉರ್ದು ಕಲಿತು ಮೌಲಾನ ಆಗಲಿ ಎಂದು ಅವರು ಆಗ್ರಹಿಸುತ್ತಿದ್ದಾರೆ ಎಂದು ಯೋಗಿ ಹೇಳಿದ್ದಾರೆ.
ಅಂದಹಾಗೆ ಭೋಜಪುರಿ ಬ್ರಿಜ್ ಅವಧಿ ಬುಂಡೇಲಿ ಮುಂತಾದ ಸ್ಥಳೀಯ ಭಾಷೆಗಳಲ್ಲಿ ವಿಧಾನಸಭಾ ಕಲಾಪಗಳನ್ನು ನಡೆಸಲು ಸರ್ಕಾರ ಈ ಮೊದಲು ತೀರ್ಮಾನಿಸಿತ್ತು.
ವಿಧಾನಸಭೆಯಲ್ಲಿ ಇಂಗ್ಲಿಷ್ ಭಾಷೆಯನ್ನು ಬಳಸುವುದಕ್ಕೆ ಸಮಾಜವಾದಿ ಪಕ್ಷದ ನಾಯಕ ಮಾತಾ ಪ್ರಸಾದ್ ಪಾಂಡೆ ಅವರು ವಿರೋಧ ವ್ಯಕ್ತಪಡಿಸಿದ್ದರು.. ಇಂಗ್ಲೀಷ್ ಭಾಷೆಯನ್ನು ಬಳಸುವ ಮೂಲಕ ಹಿಂದಿಯನ್ನು ದುರ್ಬಲಗೊಳಿಸಲಾಗುತ್ತಿದೆ ಎಂದವರು ಹೇಳಿದ್ದರು.. ಒಂದು ವೇಳೆ ಇಂಗ್ಲೀಷ್ ಭಾಷೆಯನ್ನು ಬಳಸುವುದಾದರೆ ಉರ್ದು ಭಾಷೆಯನ್ನೂ ಬಳಸಬೇಕು ಎಂದವರು ಆಗ್ರಹಿಸಿದ್ದರು. ಅವರ ಹೇಳಿಕೆಗೆ ಯೋಗಿ ಇದೀಗ ಈ ಪ್ರತಿಕ್ರಿಯೆ ನೀಡಿದ್ದಾರೆ.
ವಿಶೇಷ ಏನೆಂದರೆ ಉತ್ತರ ಪ್ರದೇಶದ ವಿಧಾನಸಭಾ ಕಲಾಪದಲ್ಲಿ ಹಿಂದಿ ಭಾಷೆಯನ್ನು ಬಳಸಲಾಗುತ್ತಿದ್ದು ಅದೇ ವೇಳೆ ಸ್ಥಳೀಯ ನಾಲ್ಕು ಭಾಷೆಗಳು ಮತ್ತು ಇಂಗ್ಲಿಷ್ ಭಾಷೆಯನ್ನು ಕೂಡ ಬಳಸಲಾಗುತ್ತಿದೆ. ಆದರೆ ಉರ್ದುವಿಗೆ ಮಾತ್ರ ಅವಕಾಶ ನಿರಾಕರಿಸಲಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj